ಬಿಎಂಟಿಸಿ: ಕಂಡೆಕ್ಟರ್ ಗಳು ಇನ್ನು ಸರ್ಕಾರದ ಕಣ್ತಪ್ಪಿಸಲು ಸಾಧ್ಯವಿಲ್ಲ!

ಬೆಂಗಳೂರು, ಫೆಬ್ರವರಿ 10 : ಆದಾಯ ಸೋರಿಕೆಯನ್ನು ತಡೆಯುವ ಸಲುವಾಗಿ ಬೆಂಗಳೂರು ಮಹಾನಗರ ಸಾರಿಗೆಯ ಎಲ್ಲ ಬಸ್‌ಗಳಲ್ಲಿ ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ ವ್ಯವಸ್ಥೆ ಯನ್ನು ಅಳವಡಿಸಲು ಸಿದ್ಧತೆ ನಡೆಸಿದೆ. ಆ ಮೂಲಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದೆ.

ಅದರೊಂದಿಗೆ, ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ ವ್ಯವಸ್ಥೆಯಡಿಯಲ್ಲಿಯೇ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರವು ನಿರ್ಭಯಾ ನಿಧಿಯಡಿ ನೀಡುವ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಪ್ರಯಾಣಿಕರಿಗೆ ಉಚಿತ ವೈಫೈ ಮತ್ತು ಮನರಂಜನೆ ಒದಗಿಸಲು ಉದ್ದೇಶಿಸಲಾಗಿದೆ.

To curb leakage of income , APC system in BMTC buses

ಬಿಎಂಟಿಸಿಯು 6546 ಬಸ್‌ಗಳ ಬಲ ಹೊಂದಿದ್ದು , ಈ ಪೈಕಿ ನಿತ್ಯ 6133 ಬಸ್‌ಗಳು ರಸ್ತೆಗಿಳಿಯುತ್ತಿವೆ. ಪ್ರತಿದಿನ ಅಂದಾಜು 52 ಲಕ್ಷ ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಟಿಕೆಟ್ ವಿತರಣೆ ಆಧಾರದ ಮೇಲೆ ಪ್ರಯಾಣಿಕರ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತಿದೆ. ಆದರೆ, ಯಾವ್ಯಾವ ಮಾರ್ಗಗಳಲ್ಲಿಎಷ್ಟು ಮಂದಿ ಬಸ್ಸೇರುತ್ತಾರೆ, ಎಲ್ಲೆಲ್ಲಿ ಇಳಿಯುತ್ತಾರೆ ಎಂಬುದರ ಬಗ್ಗೆ ನಿಖರವಾದ ಅಂಕಿ ಅಂಶಗಳಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+