ಜೀವಕಳೆಯಿಂದ ನಳನಳಿಸುತ್ತಿರುವ ತಿಪ್ಪಗೊಂಡನಹಳ್ಳಿ ಕೆರೆ

ಬೆಂಗಳೂರು, ನವೆಂಬರ್ 23 : ಬ್ರಿಟಿಷರ ಕಾಲದಲ್ಲಿ ಬೆಂಗಳೂರಿಗೆ ನೀರು ಪೂರೈಸುತ್ತಿದ್ದ ನೀರಿನ ಮೂಲಕ್ಕೆ ಮರುಜೀವ ಸಿಕ್ಕಿದೆ. ಈ ವರ್ಷ ಉತ್ತಮ ಮಳೆಯ ಪರಿಣಾಮ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 72 ಅಡಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ಈ ವರ್ಷ ಅಲ್ಲಿಂದಲೂ ಬೆಂಗಳೂರು ನಗರಕ್ಕೆ ನೀರು ಪೂರೈಸಲು ಜಲಮಂಡಳಿ ಯೋಚಿಸುತ್ತಿದೆ.

ಟಿ ಜಿ ಹಳ್ಳಿ ಅಣೆಕಟ್ಟನ್ನು1933 ರಲ್ಲಿ ನಿರ್ಮಿಸಲಾಗಿದ್ದರೂ ಇದುವರೆಗೆ ನೀರನ್ನೇ ಕಾಣೆದೆ ಬರಡಾಗಿತ್ತು ಆದರೆ ಈ ಬಾರಿ ಮುಂಗಾರಿನಿಂದಾಗಿ ಮರುಜೀವ ಪಡೆದಿದೆ. ಟಿಜಿ ಹಳ್ಳಿ ಅಣೆಕಟ್ಟಿಗೆ ಅರ್ಕಾವತಿ ಹಾಗೂ ಕುಮದ್ವತಿ ನದಿಗಳ ಸಂಗಮ ಸ್ಥಳ ಇದಾಗಿದೆ.

TG Halli Dam,to supply water to city again

ಜಲಮಂಡಳಿ ಸಹಾಯಕ ಎಂಜಿನಿಯರ್ ರಾಮಕೃಷ್ಣೇಗೌಡ ಅವರು ಹೇಳುವಂತೆ ಕಳೆದ ನಾಲ್ಕು ತಿಂಗಳ ಹಿಂದೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕೇವಲ 42 ಅಡಿ ಇತ್ತು, ಬ್ರಿಟಿಷರ ಕಾಲದಲ್ಲಿ 74.6ಅಡಿಗಳಷ್ಟು ನೀರು ಬರುತ್ತಿದ್ದ ಕಾರಣ ಕಾಲುವೆಯನ್ನು ನಿರ್ಮಿಸಲಾಗಿತ್ತು. ಆದರೆ ಭಾರಿ ಮಳೆಯಿಂದಾಗಿ 72 ಅಡಿ ನೀರು ಬಂದಿದೆ. ಕಳೆದ 15 ವರ್ಷಗಳಿಂದ ಆಗದ ಮಳೆ ಈ ವರ್ಷದಲ್ಲಿ ದಾಖಲಾಗಿದೆ.

1997-98ರ ನಂತರ ಈಗ ಮತ್ತೆ ಅಷ್ಟೇ ಮಳೆ ದಾಖಲಾಗಿದೆ. ನೀರಿನ ಗುಣಮಟ್ಟವನ್ನು ಪರಿಶೀಲಿಸಿ ನೀರನ್ನು ಸರಬರಾಜು ಮಾಡಲಾಗುತ್ತದೆ. ನೀರಿನಲ್ಲಿ ಕರಗಿದ ಒಟ್ಟು ಅಪಾಯಕಾರಿ ಘನವಸ್ತುಗಳನ್ನು ಪರಿಶೀಲಿಸಿದ ನಂತರ ಆ ನೀರನ್ನು ನಗರಗಳಿಗೆ ಸರಬರಾಜು ಮಾಡುವ ಬಗ್ಗೆ ಆಲೋಚನೆ ನಡೆಸಲಾಗುತ್ತದೆ.

ಅಣೆಕಟ್ಟಿನಿಂದ ನೀರನ್ನು ಹರಿಸಲು ಉಪಕರಣಗಳ ಕೊರತೆ ಹಾಗೂ ರಿಪೇರಿಗೆ2.5 ರಿಂದ3 ಕೋಟಿ ವೆಚ್ಚವಾಗುತ್ತದೆ. ಅನುದಾನ ಬಿಡುಗಡೆಯಾದ ನಂತರ ಕೆಲವು ತಿಂಗಳುಗಳಲ್ಲಿ ನೀರನ್ನು ಸರಬರಾಜು ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+