ಬೆಂಗಳೂರು: ಅಂದರ್ ಬಾಹರ್ ಆಡುತ್ತಿದ್ದವರು ಅಂದರ್
ಬೆಂಗಳೂರು, ಮೇ 22 : ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಎರಡು ಕಡೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ಹಾಗೂ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿ ಒಟ್ಟು 9 ಜನರನ್ನು ಬಂಧಿಸಿದ್ದಾರೆ.
ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಇಸ್ಪೀಟ್ ಆಡುತ್ತಿದವರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ 6 ಜನರನ್ನು ಬಂಧಿಸಿದ್ದಾರೆ.[ಬೆಂಗಳೂರಿನಲ್ಲಿ ನಕಲಿ ಅಂಕಪಟ್ಟಿ ತಯಾರಕರ ಬಂಧನ]

ಆರ್ ಎಂಸಿ ಯಾರ್ಡ್ ನ ಗೇಟ್ ನಂಬರ್ 4ರ ಬಳಿ ಹಣವನ್ನು ಪಣಕಿಟ್ಟು ಇಸ್ಪೀಟ್ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ರಘು ಬಿನ್ ಆರ್ಮುಗಂ (36), ಚಿನ್ನತಂಬಿ ಬಿನ್ ಪುಂಗಾವನಂ (45), ಮಾಯಾ ಬಿನ್ ಮುನಿಸ್ವಾಮಿ (27), ಸುಬ್ಬರಾಯ ಬಿನ್ ಪಾವಡ್ (48), ಅಂಥೋನಿ ಬಿನ್ ವಂತಯ್ಯ (49), ನಾಗರಾಜು ಬಿನ್ ನಂಜಪ್ಪ (50) ಎನ್ನುವವರನ್ನು ಬಂಧಿಸಿ 27,530 ರು. ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆ ದಾಳಿ: ಸುಬ್ರಮಣ್ಯ ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗಾಯತ್ರಿನಗರ 1ನೇ ಮೈನ್ ಶ್ರೀರಾಮ ಬೈಕ್ ಪಾಯಿಂಟ್ ಮುಂಭಾಗ ಕ್ರಿಕೆಟ್ ಬೆಟ್ಟಂಗ್ ದಂಧೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.
ಮಹೇಶ್ ಬಿನ್ ಚಿನ್ನಯ್ಯ (42), ಧನಂಜಯ್ ಬಿನ್ ಪುಟ್ಟಯ್ಯ (29), ಮಂಜುನಾಥ್ ಬಿನ್ ಆನಂದ (23) ಎನ್ನುವರನ್ನು ಬಂಧಿಸಿ 31,000 ರು. ಹಣ ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆಸಾಮಿಗಳ ವಿರುದ್ಧ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.












Click it and Unblock the Notifications