ಕೆಐಎ ಟರ್ಮಿನಲ್-2; ಆ. 31ರಂದು ಮೊದಲ ವಿಮಾನ ಲ್ಯಾಂಡ್!

ಬೆಂಗಳೂರು, ಆಗಸ್ಟ್ 21: ಬಿಐಎಎಲ್‌ ಒಂದು ದಿನ ಮೊದಲೇ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲಿದೆ. ಆಗಸ್ಟ್‌ 31ರಂದು ಈಗಾಗಲೇ ಉದ್ಘಾಟನೆಗೊಂಡಿರುವ ಟರ್ಮಿನಲ್‌-2ನಲ್ಲಿ ಮೊದಲ ವಿಮಾನ ಇಳಿಯಲಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ 2022ರ ನವೆಂಬರ್ 11ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ಉದ್ಘಾಟಿಸಿದ್ದರು. ವಿಶೇಷ ವಿನ್ಯಾಸದ ಮೂಲಕವೇ ಈ ಟರ್ಮಿನಲ್ ಎಲ್ಲರ ಗಮನಸೆಳೆಯುತ್ತಿದೆ.

kempegowda-international-airport-terminal-2

ಬಿಐಎಎಲ್‌ ಸೆಪ್ಟೆಂಬರ್ 1ರಂದು ಟರ್ಮಿನಲ್-2ನಲ್ಲಿ ಮೊದಲ ವಿಮಾನ ಇಳಿಸಲು ತೀರ್ಮಾನ ಮಾಡಿತ್ತು. ಆದರೆ ಒಂದು ದಿನ ಮೊದಲೇ ಅಂದರೆ ಆಗಸ್ಟ್‌ 31ರಂದು ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ.

ಯಾವುದು ಮೊದಲ ವಿಮಾನ?; ಸಿಂಗಪುರ ಏರ್‌ಲೈನ್ಸ್‌ನ ವಿಮಾನ ಆಗಸ್ಟ್ 31ರಂದು ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಲ್ಯಾಂಡ್‌ ಆಗುವ ಮೊದಲ ವಿಮಾನವಾಗಿದೆ. ಚಾಂಗಿ ವಿಮಾನ ನಿಲ್ದಾಣದಿಂದ ಬೆಳಗ್ಗೆ 8.50ಕ್ಕೆ ಹೊರಡುವ ವಿಮಾನ ಅದೇ ದಿನ 10.55ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.

ಆಗಸ್ಟ್‌ 31ರ ಬೆಳಗ್ಗೆ 10.45ರಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನಲ್ಲಿ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳು ಆಗಮಿಸಿ, ನಿರ್ಗಮಿಸಲಿವೆ ಎಂದು ಬಿಐಎಎಲ್ ಹೇಳಿದೆ. ಇನ್ನು ಮುಂದೆ ಎಲ್ಲಾ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಟರ್ಮಿನಲ್‌-2ಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ಇನ್ನು ಮುಂದೆ ದೇಶಿಯ ವಿಮಾನಗಳ ಸೇವೆಗೆ ಮಾತ್ರ ಲಭ್ಯವಿರಲಿದೆ. ಟರ್ಮಿನಲ್-2 ಜನವರಿ 15, 2023ರಲ್ಲಿ ಕಾರ್ಯಾರಂಭ ಮಾಡಿತ್ತು. ಆದರೆ ಈಗ ವಿಮಾನಗಳ ಆಗಮನ, ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ.

ನರೇಂದ್ರ ಮೋದಿ ಟ್ವೀಟ್; ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಉದ್ಘಾಟನೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, 'ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್, ಸಾಮರ್ಥ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ. ಇದು ನಗರ ಕೇಂದ್ರಗಳಿಗೆ ಉನ್ನತ ದರ್ಜೆಯ ಮೂಲಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ. ಟರ್ಮಿನಲ್ ಸುಂದರ ಮತ್ತು ಪ್ರಯಾಣಿಕರ ಸ್ನೇಹಿಯಾಗಿದೆ' ಎಂದು ಹೇಳಿದ್ದರು.

ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಟರ್ಮಿನಲ್ ವಿಮಾನ ನಿಲ್ದಾಣದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ವಾರ್ಷಿಕವಾಗಿ ಪ್ರಸ್ತುತ ಇರುವ 2.5 ಕೋಟಿಯಿಂದ 5-6 ಕೋಟಿ ಪ್ರಯಾಣಿಕರಿಗೆ ದುಪ್ಪಟ್ಟುಗೊಳಿಸುತ್ತದೆ ಎಂದು ಅಂದಾಜಿಸಲಾಗಿದೆ.

ಟರ್ಮಿನಲ್-2 ಅನ್ನು ಬೆಂಗಳೂರಿನ ಉದ್ಯಾನ ನಗರಿ ಹೆಸರಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. 'ಉದ್ಯಾನದಲ್ಲಿ ನಡಿಗೆ' ಎಂಬ ಕಲ್ಪನೆಯಡಿ ಇದನ್ನು ನಿರ್ಮಾಣ ಮಾಡಲಾಗಿದೆ. ಹಸಿರು ಗೋಡೆಗಳು, ತೂಗು ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಟರ್ಮಿನಲ್-2 ಪ್ರಯಾಣಿಕರನ್ನು ಸೆಳೆಯುತ್ತದೆ. ನವೀಕರಿಸಬಹುದಾದ ಇಂಧನದ ಶೇ.100 ರಷ್ಟು ಬಳಕೆಯೊಂದಿಗೆ ವಿಮಾನ ನಿಲ್ದಾಣವು ಈಗಾಗಲೇ ಪರಿಸರ ಸ್ನೇಹಿಯಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲೇ ಅಮೆರಿಕದ ಜಿಬಿಸಿ (ಹಸಿರು ಕಟ್ಟಡ ಮಂಡಳಿ) ಯಿಂದ ಪೂರ್ವ ಪ್ರಮಾಣೀಕರಿಸಿದ ಪ್ಲಾಟಿನಂ ರೇಟಿಂಗ್ ಅನ್ನು ಹೊಂದಿರುವ ವಿಶ್ವದ ಅತಿದೊಡ್ಡ ಟರ್ಮಿನಲ್ ಆಗಿದೆ. ಟರ್ಮಿನಲ್‌ನಲ್ಲಿರುವ ಕಲಾಕೃತಿಗಳು ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿ ಮತ್ತು ವಿಶಾಲವಾದ ಭಾರತೀಯ ಸಂಪ್ರದಾಯವನ್ನು ಪ್ರತಿಬಿಂಬಿಸುವ ಕಲಾಕೃತಿಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+