Power Cut in Bangalore : ಬೆಂಗಳೂರಿನಲ್ಲಿ ಏ.12, 13ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ

ಬೆಂಗಳೂರು, ಏಪ್ರಿಲ್ 12: ರಾಜಧಾನಿ ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಮಂಗಳವಾರ ಮತ್ತು ಬುಧವಾರ (ಏಪ್ರಿಲ್ 12, 13)ದಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಮಾಹಿತಿ ನೀಡಿದೆ.

ವಿದ್ಯುತ್ ಸೇವೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ಇತರ ಕೆಲಸಗಳು ನಡೆಯುತ್ತಿರುವುದರಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಯಾವ ಏರಿಯಾದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಆಗಲಿದೆ ಎಂಬುದರ ಮಾಹಿತಿಯನ್ನು ಬೆಸ್ಕಾಂ ನೀಡಿದೆ. ಬೆಂಗಳೂರು ಮಹಾನಗರದಲ್ಲಿ ವಿದ್ಯುತ್ ಕಡಿತಗೊಳ್ಳುವುದು ಸಾಮಾನ್ಯ ಆಗಿದೆ.

ರಾಜ್ಯದಲ್ಲಿ ಬೇಸಿಗೆಕಾಲ ಇದ್ದು, ಮಧ್ಯಾಹ್ನದ ವೇಳೆಗೆ ಬಿಸಿಲು ಹೆಚ್ಚಾಗಿ ಹೊರಗೆ ಕಾಲಿಡದಷ್ಟು ತೀವ್ರ ಸೆಖೆ ಇರಲಿದೆ. ಈ ವೇಳೆ ಫ್ಯಾನ್, ಎಸಿ ಇಲ್ಲದೇ ಹೇಗಿರುವುದು ಎಂದು ಜನ ಗೋಳಾಡುತ್ತಿದ್ದಾರೆ. ಇದೇ ವೇಳೆ ಎರಡು ದಿನ ಬೆಳಗ್ಗೆ 10ರಿಂದ ಸಂಜೆ 6ರ ನಡುವೆ ಸಂಪರ್ಕ ಕಡಿತವಾಗಲಿದೆ.

Bengaluru To Face Power Cuts on April 12th And April 13th; Full Details

ಏಪ್ರಿಲ್ 12ರಂದು ಎಲ್ಲೆಲ್ಲಿ ವಿದ್ಯುತ್ ಕಡಿತ
ಬೆಂಗಳೂರು ಪಶ್ಚಿಮ ವಲಯದಲ್ಲಿ ಬೆಳಗ್ಗೆ 10:30 ರಿಂದ 5:30 ರವರೆಗೆ ವಿದ್ಯುತ್ ಕಡಿತವಾಗಲಿದೆ. ಹೆಗ್ಗನಹಳ್ಳಿ ಕ್ರಾಸ್, ಸ್ಕೈ ಲೈನ್ ಬಿಬಿಎಂಪಿ ಪಾರ್ಕ್ ಬಳಿ ನಂಜರಸಪ್ಪ ಲೇಔಟ್, ಸಾಣಕ್ಕಿ ಬಯಲು, ರಾಮನ್ ಕಾಲೇಜು ರಸ್ತೆ, ವೃಷಭಾವತಿ ನಗರ, ಮಲ್ಲತ್ತಳ್ಳಿ ಬಡಾವಣೆ, ಪೂರ್ವ- ಪಶ್ಚಿಮ ಕಾಲೇಜು ರಸ್ತೆ, ದ್ವಾರಕಾ ಬಾಸಾ ರಸ್ತೆ, ಕೆಎಲ್‌ಇ ಕಾಲೇಜು ರಸ್ತೆ, ಬಿಡಿಎ ಪ್ರದೇಶ ಬ್ಲಾಕ್ 1, ವಿಎಂ ನಗರ, ಎಚ್‌ವಿಆರ್ ಲೇಔಟ್, ರಾಜರಾಜೇಶ್ವರಿ ವಿಭಾಗದ ವ್ಯಾಪ್ತಿಯ ಮಾರುತಿ ನಗರದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಇನ್ನು ಬೆಂಗಳೂರು ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4:30 ರವರೆಗೆ ವಿದ್ಯುತ್ ಕಡಿತವಾಗಲಿದೆ. ರಾಮಮೂರ್ತಿ ನಗರ, ಜೈಭೀಮ್ ನಗರ ಬಸ್ ನಿಲ್ದಾಣದ ಸಮೀಪವಿರುವ ಪ್ರದೇಶಗಳು, ಕೆ.ಜಿ. ಪುರ ಮುಖ್ಯರಸ್ತೆ, ಉದಯನಗರ ಮತ್ತು ಕೋಡಿಹಳ್ಳಿ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಡಿತವಾಗಲಿದೆ.

Bengaluru To Face Power Cuts on April 12th And April 13th; Full Details

ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದದು, ಮಣಿಪಾಲ ಕೌಂಟಿ ರಸ್ತೆ, ಎಇಸಿಎಸ್ ಲೇಔಟ್, ಸುಭಾಷ್ ನಗರ, ನೀಲಾಂದ್ರಿ ರಸ್ತೆ, ಮಾರತ್ತಹಳ್ಳಿ, ಕಾವೇರಿ ಲೇಔಟ್, ವಿನಾಯಕ ಬಡಾವಣೆ, ಬಾಲಾಜಿ ಲೇಔಟ್, ತುಳಸಿ ಥಿಯೇಟರ್ ರಸ್ತೆ, ಸೇಂಟ್ ಜಾನ್ಸ್ ಹಾಸ್ಟೆಲ್, ಕೋರಮಂಗಲ 2ನೇ ಹಂತ, ಚಿಕ್ಕಾಡುಗೋಡಿ, ಜೈ ಭೀಮ ನಗರ, ಜೆಸಿ ಕೈಗಾರಿಕಾ ಪ್ರದೇಶ, ವಿಎಂ ನಗರ ಮತ್ತು ಎಚ್‌ವಿಆರ್ ಲೇಔಟ್‌ನಲ್ಲಿ ಕರೆಂಟ್ ಕಟ್ ಆಗಲಿದೆ.

ಬೆಂಗಳೂರು ಉತ್ತರ ವಲಯದಲ್ಲಿ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಸಿಎಂಟಿಐ, ಸ್ಪರ್ಶ ಆಸ್ಪತ್ರೆ, ಹನುಮಾನ್ ಲೇಔಟ್, ದ್ವಾರಕಾ ನಗರ, ಪೈಪ್‌ಲೈನ್ ರಸ್ತೆ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಲುಡುನಗರ, ಸಿಲ್ವೆಪುರ, ರಾಘವೇಂದ್ರಧಾಮ, ಕುಂಬಾರಹಳ್ಳಿ, ಹುರಳಿ ಚಿಕ್ಕನಹಳ್ಳಿ, ಹೆಸರಘಟ್ಟದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ.

Bengaluru To Face Power Cuts on April 12th And April 13th; Full Details

ನಾಳೆ (ಏಪ್ರಿಲ್ 13) ಎಲ್ಲೆಲ್ಲಿ ವಿದ್ಯುತ್ ಕಡಿತವಾಗಲಿರುವ ಪ್ರದೇಶಗಳು
ಬೆಂಗಳೂರು ಪಶ್ಚಿಮ ವಲಯ ಬುಧವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಹೆಗ್ಗನಹಳ್ಳಿ ಕ್ರಾಸ್, ಎಚ್‌ವಿಆರ್ ಲೇಔಟ್, ಸಣ್ಣಕ್ಕಿ ಬಯಲು, ರಾಮನ್ ಕಾಲೇಜು ರಸ್ತೆ, ವೃಷಭಾವತಿ ನಗರ, ಮಲ್ಲತ್ತಳ್ಳಿ ಬಡಾವಣೆ, ಪೂರ್ವ ಪಶ್ಚಿಮ ಕಾಲೇಜು ರಸ್ತೆ, ದ್ವಾರಕಾ ಬಾಷಾ ರಸ್ತೆ, ಕೆಎಲ್‌ಇ ಕಾಲೇಜು ರಸ್ತೆ, ವಿಘ್ನೇಶ್ವರ ನಗರ, ನಂದಗೋಕುಲ ಲೇಔಟ್, ಚಂದ್ರ ಲೇಔಟ್, ಬಾಪೂಜಿ ಲೇಔಟ್‌ನಲ್ಲಿ ವಿದ್ಯುತ್ ಇರುವುದಿಲ್ಲ.

ಇನ್ನು ಬೆಂಗಳೂರು ದಕ್ಷಿಣ ವಲಯದಲ್ಲಿ ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ದೊಡ್ಡಮಂಗಲ, ನೀಲಾದ್ರಿ ರಸ್ತೆ, ಶಾರದಾನಗರ ಮತ್ತು ಜೆಸಿ ಇಂಡಸ್ಟ್ರಿಯಲ್ ಲೇಔಟ್‌ನಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ.

ಬೆಂಗಳೂರು ಉತ್ತರ ವಲಯ ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪೀಣ್ಯ ಪೊಲೀಸ್ ಠಾಣೆ ಮತ್ತು ಸುತ್ತಮುತ್ತ ಹಾಗೂ ಅಮರಾವತಿ ಲೇಔಟ್ ಮತ್ತು ಸುತ್ತಮುತ್ತ ವಿದ್ಯುತ್ ಕಡಿತವಾಗಲಿದೆ.

Recommended Video

      ರಿಕಿ ಪಾಂಟಿಂಗ್ ಕೋಪ ನೋಡಿ ಎಲ್ರೂ ಶಾಕ್!! |Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+