Nandini New Song: ಆಗ ನಾನು ನಂದಿನಿ, ಈಗ ಮೋರಿ ಉಕ್ಕೈತೆ... ಬೆಂಗಳೂರು ಮಳೆ ಬಗ್ಗೆ ವಿಕಿಪಿಡಿಯಾ ಸಾಂಗ್ ಫುಲ್ ವೈರಲ್

ನಿಮ್ಮೆಲ್ಲರಿಗೂ 'ನಾನು ನಂದಿನಿ ಬೆಂಗಳೂರಿಗೆ ಬಂದಿನಿ..' ಹಾಡು ತುಂಬಾ ಚೆನ್ನಾಗಿ ನೆನಪಿರಬಹುದು. ಇದೇ ತಂಡ ಸದ್ಯ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಈ ಹಾಡನ್ನು ಬೆಂಗಳೂರಿನಲ್ಲಿ ಕೆರೆಯಂತಾದ ರಸ್ತೆಗಳ ವಿಡಿಯೋಗಳ ಮೂಲಕ ರಚಿಸಲಾಗಿದೆ.

ಹೌದು.. ಬೆಂಗಳೂರಿನಲ್ಲಿ ಮಳೆಯಿಂದ ತುಂಬಿ ಹೋದ ರಸ್ತೆಗಳ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿವೆ. ಈ ವಿಡಿಯೋಗಳನ್ನು ಬಳಸಿಕೊಂಡು ಇತ್ತೀಚೆಗೆ ಟ್ರೆಂಡ್ ಆದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಕೃಷ್ಣ ಪ್ರಣಯ ಸಖಿ' ಸಿನಿಮಾದ 'ದ್ವಾಪರ' ಹಾಡಿನ ರಿಲಿಕ್ಸಿಗೆ ನಂದಿನಿ ನ್ಯೂಸ್ ಸಾಂಗ್ ರಚಿಸಲಾಗಿದೆ.

Then Nanu Nandini Now Mori Ukkaite Vickypedia song about Bengaluru rain full viral

ವಿಡಿಯೋದಲ್ಲಿ ಕಾಣಿಸಿಕೊಳ್ಳುವ ನಂದಿನಿ, ಬೆಂಗಳೂರಿನಲ್ಲಿ ರಸ್ತೆಗಳ ಮೇಲೆ ಮಳೆ ನೀರು ತುಂಬಿಕೊಂಡಾಗ ಕಚೇರಿಗೆ ಹೋಗುವುದು ಎಷ್ಟು ಕಷ್ಟ ಎನ್ನುವುದನ್ನು ಹಾಡಿನ ಮೂಲಕ ತಿಳಿಸಿದ್ದಾರೆ. ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂದಿನಿ ನ್ಯೂ ಸಾಂಗ್‌ನಲ್ಲಿ ಏನಿದೆ ಗೊತ್ತಾ..?

ನಂದಿನಿ ನ್ಯೂ ಸಾಂಗ್:-

''ಮೋರಿ ಉಕ್ಕೈತೆ.. (Ukkaite).. ನೀರು ತುಂಬೈತೆ..(Tumbaite).. ಗುಂಡಿ ಫುಲ್ ಆಗಿದೆ.. ( Full Agide).. ಆಟೋ (Auto) ಸಿಕ್ತಿಲ್ಲ.. ಕ್ಯಾಬ್ ಬರ್ತಿಲ್ಲ.. ಫುಲ್ ಸೈಕಾಗಿದೆ.. ಬೇರೆ ದಾರಿನು.. ಇಲ್ಲ ನನಗಿನ್ನು.. ನೀರು ತುಂಬೋಗಿದೆ... ಆಗಬೇಕಿದ್ದ ಮೆಟ್ರೋ ನಿಲ್ದಾಣ ಇನ್ನು ಲೇಟ್ ಆಗಿದೆ. ಒನ್ ಆಂಡ್‌ ಹಾಫಾ?? ಡಬಲ್ ಮೀಟ್ರಾ?? ಹೇಳಿ ಹಣ ಕೊಡ್ತೀನಿ... ತುಂಬಾ ಚಳಿ... ಹೊಡಿ ಗೋಲಿ.. ಆಫೀಸ್ ರಜಾ ಮಾಡ್ತೀನಿ..''

ಈ ಹಾಡನ್ನು ವಿಕಿಪಿಡಿಯಾ ತಂಡದ ಅನೂಪ್ ಸುಧಿಂದ್ರಾ ಬರೆದರೆ, ಸಚಿನ್ ಆಡಿಯೋ ಮಿಕ್ಸಿಂಗ್ ಮಾಡಿದ್ದಾರೆ. ಇನ್ನೂ ಚಿತ್ರೀಕರಣ ತೇಜಸ್ ಮಾಡಿದ್ದಾರೆ. ಈ ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಹಾಡನ್ನು ಬಳಸಿಕೊಂಡು ಜನ ತಮ್ಮ ಪ್ರದೇಶದ ವಾಸ್ತವ ಸ್ಥಿತಿಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲು ಆರಂಭಿಸಿದ್ದಾರೆ.

ಇದನ್ನು Vickypedia ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಅನ್ನು ಈ ಹಾಡು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಜನ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ಹಾಡನ್ನು ಕೇಳಿ ಗಣೇಶ್ ಅವರ ರಿಯಲ್ ಸಾಂಗ್ ಮರೆತು ಹೋಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

'ನಾನು ನಂದಿನಿ ಬೆಂಗಳೂರಿಗೆ ಬಂದಿನಿ... ' ಸಖತ್ ವೈರಲ್ ಆದ ಸಾಂಗ್

ಈ ಹಿಂದೆ ಈ ತಂಡ 'ನಾನು ನಂದಿನಿ ಬೆಂಗಳೂರಿಗೆ ಬಂದಿನಿ' ಹಾಡನ್ನು ರಚಿಸುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಹಾಡಿನ ರಿಲಿಕ್ಸ್ ಹೀಗಿದೆ.. ''ನಾನು ನಂದಿನಿ... ಬೆಂಗಳೂರ್ಗೆ ಬಂದೀನಿ... ಪಿಜಿಲಿ ಇರ್ತೀನಿ.... ಐಟಿ ಕೆಲ್ಸಾ ಮಾಡ್ತೀನಿ... ಊಟ ಸರಿಯಿಲ್ಲ... ಅಂದ್ರುನೂ ತಿಂತೀನಿ, ಬಂದಿದುಡ್ಡೆಲ್ಲಾ ಮನೆಗ್ ಕಳಿಸ್ತೀನಿ. ಬಾರೆ ನಂದಿನಿ ಗೋಬಿ ತಿನಿಸ್ತಿನಿ, ಬೇ ಬೇ ಬೇಡ.... ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ.. ಓ ಬೇಡ.. ಓ ಬೇಡ.... ಬಾರೆ ನಂದಿನಿ ಪೇಡ ತಿನಿಸ್ತೀನಿ... ಬೇ ಬೇ ಬೇಡ.. ಬಾರೆ ನಂದಿನಿ ಪಿಚ್ಚರ್ ತೋರಿಸ್ತೀನಿ... ಓ ಬೇಡ.. ಓ ಬೇಡ...

ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು. ಇಲ್ಲಂದರೆ ಐಟಿಲಿ ಕಷ್ಟಾ ಆಗುತ್ತೆ. ಸರ್ ನಾನು ಕನ್ನಡ ಮೀಡಿಯಂನಲ್ಲೋದಿದೆ. ಅದಕ್ಕೆ ನನ್ ಇಂಗ್ಲಿಷ್ ಅಷ್ಟಕಷ್ಟೇ... ಐ ಕ್ಯಾನ್ ಟ್ರೈ.. ಐ ಕ್ಯಾನ್ ಟಾಕ್.. ಬಟ್ ವಾಟ್ ಐ ಸ್ಪೀಕ್ ಈಸ್ ಬಟ್ಲರ್ ಇಂಗ್ಲೀಷ್..ನಾನು ನಂದಿನಿ... ಬೆಂಗಳೂರ್ಗೆ ಬಂದೀನಿ... ಪಿಜಿಲಿ ಇರ್ತೀನಿ.... ಐಟಿ ಕೆಲ್ಸಾ ಮಾಡ್ತೀನಿ... ಊಟ ಸರಿಯಿಲ್ಲ... ಅಂದ್ರುನೂ ತಿಂತೀನಿ, ಬಂದಿದುಡ್ಡೆಲ್ಲಾ ಮನೆಗ್ ಕಳಿಸ್ತೀನಿ.''

vickypedia_007 ಖಾತೆಯ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ವಿಕಾಸ್ ಹಂಚಿಕೊಂಡಿದ್ದಾರೆ.ಕಂಟೆಂಟ್ ಕ್ರಿಯೇಟರ್ ವಿಕಾಸ್ ಈ ವಿಡಿಯೋವನ್ನು ತಯಾರಿಸಿದ್ದಾರೆ. ಈ ವಿಡಿಯೋದ ರಿಲಿಕ್ಸ್ ಜನಪ್ರಿಯ ಇಂಗ್ಲಿಷ್ ಹಾಡು 'I'm a Barbie girl in a Barbie world' ನದ್ದಾಗಿದೆ. 'ಐ ಆಮ್ ಬರ್ಬಿ ಗರ್ಲ್' ಹಾಡಿನಂತೆ ಈ ಹಾಡಿನ ರಿಲಿಕ್ಸ್ ಸೃಷ್ಟಿಸಲಾಗಿದ್ದು ಸಕತ್ ವೈರಲ್ ಆಗಿದೆ. ವಿಕಾಸ್‌ನ ಈ ಹಾಡಿಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರ್ಭಜರಿ ರೆಸ್ಪಾನ್ಸ್ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+