ಕರ್ನಾಟಕದಲ್ಲಿ ಉರ್ದು ಹೇರಿಕೆ: ಸಾಮಾಜಿಕ ಒಗ್ಗಟ್ಟಿಗೆ ಸಿದ್ದರಾಮಯ್ಯ ನಡೆ ಹೇಗೆ ಅಪಾಯ?
ಕರ್ನಾಟಕದಂತಹ ರಾಜ್ಯದಲ್ಲಿ ಭಾಷೆ ಎಂಬುದು ಆಳವಾದ ಭಾವನಾತ್ಮಕ ವಿಚಾರ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂಗನವಾಡಿ ಕಾರ್ಯಕರ್ತೆ ನೇಮಕಾತಿಗೆ ಉರ್ದು ಪ್ರಾವೀಣ್ಯತೆ ಹೊಂದಿರಬೇಕು ಎಂದು ಆದೇಶಿಸಿದೆ. ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ನೇಮಕಾತಿಗೆ ಹೊರಡಿಸಿರುವ ಈ ಅಧಿಸೂಚನೆ ಈಗ ವಿವಾದದ ಅಲೆ ಎಬ್ಬಿಸಿದೆ.
ಈ ನಿರ್ಧಾರ ಈಗಾಗಲೇ ರಾಜಕೀಯವಾಗಿ ಪ್ರತಿಭಟನೆ, ಆಕ್ರೋಶದ ಕಿಡಿಯನ್ನು ಹೊತ್ತಿಸಿದೆ, ಇದು ಸಮಾಜದ ಹೆಚ್ಚಿನ ಜನಸಂಖ್ಯೆಗೆ ಬೆದರಿಕೆಯ ಒಡ್ಡುವುದು ಮಾತ್ರವಲ್ಲದೇ, ಕರ್ನಾಟಕದ ಸೂಕ್ಷ್ಮವಾದ ಸಾಮಾಜಿಕ ಒಗ್ಗಟ್ಟಿಗೂ ಸಹ ಹಾನಿಯನ್ನು ಉಂಟು ಮಾಡುತ್ತದೆ.

ವಿವಾದಾತ್ಮಕ ನಡೆ
ಈ ವಾದದ ತಿರುಳು ಇರುವುದು ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ, ಅದು ಗಮನಾರ್ಹ ಮುಸ್ಲಿಂ ಜನಸಂಖ್ಯೆ ಹೊಂದಿರುವ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರು ಉರ್ದು ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರೇಕು ಎಂದು ಹೇಳಿರುವುದರಲ್ಲಿ. ಈ ಪ್ರಕರಣದಲ್ಲಿ ಮೂಡಿಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಸಮುದಾಯದ ಶೇ 31.94ರಷ್ಟು ಜನಸಂಖ್ಯೆ ಇದೆ, ಈ ನಿರ್ಧಾರ ಭಾಷೆ ಒಳಗೊಳ್ಳುವಿಕೆಗಿಂತ ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈ ಆದೇಶ ಕಟುವಾದ ಟೀಕೆಗೆ ಗುರಿಯಾಗಿದೆ, ಅದರಲ್ಲೂ ಬಿಜೆಪಿ ಕಾಂಗ್ರೆಸ್ ಸರ್ಕಾರ ಭಾಷಾ ಐಕ್ಯತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರು, ಈ ನಡೆಯನ್ನು "ಮುಸ್ಲಿಮರನ್ನು ಓಲೈಸುವ" ಪ್ರಯತ್ನ ಎಂದು ಕರೆದು, ತಮ್ಮ ರಾಜ್ಯದಲ್ಲೇ ಕನ್ನಡ ಮಾತನಾಡುವವರಿಗೆ ಕೆಲಸವನ್ನು ನಿರಾಕರಿಸುವ ನಡೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಭಾಷಾಭಿಮಾನದ ಇತಿಹಾಸ
ಕರ್ನಾಟಕದ ರಾಜಕೀಯವನ್ನು ನೋಡಿದರೆ ಇದು ಭಾಷೆಯ ವಿಚಾರದಲ್ಲಿ ಸೂಕ್ಷ್ಮವಾದ ಸಮಸ್ಯೆಗಳನ್ನು ಎದುರಿಸಿರುವುದನ್ನು ಗಮನಿಸಬಹುದು. ರಾಜ್ಯ ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಿರುವುದು, ಇದು ಕನ್ನಡಕ್ಕೆ ಬೆದರಿಕೆಯೊಡ್ಡಿದೆ ಎಂದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವುದಕ್ಕೂ ಸಾಕ್ಷಿಯಾಗಿದೆ, ಇದೇ ಮಾದರಿಯಲ್ಲಿ ಉರ್ದು ಹೇರಿಕೆ, ಅದರಲ್ಲೂ ಆಯ್ದ ಜಿಲ್ಲೆಗಳಲ್ಲಿ ಈ ನಡೆ ರಾಜ್ಯದ ಆಡಳಿತ ಭಾಷೆ ಕನ್ನಡವನ್ನು ದುರ್ಬಲಗೊಳಿಸುತ್ತಿದೆ ಎಂಬ ಭಾವನೆ ಮೂಡಿಸುತ್ತಿದೆ.
ಭಾಷಾ ವೈವಿಧ್ಯತೆಗೆ ಕರ್ನಾಟಕ ಹೆಮ್ಮೆಯನ್ನು ಪಡುತ್ತದೆ, ಕನ್ನಡ ರಾಜ್ಯದ ವಿವಿಧ ಸಮುದಾಯವನ್ನು ಒಗ್ಗೂಡಿಸುವ ಭಾಷೆಯಾಗಿದೆ. ಕನ್ನಡಕ್ಕಿಂತ ಉರ್ದು ಪ್ರಾವೀಣ್ಯತೆ ಹೊಂದಿರಬೇಕು ಎಂದು ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿರುವ ಜಿಲ್ಲೆಗೆ ಹೇಳಿರುವುದು ಒಗ್ಗಟ್ಟು ದುರ್ಬಲಗೊಳಿಸುತ್ತಿದೆ, ಕನ್ನಡ ಪರ ಸಂಘಟನೆಗಳು ಈ ಆದೇಶ ಭಾಷಾ ಒಗ್ಗಟ್ಟಿಗೆ ಬೆದರಿಕೆಯಾಗಿದೆ ಎಂದು ಈಗಾಗಲೇ ಸರ್ಕಾರದ ವಿರುದ್ಧ ಆಕ್ರೋಶಗೊಂಡಿವೆ.
ಭಾಷಾ ಆಧಾರದ ಜನಸಂಖ್ಯೆಯನ್ನು ಪರಕೀಯಗೊಳಿಸುವುದು
ಭಾರತದ ವಿವಿಧ ರಾಜ್ಯಗಳ ವಲಸಿಗ ಜನಸಂಖ್ಯೆಗೆ ಕರ್ನಾಟಕ ಮನೆಯಾಗಿದೆ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಂತಹ ನಗರ. ಈ ವಲಸಿಗರು ಹಿಂದಿ, ತೆಲಗು, ತಮಿಳು ಮತ್ತು ಮರಾಠಿ ಮಾತನಾಡುವ ಮೂಲಕ ರಾಜ್ಯದ ಭಾಷಾವೈದ್ಯತೆ ಹೆಚ್ಚಿಸಿದ್ದಾರೆ. ಹಿಂದಿ ಹೇರಿಕೆಯನ್ನು ಐತಿಹಾಸಿಕವಾಗಿ ಖಂಡಿಸುತ್ತಿರುವ ಸರ್ಕಾರ ಈಗ ಕೆಲವು ಸಮಯದಾಯಗಳಿಗಾಗಿ ಉರ್ದು ಪರವಾಗಿರುವುದು ಸಾಂಸ್ಕೃತಿಕ ಸಮೀಕರಣವನ್ನು ಜಟಿಲಗೊಳಿಸುತ್ತಿದೆ.
ಭಾಷಾ ವೈವಿದ್ಯತೆಯ ನೆಲೆಯಾಗಿರುವ ರಾಜ್ಯಕ್ಕೆ ಉರ್ದು ಪ್ರಾವೀಣ್ಯತೆ ಆದೇಶ ಅಪಾಯಕಾರಿಯಾಗಿದೆ. ಆ ಕೆಲಸಕ್ಕೆ ಸಮಾನ, ಉತ್ತಮ ಅರ್ಹತೆ ಹೊಂದಿರುವ ಆದರೆ ಉರ್ದು ಮಾತನಾಡುವುದಿಲ್ಲ ಎಂಬ ಕಾರಣಕ್ಕೆ ಅಭ್ಯರ್ಥಿಗಳಿಗೆ ಅಪಾಯ ತಂದಿದೆ. ಅಲ್ಲದೇ ಸರ್ಕಾರದ ನೀತಿಯನ್ನು ಮುಸ್ಲಿಂ ಜನಸಂಖ್ಯೆ ಕಡಿಮೆ ಇರುವ ಜಿಲ್ಲೆಯಲ್ಲಿ ಸುಲಭವಾಗಿ ಪ್ರಶ್ನೆ ಮಾಡಬಹುದು. ಭಾಷಾ ಮೀಸಲಾತಿ ಭೌಗೋಳಿಕವಾಗಿರಬೇಕೆ ಅಥವ ಕನ್ನಡದ ಮೇಲೆ ಕೇಂದ್ರಿಕೃತವಾಗಿರಬೇಕೆ ಎಂಬುದು ಸಾಮಾಜಿಕ ವ್ಯವಸ್ಥೆಗೆ ಸಾಮಾನ್ಯವಾದ ಬೆದರಿಕೆಯಾಗಿದೆ.
ಉರ್ದು ಮತ್ತು ಅಂಗನವಾಡಿ ಕಾರ್ಯಕರ್ತೆ: ಜನಸಮಾನ್ಯರಿಂದ ದೂರ?
ಅಂಗನವಾಡಿ ಕಾರ್ಯಕರ್ತೆ ಸರ್ಕಾರದ ಯೋಜನೆಗಳು ಮತ್ತು ಸಮುದಾಯದ ನಡುವಿನ ಕೊಂಡಿಯಾಗಿದ್ದಾರೆ, ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ. ಅವರ ಸಾಮರ್ಥ್ಯ ಸ್ಥಳೀಯ ಜನರ ಜೊತೆ ಅವರು ಸ್ಪಷ್ಟವಾಗಿ ಮಾತುಕತೆ ನಡೆಸುವುದರ ಮೇಲೆ ನಿರ್ಧರಿತವಾಗಿದೆ, ಬಹುಸಂಖ್ಯಾತ ಮಹಿಳೆಯರು ಕನ್ನಡ ಮಾತನಾಡುತ್ತಾರೆ. ಆದರೆ ಉರ್ದು ಕಡ್ಡಾಯಗೊಳಿಸುವ ಮೂಲಕ ಸರ್ಕಾರ ಭಾಷೆ ಮಾತನಾಡಲು ಬಾರದ ಸ್ಥಳೀಯರು ಮತ್ತು ಕಾರ್ಯಕರ್ತೆಯರನ್ನು ದೂರ ಮಾಡುತ್ತಿದೆ.
ಅಲ್ಪಸಂಖ್ಯಾತ ಸಮುದಾಯಕ್ಕೆ ಉತ್ತಮ ಸೌಲಭ್ಯ ಒದಗಿಸುವ ಉದ್ದೇಶ ಇರಬಹುದು, ಆದರೆ ಇದು ರಾಜ್ಯ ಮತ್ತು ಬಹುಸಂಖ್ಯಾತ ಸ್ಥಳೀಯ ಸಮುದಾಯದ ನಡುವೆ ಅಂತರ ಮೂಡಿಸುತ್ತದೆ. ಕನ್ನಡದಲ್ಲಿ ಪ್ರಾವೀಣ್ಯತೆ ಆದ್ಯತೆಯಾಗಬೇಕಿತ್ತು ಅಥವ ಸಮಾನ ಎಂದು ಪರಿಗಣಿಸಬೇಕಿತ್ತು. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆ ತಳಮಟ್ಟದಲ್ಲಿ ಕೆಲಸ ಮಾಡಲು ಮತ್ತು ಅಲ್ಪ ಸಂಖ್ಯಾತರ ಪರ ಕೆಲಸ ಮಾಡುವುದನ್ನು ಖಚಿತಗೊಳಿಸುತ್ತಿತ್ತು.
ಅಂತಿಮ ಷರಾ: ರಾಜ್ಯದ ನೀತಿಯಲ್ಲಿ ತಪ್ಪು ಹೆಜ್ಜೆ
ಅಂಗನವಾಡಿ ಕಾರ್ಯಕರ್ತೆ ಉರ್ದು ಪ್ರಾವೀಣ್ಯತೆ ಆದೇಶ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕರ್ನಾಟಕದ ಭಾಷಾ ಮತ್ತು ಸಾಮಾಜಿಕ ಸಮತೋಲನಕ್ಕೆ ಅಪಾಯ ತರುವ ನೀತಿಯಾಗಿದೆ. ಕನ್ನಡಕ್ಕಿಂತ ಮತ್ತೊಂದು ಭಾಷೆಗೆ ಆದ್ಯತೆ ನೀಡಿ, ಕಾಂಗ್ರೆಸ್ ಸರ್ಕಾರ ಹೆಚ್ಚು ಜನಸಂಖ್ಯೆ ಇರುವ ಸಮುದಾಯವ ವಿರುದ್ಧವಾಗಿ ನಡೆಯುತ್ತಿದೆ. ಭಾಷಾ ಹೇರಿಕೆಯನ್ನು ನಿರಂತರವಾಗಿ ವಿರೋಧಿಸಿದ ರಾಜ್ಯದಲ್ಲಿ ಈ ನಿರ್ಧಾರ ವೈವಿದ್ಯತೆಗೆ ಮಾತ್ರವಲ್ಲ ಭವಿಷ್ಯದ ನೀತಿಗಳಿಗೆ ಸಹ ಅಪಾಯಕಾರಿಯಾಗಿದೆ.
ಕರ್ನಾಟಕದ ಭಾಷಾ ಮತ್ತು ಸಾಂಸ್ಕೃತಿಕ ವೈವಿದ್ಯತೆಯಲ್ಲಿ ಹೆಮ್ಮೆಯನ್ನು ಹೊಂದಿದೆ. ನೀತಿಗಳು ಒಡೆದು ಆಳುವುದಕ್ಕಿಂತ ಒಗ್ಗೂಡಿಸುವಂತೆ ಇರಬೇಕು. ಉರ್ದು ಪ್ರಾವೀಣ್ಯತೆ ಆದೇಶ ಎಲ್ಲರನ್ನೂ ಒಳಗೊಳ್ಳುವುದಕ್ಕಿಂತ ರಾಜ್ಯದ ಭಾಷಾ ನೀತಿ, ರಾಜಕೀಯದ ಭವಿಷ್ಯದ ಬಗ್ಗೆ ಅನಾನುಕೂಲತೆಯ ಪ್ರಶ್ನೆ ಏಳುವಂತೆ ಮಾಡಿದೆ.
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ












Click it and Unblock the Notifications