• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಪ್ಪು ಜಯಂತಿ ರದ್ದು: ಸದನದಲ್ಲಿ ವಿಪಕ್ಷಗಳ ಆಕ್ರೋಶ

|
   ಸದನದಲ್ಲಿ ವಿಪಕ್ಷಗಳ ಆಕ್ರೋಶ, ಕೋಲಾಹಲ | Oneindia Kannada

   ಬೆಂಗಳೂರು, ಆಗಸ್ಟ್ 01: ಟಿಪ್ಪು ಜಯಂತಿಯನ್ನು ಸರ್ಕಾರ ರದ್ದು ಮಾಡಿರುವ ವಿಷಯ ಸದನದಲ್ಲಿ ಇಂದು ಕೋಲಾಹಲ ಎಬ್ಬಿಸಿತು.

   ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ಟಿಪ್ಪು ಜಯಂತಿಯನ್ನು ರದ್ದು ಮಾಡಿದ ಸರ್ಕಾರದ ಕ್ರಮವನ್ನು ಖಂಡಿಸಿದರು. ತಾವು ಮಾತನಾಡುವ ವೇಳೆಯಲ್ಲಿ ಮುಖ್ಯಮಂತ್ರಿ ಅವರು ಉಪಸ್ಥಿತರಿರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

   ಇನ್ಮೇಲೆ ಟಿಪ್ಪು ಜಯಂತಿ ಇಲ್ಲ! ಬಿಜೆಪಿ ಸರ್ಕಾರದ ಮಹತ್ವದ ನಿರ್ಣಯ ಇನ್ಮೇಲೆ ಟಿಪ್ಪು ಜಯಂತಿ ಇಲ್ಲ! ಬಿಜೆಪಿ ಸರ್ಕಾರದ ಮಹತ್ವದ ನಿರ್ಣಯ

   ನೊಟೀಸ್ ನೀಡದೇ ಟಿಪ್ಪು ಜಯಂತಿ ಬಗ್ಗೆ ಮಾತನಾಡುತ್ತಿರುವುದಕ್ಕೆ ಸ್ಪೀಕರ್ ಕಾಗೇರಿ ಅವರು ಆಕ್ಷೇಪ ವ್ಯಕ್ತಪಡಿಸದರು, ಆದರೆ 'ಎಲ್ಲ ವಿಷಯವನ್ನು ನೊಟೀಸ್ ನೀಡಿಯೇ ಮಾತನಾಡಬೇಕು ಎಂಬ ನಿಯಮವಿಲ್ಲ' ಎಂದು ಸಿದ್ದರಾಮಯ್ಯ ವಾದಿಸಿದರು.

   ಸಿದ್ಧಾರ್ಥ ಅವರ ಅಂತಿಮಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಯಡಿಯೂರಪ್ಪ ಅವರು ತೆರಳಿದ್ದಾರೆ, ಸದನದ ಕಾರ್ಯವಿಧಾನ ಪೂರ್ಣಗೊಳಿಸಿದ್ದಾರೆ ಎಂದು ಸ್ಪೀಕರ್ ಅವರು ಯಡಿಯೂರಪ್ಪ ಅವರು ಸದನದಿಂದ ಹೊರಟ ಬಗ್ಗೆ ಮಾಹಿತಿ ನೀಡಿದರು.

   ಮುಸ್ಲಿಮರು ಮೇಲೆ ದ್ವೇಷಕ್ಕೆ ಟಿಪ್ಪು ಜಯಂತಿ ರದ್ದು: ಸಿದ್ದರಾಮಯ್ಯ ಆರೋಪ ಮುಸ್ಲಿಮರು ಮೇಲೆ ದ್ವೇಷಕ್ಕೆ ಟಿಪ್ಪು ಜಯಂತಿ ರದ್ದು: ಸಿದ್ದರಾಮಯ್ಯ ಆರೋಪ

   ಆದರೆ ಇದಕ್ಕೆ ತೃಪ್ತವಾಗದ ಸಿದ್ದರಾಮಯ್ಯ ಅವರು, ಇನ್ನೂ ಸಚಿವ ಸಂಪುಟ ರಚನೆ ಆಗಿಲ್ಲ, ಸಿಎಂ ಸಹ ಸದನದಲ್ಲಿ ಇಲ್ಲವೆಂದ ಮೇಲೆ ನಾವು ಯಾರನ್ನು ಕುರಿತು ಮಾತನಾಡಬೇಕು ಎಂದು ಸಿದ್ದರಾಮಯ್ಯ ಏರಿದ ದನಿಯಲ್ಲಿ ಆಕ್ಷೇಪಣೆ ಎತ್ತಿದರು. ಇದಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್ ಸದಸ್ಯರು ದನಿಗೂಡಿಸಿದರು.

   ಗದ್ದಲ ಹೆಚ್ಚಾದ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯನ್ನು ಅನಿರ್ದಾಷ್ಟವಧಿಗೆ ಮುಂದೂಡಿದರು.

   English summary
   Congress members express protest againt government for canceling Tipu Jayanthi celebration.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X