Bengaluru: 2023ರ ರಸ್ತೆ ಅಪಘಾತ, ಸಾವಿನ ಸಂಖ್ಯೆ ಎಷ್ಟು? ಮಾಹಿತಿ ಬಿಡುಗಡೆ
ಬೆಂಗಳೂರು, 27: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ವೇಗದ ಚಾಲನೆ, ಪಾನಮತ್ತ ಚಾಲನೆ, ಚಾಲನೆ ವೇಳೆ ಮೊಬೈಲ್ ಬಳಕೆ ಹಾಗೂ ಇನ್ನಿತರ ಕಾರಣಗಳಿಂದ ಉಂಟಾಗುತ್ತಿದ್ದ ರಸ್ತೆ ಅಪಘಾತದಲ್ಲಿ ಕೊಂಚ ಇಳಿಕೆ ಆಗಿದೆ. ಹಾಗಾದರೆ ನಗರದಲ್ಲಿ ಸದರಿ ವರ್ಷ ಮತ್ತು ಹಿಂದಿನ ವರ್ಷ ಆದ ರಸ್ತೆ ಅಪಘಾತ, ಸಾವು ನೋವು ಸಂಖ್ಯೆಗಳ ಮಾಹಿತಿ ಇಲ್ಲಿ ತಿಳಿಯೋಣ.
ವಿಶ್ವದಲ್ಲಿಯೇ ಎರಡನೇ ಅತ್ಯಧಿಕ ಟ್ರಾಫಿಕ್ ಹೊಂದಿರುವ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ಪ್ರಸಕ್ತ 2023 ರಲ್ಲಿ ನಗರದಲ್ಲಿ ಒಟ್ಟು 3,099 ರಸ್ತೆ ಅಪಘಾತಗಳು ಘಟಿಸಿವೆ. ಇದರಲ್ಲಿ ಸುಮಾರು ಸುಮಾರು 501 ಮಂದಿ ಸಾವಿಗೀಡಾಗಿದ್ದಾರೆ. ಘಟನೆಯಿಂದ 2,500ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು (BTP) ಅಧಿಕೃತ ಮಾಹಿತಿ ಬಹಿರಂಗಪಡಿಸಿದ್ದಾರೆ.

ಇನ್ನೂ ಕಳೆದ ವರ್ಷ 2022ರಲ್ಲಿನ ಸಾವು ನೋವು, ಅಫಘಾತಗಳ ವಿವರ ಸಹ ದೊರೆತಿದೆ. ಹಿಂದಿನ ವರ್ಷ ಬೆಂಗಳೂರಿನಲ್ಲಿ 3,822 ರಸ್ತೆ ಅಪಘಾತಗಳು ಜರುಗಿದ್ದವು, ಈ ಅವಘಡಗಳಲ್ಲಿ 750ಕ್ಕೂ ಅಧಿಕ ಮಂದಿ ಉಸಿರು ಚೆಲ್ಲಿದ್ದಾರೆ. ಇಷ್ಟು ಮಂದಿಯ ದುರ್ಮರಣಕ್ಕೆ ನಿರ್ಲಕ್ಷ್ಯ ವಾಹನ ಚಾಲನೆ, ಅತಿವೇಗ, ಸಂಚಾರ ನಿಯಮಗಳ ಕೊರತೆ ಹಾಗೂ ರಸ್ತೆಗುಂಡಿಗಳಿಂದಲೂ ಅನೇಕರ ಪ್ರಾಣಪಕ್ಷಿ ಹಾರಿ ಹೋಗಿದೆ. ಇನ್ನು ಸಹ ರಸ್ತೆ ಗುಂಡಿಗಳಿಂದ ಅಪಘಾತಗಳು ಸಂಭವಿಸುತ್ತಲೇ ಇವೆ.
ವೇಗದ ಚಾಲನೆ ಮಾಡದಂತೆ ಜಾಗೃತಿ
ಎಷ್ಟೇ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ತಿಳಿಸಿದರೂ ಸಹ, ಅಗತ್ಯ ಕ್ರಮಗಳು ಜಾರಿ ಮಾಡಿದ್ದರೂ ಸಹ ಅಪಘಾತಗಳು ಮುಂದುವರಿದಿವೆ. ಟ್ರಾಫಿಕ್ ನಿಯಮಗಳು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ಇನ್ನಿತರ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಸಂಚಾರ ಪೊಲೀಸ್ ವಿಭಾಗ ತಿಳಿಸಿದೆ.
ವೇಗದ ಚಾಲನೆ ಮತ್ತು ಅಜಾಗರೂಕವಾಗಿ ನಿರ್ಲಕ್ಷ್ಯ ವಹಿಸಿ ಮಾಡುವ ವಾಹನ ಚಾಲನೆ ಹಾಗೂ ಪಾನಮತ್ತ ಚಾಲನೆಯ ಅಂಶಗಳ ಆಧಾರದ ಮೇಲೆ ಪ್ರಕರಣಗಳು ಬದಲಾಗುತ್ತವೆ. ಆದ್ದರಿಂದ ವಾಹನ ಸವಾರರು ಚಲಿಸುವಾಗ ವೇಗದ ಬಗ್ಗೆ ಅರಿವಿರಬೇಕು. ಎಚ್ಚರಿಕೆಯಿಂದ ವಾಹನ ಚಲಾಯಿಸುವ ಮೂಲಕ ನಿಮ್ಮ ಹಾಗೂ ನಿಮ್ಮ ಎದುರಿಗಿನ ಜೀವ ರಕ್ಷಣೆಗೆ ಸಹಕರಿಸಬೇಕು. ಅಪಘಾತ ತಡೆಯಲು ಸಹಕರಿಸಬೇಕು ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು.

'ಶಾಲೆಗೆ ಸುರಕ್ಷಿತ ಮಾರ್ಗ' ಕಾರ್ಯಕ್ರಮ
ಶಿಕ್ಷಣ ಮತ್ತು ಸಾರಿಗೆ ಇಲಾಖೆ ಸಹಯೋಗದಲ್ಲಿ 'ಶಾಲೆಗೆ ಸುರಕ್ಷಿತ ಮಾರ್ಗ' ಕಾರ್ಯಕ್ರಮದ ಮಹತ್ವ ಕುರಿತು ಅವರು ಪ್ರಸ್ತಾಪಸಿದಿರು. ಈ ಯೋಜನೆಯಡಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಮತ್ತು ಶಾಲೆಗೆ ಸುಧಾರಿತ ಮಾರ್ಗಗಳನ್ನು ರಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಸುರಕ್ಷತೆ, ಪಾದಾಚಾರಿ ರಕ್ಷಣೆಗೆ ಹೆಚ್ಚಿಸಲು ಶ್ರಮಿಸಲಾಗುವುದು.
ಅಪಘಾತಗಳಿಗೆ ಮೂಲ ಕಾರಣವಾಗುವ ಅತೀ ವೇಗದ ಚಾಲನೆ ತಡೆಗೆ/ಪತ್ತೆಹಚ್ಚಲು ಕೃತಕ ಬುದ್ದಿಮತ್ತೆ (AI) ತಂತ್ರಜ್ಞಾನ ಆಧಾರಿತ ಸಲಕರಣೆ ಅಳವಡಿಸಿದ್ದೇವೆ. ಇನ್ನು ರಸ್ತೆಗಳಲ್ಲಿ ಅವಘಡ, ಆಚಾತುರ್ಯಗಳು ಸಂಭವಿಸಿದಲ್ಲಿ ಜೀವ ರಕ್ಷಣೆ ತುರ್ತು ಸೇವೆಗಾಗಿ ಆಂಬ್ಯುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ.
ನಗರದ ಹೊರಲವಯದ ರಸ್ತೆಗಳಲ್ಲಿ ವೇಗದ ಚಾಲನೆಗೆ ಕಡಿವಾಣ ಹಾಕಲು ಡಬ್ಲು ಮಾದರಿಯಲ್ಲಿ ಬ್ಯಾರಿಕೇಡ್ ಹಾಕುತ್ತಿದ್ದೇವೆ. ಇದರಿಂದ ಅಪಘಾತಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಅವರು ವಿವರಿಸಿದರು.












Click it and Unblock the Notifications