ಸೆಕ್ಸ್ ದಾಸಿಯರು -ಇರಾಕಿ ಉಗ್ರರ ಪ್ರಮುಖ ಅಸ್ತ್ರ

ಬೆಂಗಳೂರು, ಅಕ್ಟೋಬರ್ 04: 'ಸೆಕ್ಸ್ ದಾಸಿಯರು ಈ ಭೂಮಿಗಾಗಿ, ಕನ್ಯೆಯರು ಸ್ವರ್ಗಕ್ಕಾಗಿ' ಎಂಬ ಮೂಲ ಅಸ್ತ್ರವನ್ನು ಇರಾಕಿ ಉಗ್ರ ಸಂಗಘನೆ ಈಗಲೂ ಬಳಸುತ್ತಿದೆ. ಭಾರತದಲ್ಲಿ ಐಎಸ್ಐಎಸ್ ವಿರುದ್ಧದ ಕೇಸುಗಳನ್ನು ತನಿಖೆ ಮಾಡುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಈ ಅಂಶವನ್ನು ಬಹಿರಂಗಪಡಿಸಿದೆ.

ಎರಡು ದಿನಗಳ ಹಿಂದೆ ತಮಿಳುನಾಡು ಹಾಗೂ ಕೇರಳದಲ್ಲಿ ದಾಳಿ ನಡೆಸಿ, ಇರಾಕಿ ಉಗ್ರ ಸಂಘಟನೆಗೆ ನೆರವಾಗುತ್ತಿದ್ದ 6 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತ ವಿಚಾರಣೆ ವೇಳೆ ಬಾಯ್ಬಿಟ್ಟ ವಿಷಯಗಳು ಈಗ ಮತ್ತೊಮ್ಮೆ ಕರ್ನಾಟಕದ ಭಟ್ಕಳದತ್ತ ತಿರುಗಿ ನೋಡುವಂತೆ ಮಾಡಿವೆ.[ಐಎಸ್ಐಎಸ್ ಗೆ ಭಾರತೀಯರೆಂದರೆ ಲೈಂಗಿಕ ಗುಲಾಮರಂತೆ!]

The ISIS promise: Sex slaves on earth, virgins in heaven

ಸೆಕ್ಸ್ ದಾಸಿಯರ ನೇಮಕ: ಈ ಆರು ಮಂದಿ ಯಾರ ಜತೆಗೆ ಸಂಪರ್ಕ ಹೊಂದಿದ್ದರು. ಹೇಗೆಲ್ಲ ಚಾಟ್ ಮಾಡುತ್ತಿದ್ದರು ಎಂಬ ಮಾಹಿತಿ ಕಲೆ ಹಾಕಿದ್ದು, ಸೈಬರ್ ಲ್ಯಾಬಿನಿಂದ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.[ಐಸಿಸ್ ನ ಲೈಂಗಿಕ ಕ್ರೌರ್ಯಕ್ಕೆ ನಲುಗಿದವಳ ಕರುಳು ಹಿಂಡುವ ಕಥೆ]

ಕರ್ನಾಟಕದ ಭಟ್ಕಳ ಮೂಲದ ಸುಲ್ತಾನ್ ಆರ್ಮಾರ್ ನ ಸೋದರ ಶಫಿ ಆರ್ಮಾರ್ ಈ ಸೆಕ್ಸ್ ದಾಸಿಯರ ನೇಮಕಾತಿ ಹೊಣೆ ಹೊತ್ತಿದ್ದ ಎಂದು ತಿಳಿದು ಬಂದಿದೆ. ಇಂಡಿಯನ್ ಮುಜಾಹಿದ್ದೀನ್ ನಿಂದ ದೂರಾಗಿ ಅನ್ಸರ್ ಉಲ್ ತಾವ್ಹಿದ್ ಎಂಬ ನೇಮಕಾತಿ ಘಟಕ ಸ್ಥಾಪಿಸಿದ್ದ ಈತ, ಭಾರತದಿಂದ ಐಎಸ್ಐಎಸ್ ಗೆ ನೇಮಕಾಗಿ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದ.[ಇರಾಕಿ ಉಗ್ರರ ಕಣ್ಣು ದಕ್ಷಿಣ ಭಾರತದ ಮೇಲೆ ಏಕಿದೆ?]

ಇಲ್ಲಿಂದ ಆಯ್ಕೆಯಾದವರನ್ನು ನೇರವಾಗಿ ಸಿರಿಯಾ ಅಥವಾ ಇರಾಕ್ ನಲ್ಲಿರುವ ತರಬೇತಿ ಶಿಬಿರಗಳಿಗೆ ಕಳಿಸುವ ಹೊಣೆ ಈ ಸೋದರರು ಹೊತ್ತುಕೊಂಡಿದ್ದಾರೆ.[ಇರಾಕಿ ಉಗ್ರರಿಂದ 'ಏಡ್ಸ್ ಬಾಂಬ್' ಬೀಳಲಿದೆ ಎಚ್ಚರ!]

ಈ ಹೋರಾಟದಲ್ಲಿ ನೀವು ಮಡಿದರೆ ಕನ್ಯೆಯರಿಗಾಗಿ ಸ್ವರ್ಗದಲ್ಲಿ ಉಳಿಯುತ್ತೀರಿ ಎಂದು ಬೋಧನೆ ಮಾಡಲಾಗುತ್ತಿತ್ತು. ಭಾರತದಿಂದ ಉಗ್ರ ಸಂಘಟನೆ ಸೇರುವವರಿಗೆ ಒಳ್ಳೆಯ ಸೌಲಭ್ಯಗಳನ್ನು ನೀಡುವ ಭರವಸೆ ನೀಡಲಾಗುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+