ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದುವರೆದ ರಾಜೀನಾಮೆ ಪರ್ವ: ಮತ್ತೆ ಮೂವರು ಕೈ ಶಾಸಕರ ರಾಜೀನಾಮೆ?

|
Google Oneindia Kannada News

Recommended Video

ಮುಂದುವರೆದ ರಾಜೀನಾಮೆ ಪರ್ವ

ಬೆಂಗಳೂರು, ಜುಲೈ 3: ಹಲವು ದಿನಗಳ ಬಳಿಕ ಕಾಂಗ್ರೆಸ್‌ನಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭಗೊಂಡಿದೆ. ಮೊದಲು ಕೇವಲ ಇದೆಲ್ಲಾ ಒಂದು ನಾಟಕ ಎಂದು ಹೇಳಲಾಗುತ್ತಿತ್ತು, ಆದರೆ ಈ ಬಾರಿ ಅದೆಲ್ಲವೂ ಸತ್ಯವಾಗಿದೆ.

ಈಗಾಗಲೇ ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು ಅವರು ಯಾವ ಪಕ್ಷಕ್ಕೆ ಸೇರುತ್ತಾರೆ, ಅಥವಾ ಅವರು ರಾಜಕೀಯದಿಂದಲೇ ದೂರ ಉಳಿಯುತ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಇಂದಿನ ಬೆಳವಣಿಗೆಯೆಲ್ಲವನ್ನೂ ಗಮನಿಸಿದರೆ ಇದೆಲ್ಲಕ್ಕೂ ಶೀಘ್ರ ಉತ್ತರ ಸಿಗಲಿದೆ.

ರಮೇಶ್ ಜಾರಕಿಹೊಳಿ ಮುಂದೆ 4 ಪ್ರಶ್ನೆ ಇಟ್ಟ ಅತೃಪ್ತ ಶಾಸಕರು!ರಮೇಶ್ ಜಾರಕಿಹೊಳಿ ಮುಂದೆ 4 ಪ್ರಶ್ನೆ ಇಟ್ಟ ಅತೃಪ್ತ ಶಾಸಕರು!

ಇಂದು ಮತ್ತೆ ಮೂವರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂಬ ಸುದ್ದಿ ಕೇಳಿಬಂದಿದೆ.ಮೂಲಗಳ ಪ್ರಕಾರ ಇವತ್ತು ಮೂವರು ಶಾಸಕರು, ನಾಳೆ ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇವತ್ತು ರಾಜೀನಾಮೆ ಕೊಡಬಹುದು ಎಂದು ಊಹಿಸಲಾಗಿರುವ ಶಾಸಕರ ಪಟ್ಟಿಯಲ್ಲಿ ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಜಾರಕಿಹೊಳಿ ಆಪ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೆಸರಿದೆ.

ಸೋಮವಾರ ವಿಜಯನಗರ ಶಾಸಕ ಆನಂದ್ ಸಿಂಗ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು.ಆಷಾಢ ಅಮಾವಾಸ್ಯೆ, ಜೊತೆಗೆ ಸೂರ್ಯಗ್ರಹಣ. ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆಗೂ ಮುಹೂರ್ತ ನೋಡುವ ಶಾಸಕರು ಈಗ ರಾಜೀನಾಮೆಗೂ ಇದೆಲ್ಲವನ್ನು ನೋಡುತ್ತಿದ್ದಾರೆ ಎನಿಸುತ್ತಿದೆ.

ರಮೇಶ್ ಜಾರಕಿಹೊಳಿ ರಾಜೀನಾಮೆಗೆ ತ್ರಿ ಈಡಿಯಟ್ಸ್‌ ಕಾರಣ!ರಮೇಶ್ ಜಾರಕಿಹೊಳಿ ರಾಜೀನಾಮೆಗೆ ತ್ರಿ ಈಡಿಯಟ್ಸ್‌ ಕಾರಣ!

ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‌ ಗೌಡ ಪಾಟೀಲ್ ಕೂಡಾ ರಾಜೀನಾಮೆ ನೀಡಬಹುದು ಎನ್ನಲಾಗ್ತಿದೆ. ಇಷ್ಟು ಮಂದಿಯೂ ರಾಜೀನಾಮೆ ನೀಡಿದರೆ ಒಟ್ಟು 7 ಮಂದಿ ರಾಜೀನಾಮೆ ನೀಡಿದಂತಾಗುತ್ತದೆ. ಆದರೆ ಕಾಂಗ್ರೆಸ್‌ನವರು ಹೇಳಿದಂತೆ ಬಿಜೆಪಿ ಶಾಸಕರು ಕೂಡ ಅವರ ಅಂಗೈನಲ್ಲಿರುವುದು ಸತ್ಯವಾಗಿದ್ದರೆ ಅಲ್ಲಿ ಇನ್ನೆಷ್ಟು ಮಂದಿ ರಾಜೀನಾಮೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಯಾರು ರಾಜೀನಾಮೆ ಕೊಟ್ಟರೂ ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗಲ್ಲ

ಯಾರು ರಾಜೀನಾಮೆ ಕೊಟ್ಟರೂ ಸಮ್ಮಿಶ್ರ ಸರ್ಕಾರಕ್ಕೆ ಏನೂ ಆಗಲ್ಲ

ಇದುವರೆಗೂ ಆನಂದ್ ಸಿಂಗ್ ಮಾತ್ರ ರಾಜೀನಾಮೆ ನೀಡಿದ್ದಾರೆ, ಅದರ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ, ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ, ಯಾರು ರಾಜೀನಾಮೆ ಕೊಟ್ಟರೂ ಪಕ್ಷಕ್ಕೆ ಏನೂ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿಯನ್ನು ಉಚ್ಛಾಟಿಸುವಂತೆ ಸತೀಶ್ ಒತ್ತಾಯ

ರಮೇಶ್ ಜಾರಕಿಹೊಳಿಯನ್ನು ಉಚ್ಛಾಟಿಸುವಂತೆ ಸತೀಶ್ ಒತ್ತಾಯ

ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಇರುವ ದ್ವೇಷದ ಕಿಡಿ ಮತ್ತೊಮ್ಮೆ ಬೀದಿಗೆ ಬಂದಿದೆ. ರಮೇಶ್ ಜಾರಕಿಹೊಳಿಯನ್ನು ಉಚ್ಛಾಟಿಸುವಂತೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್‌ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಅವರ ಮೇಲೆ ಪ್ರಹಾರ ಆರಂಭಿಸಿದ್ದಾರೆ.

ಯಾರ್ಯಾರು ರಾಜೀನಾಮೆ ಸಾಧ್ಯತೆ?

ಯಾರ್ಯಾರು ರಾಜೀನಾಮೆ ಸಾಧ್ಯತೆ?

ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‌ ಗೌಡ ಪಾಟೀಲ್ ಕೂಡಾ ರಾಜೀನಾಮೆ ನೀಡಬಹುದು ಎನ್ನಲಾಗ್ತಿದೆ. ಇಷ್ಟು ಮಂದಿಯೂ ರಾಜೀನಾಮೆ ನೀಡಿದರೆ ಒಟ್ಟು 7 ಮಂದಿ ರಾಜೀನಾಮೆ ನೀಡಿದಂತಾಗುತ್ತದೆ.

ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಜಾರಕಿಹೊಳಿ ಆಪ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೆಸರಿದೆ.

ಈಗ ರಾಜೀನಾಮೆ ನೀಡಿರುವವರು ಯಾರು?

ಈಗ ರಾಜೀನಾಮೆ ನೀಡಿರುವವರು ಯಾರು?

ಸೋಮವಾರ ವಿಜಯನಗರ ಶಾಸಕ ಆನಂದ್ ಸಿಂಗ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಆದರೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ ಎಂದು ಯಾರೂ ಒಪ್ಪಿಕೊಳ್ಳಳು ತಯಾರಿಲ್ಲ. ಆಷಾಢ ಅಮಾವಾಸ್ಯೆ, ಜೊತೆಗೆ ಸೂರ್ಯಗ್ರಹಣ. ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆಗೂ ಮುಹೂರ್ತ ನೋಡುವ ಶಾಸಕರು ಈಗ ರಾಜೀನಾಮೆಗೂ ಇದೆಲ್ಲವನ್ನು ನೋಡುತ್ತಿದ್ದಾರೆ ಎನಿಸುತ್ತಿದೆ.

English summary
According to sources three more mlas from Congress may resign today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X