ಕೆಐಎ ಬಳಿಯ ತಾಜ್ ಹೋಟೆಲ್ ವಿಸ್ತರಣೆ; 220 ರೂಂ ಜೋಡಣೆ

ಬೆಂಗಳೂರು, ಫೆಬ್ರವರಿ 26 : ಬೆಂಗಳೂರು ವಿಮಾನ ನಿಲ್ದಾಣದ ಸಮೀಪವಿರುವ ದ ತಾಜ್ ಬೆಂಗಳೂರು ಹೋಟೆಲ್ ವಿಸ್ತರಣೆ ಕಾಮಗಾರಿಯನ್ನು ಕೈಗೊಳ್ಳಲಿದೆ. ವರ್ಷದಿಂದ ವರ್ಷಕ್ಕೆ ಹೋಟೆಲ್‌ನಲ್ಲಿನ ರೂಂಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಬಿಎಎಚ್‌ಎಲ್ ಐಷಾರಾಮಿಯಾದ ತಾಜ್ ಹೋಟೆಲ್ ಮಾಲೀಕತ್ವ ಹೊಂದಿದೆ. 2015ರಲ್ಲಿ ಆರಂಭವಾದ ಹೋಟೆಲ್‌ನಲ್ಲಿ ಪ್ರಸ್ತುತ 154 ರೂಂಗಳಿವೆ. ಈಗ ಕಾಮಗಾರಿ ಕೈಗೊಂಡು 220 ರೂಂಗಳನ್ನು ಹೊಸದಾಗಿ ಸೇರಿಸಲಾಗುತ್ತಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ತಾಜ್ ಹೋಟೆಲ್‌ನಲ್ಲಿ ವರ್ಷದಿಂದ ವರ್ಷಕ್ಕೆ ರೂಂಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ, ಜನರ ಬೇಡಿಕೆಗೆ ಅನುಗುಣವಾಗಿ ಹೋಟೆಲ್ ವಿಸ್ತರಣೆ ಮಾಡಲಾಗುತ್ತಿದೆ.

The Taj Bangalore Hotel Announced Expansion

ಕಳೆದ ವರ್ಷ ಬಿಎಎಚ್‌ಎಲ್ ಟೇರಸ್ ರೆಸ್ಟೋರೆಂಟ್ ನಿರ್ಮಾಣ ಮಾಡಲು ಟೆಂಡರ್ ಕರೆದಿತ್ತು. ರೆಸ್ಟೋರೆಂಟ್‌ನಲ್ಲಿ ಕುಳಿತು ವಿಮಾನ ಟೇಕಾಫ್ ಆಗುವ ಮತ್ತು ಇಳಿಯುವುದನ್ನು ನೋಡುತ್ತಾ ಊಟ ಸವಿಯಬಹುದಿತ್ತು.

ಈ ರೆಸ್ಟೋರೆಂಟ್ ಬೆಂಗಳೂರಿನ ಜನರನ್ನು ಸೆಳೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಕೆಲಸ ಇಲ್ಲವಾದರೂ ರೆಸ್ಟೋರೆಂಟ್‌ನಲ್ಲಿ ಊಟ ಸವಿಯಲು ಜನರು ತೆರಳುತ್ತಾರೆ. ಈಗ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೂ ಬೇಡಿಕೆ ಹೆಚ್ಚುತ್ತಿದೆ.

ಐಎಚ್‌ಸಿಎಲ್ ತಾಜ್ ಬೆಂಗಳೂರು ವಿಸ್ತರಣೆ ಕಾಮಗಾರಿ ಕೈಗೊಳ್ಳುವುದಾಗಿ ಘೋಷಣೆ ಮಾಡಿದೆ. ಹೊಸ ರೂಂಗಳನ್ನು ನಿರ್ಮಾಣ ಮಾಡುವ ಜೊತೆಗೆ ವಿಶೇಷ ಒಳಾಂಗಣ ವಿನ್ಯಾಸವನ್ನು ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+