ಕಾಂಗ್ರೆಸ್‌ನಲ್ಲಿ ಒಗ್ಗಟ್ಟೇ ಇಲ್ಲ ಮತ್ತೆ ಸಿಎಂ ಹೇಗಾಗ್ತೀರಾ?: ಮರಳೀಧರ ರಾವ್
ಬೆಂಗಳೂರು, ನವೆಂಬರ್ 26: ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟೇ ಇಲ್ಲ ನೀವು ಮತ್ತೆ ಮುಖ್ಯಮಂತ್ರಿ ಹೇಗಾಗ್ತೀರಾ ಸಿದ್ದರಾಮಯ್ಯವರೇ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಪ್ರಶ್ನಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಗಲುಕನಸು ಕಾಣುತ್ತಿದ್ದಾರೆ. ಜೀವಮಾನವಿಡೀ ನೀವು ಕನಸು ಕಾಣುತ್ತಲೇ ಇರಬೇಕು, ನೀವು ಮತ್ತೆ ಸಿಎಂ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ಬೆಂಗಳೂರು ಇಂದು ಮೂಲಭೂತ ಸೌಕರ್ಯಗಳ ಕೊರತೆ ಇರುವ ನಗರ ಆಗಿದೆ, ನಮ್ಮ ಸರ್ಕಾರ ಭವಿಷ್ಯದ ಬೆಂಗಳೂರನ್ನು ರೂಪಿಸಲಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಇಬ್ಬರೂ ಆರೋಪಗಳನ್ನು ಮಾಡುತ್ತಿದ್ದಾರೆ.
ಬಗ್ಗೆ ಕುಮಾರಸ್ವಾಮಿ ಆರೋಪಗಳು ಆಧಾರರಹಿತ.ಕುಮಾರಸ್ವಾಮಿಯವರೇ ನೀವು ಬಿಜೆಪಿಯಿಂದ ಅಧಿಕಾರ ಕಳೆದುಕೊಂಡಿಲ್ಲ.
ನೀವು ಅಧಿಕಾರ ಕಳೆದುಕೊಂಡಿದ್ದು ಸಿದ್ದರಾಮಯ್ಯರಿಂದ.ಬಿಜೆಪಿಯನ್ನು ನೀವು ನಿಂದಿಸಬೇಡಿ.ನಾವು ನಿಮಗೆ ಬೆನ್ನಿಗೆ ಚೂರಿ ಹಾಕಿಲ್ಲ.ನಾವು ಕುಮಾರಸ್ವಾಮಿಯವರನ್ನು ಬಹಿರಂಗವಾಗಿ ವಿರೋಧಿಸಿದ್ದೆವು ಎಂದರು.

ಕಾಂಗ್ರೆಸ್ ಬಿಟ್ಟವರು ಹೊಸ ಆಲೋಚನೆಯೊಂದಿಗೆ ಬಿಜೆಪಿ ಸೇರಿದರು
ರಾಜೀನಾಮೆ ನೀಡಿದವರು ಹೊಸ ಆಲೋಚನೆಯೊಂದಿಗೆ ಬಿಜೆಪಿ ಸೇರಿದರು, ಅವರನ್ನು ನಾವು ಒಪ್ಪಿಕೊಂಡಿದ್ದೇವೆ, ಅಭ್ಯರ್ಥಿಗಳನ್ನಾಗಿ ಮಾಡಿದ್ದೇವೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಿದ್ಧರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ಗೆ ಮತ ಹಾಕೋದರಿಂದ ಯಾವುದೇ ಪ್ರಯೋಜನ ಇಲ್ಲ.

15 ಸೀಟು ಗೆದ್ದರೂ ಜೆಡಿಎಸ್ ಸರ್ಕಾರ ಮಾಡಲು ಸಾಧ್ಯವಿಲ್ಲ
15 ಸೀಟುಗಳನ್ನು ಗೆದ್ದರೂ ಜೆಡಿಎಸ್ ಸರ್ಕಾರ ಮಾಡಲು ಸಾಧ್ಯವಿಲ್ಲ,ಕಾಂಗ್ರೆಸ್ ಗೆ ಹಾಕಿದರೂ ಅವರು ಮಧ್ಯಂತರ ಚುನಾವಣೆಯ ಬಗ್ಗೆ ಮಾತಾಡುತ್ತಾರೆ.ಕಾಂಗ್ರೆಸ್ ಗೆ ಮತ ಹಾಕಿದರೆ ಅದು ಮಧ್ಯಂತರ ಚುನಾವಣೆಗೆ ಅವಕಾಶ ಮಾಡಿಕೊಟ್ಟಂತೆ ಎಂದರು.

ಸ್ಥಿರ ಸರ್ಕಾರ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ
ಬಿಜೆಪಿಯಿಂದ ಮಾತ್ರ ಸ್ಥಿರ ಸರ್ಕಾರ ರಚನೆ ಮಾಡಲು ಸಾಧ್ಯ,ಕರ್ನಾಟಕದಲ್ಲಿ ಯಾರಿಗೂ ಮಧ್ಯಂತರ ಚುನಾವಣೆ ಇಷ್ಟ ಇಲ್ಲ.ಬಿಜೆಪಿ ಮಧ್ಯಂತರ ಚುನಾವಣೆ ಬಗ್ಗೆ ಒಲವು ಹೊಂದಿಲ್ಲ ಎಂದು ಹೇಳಿದರು.

ಪಕ್ಷದಲ್ಲಿರುವ ಅಶಿಸ್ತಿನ ವಿರುದ್ಧ ಕ್ರಮ
ಪಕ್ಷದಲ್ಲಿ ಯಾವುದೇ ಅಶಿಸ್ತು ಸಾಧ್ಯ ಇಲ್ಲ,ಪಕ್ಷದ ರಾಜ್ಯಾಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ,ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡಿಲ್ಲ,ಬಿಜೆಪಿಗೆ ಆಪರೇಷನ್ ಕಮಲ ಮಾಡಬೇಕಾದ ಅವಶ್ಯಕತೆ ಇಲ್ಲ.ಜೆಡಿಎಸ್ ಕಾಂಗ್ರೆಸ್ ಶಾಸಕರು ತಾವಾಗಿಯೇ ರಾಜೀನಾಮೆ ಕೊಟ್ಟು ಬಂದಿದ್ದಾರೆ ಎಂದರು.

ಸಿದ್ದರಾಮಯ್ಯ ವಿಫಲ ನಾಯಕ
ಸಿದ್ದರಾಮಯ್ಯ ಓರ್ವ ವಿಫಲ ನಾಯಕ, ತನ್ನ ಪಕ್ಷದ ನಾಯಕರನ್ನೇ ಜೊತೆಯಲ್ಲಿ ಕೊಂಡೊಯ್ಯಲು ಅವರಿಗೆ ಸಾಧ್ಯವಾಗಲಿಲ್ಲ. 40ಸೀಟು ಹೊಂದಿದ್ದ ಕುಮಾರಸ್ವಾಮಿ ಇನ್ನೂ ಕಡಿಮೆ ಸ್ಥಾನಕ್ಕೆ ಇಳಿದಿದ್ದಾರೆ.












Click it and Unblock the Notifications