Bengaluru Metro: ನೇರಳೆ ಮಾರ್ಗದಲ್ಲಿ ಬಿಜೆಪಿ ಸಂಸದ ಸಂಚಾರ, ಪ್ರಯಾಣಿಕರ ಜತೆ ಸಂವಾದ: ವಿಡಿಯೋ
ಬೆಂಗಳೂರು, ನವೆಂಬರ್ 08: ಬೆಂಗಳೂರಿನ ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ನಮ್ಮ ಮೆಟ್ರೋದ (namma metro) ಬಹುನಿರೀಕ್ಷೆಯ ಪರ್ಪಲ್ ಲೈನ್ ಸಂಪೂರ್ಣವಾಗಿ ಪ್ರಯಾಣಿಕರಿಗೆ ಮುಕ್ತವಾಗಿ ವ್ಯಾಪಕ ಸ್ಪಂದನೆ ಪಡೆದುಕೊಂಡಿದೆ. ಇದೇ ಮಾರ್ಗದಲ್ಲಿ ಬಿಜೆಪಿ ಸಂಸದರೊಬ್ಬರು ಜನಸಾಮಾನ್ಯರಂತೆ ಸಂಚರಿಸಿ ಅನುಭವ ಮತ್ತು ಸಂತಸ ಹಂಚಿಕೊಂಡಿದ್ದಾರೆ. ಮೆಟ್ರೋ ಸಂಚಾರ, ಮಾರ್ಗ ವಿಸ್ತರಣೆ ಕುರಿತು ಪ್ರಯಾಣಿಕರ ಜತೆ ಸಂವಾದವನ್ನು ನಡೆಸಿದ್ದಾರೆ.
ಚಲ್ಲಘಟ್ಟದಿಂದ ಕೆಆರ್ ಪುರಂ ಮಾರ್ಗವಾಗಿ ವೈಟ್‌ಫಿಲ್ಡ್‌ವರೆಗೆ ಈ ಪರ್ಪಲ್ ಲೈನ್ (Metro Purple Line) ನಲ್ಲಿ ಮೈಸೂರು ರಸ್ತೆಯಿಂದ ಕೆಆರ್ ಪುರಂ ವರೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ಪ್ರಯಾಣ ಮಾಡಿದರು.

ಮೆಟ್ರೋ ಪ್ರಯಾಣ ಕುರಿತು ಸಾಮಾಜಿಕ ಜಾಲತಾಣ X ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಕೆಲವು ವಿಚಾರಗಳನ್ನು ತೇಜಸ್ವಿ ಸೂರ್ಯ ಅವರು ಹಂಚಿಕೊಂಡಿದ್ದಾರೆ.
ನಮ್ಮ ಮೆಟ್ರೋದ ಪರ್ಪಲ್‌ಲೈನ್ ನಲ್ಲಿ ಮೈಸೂರು ರಸ್ತೆಯಿಂದ ಕೆಆರ್ ಪುರಕ್ಕೆ ಅದ್ಭುತವಾದ ಸಂಚಾರ ನಡೆಸಿದೆ. ಯಾವುದೇ ಅಡಚಣೆ ಇಲ್ಲದೇ ಮುಕ್ತ ಪ್ರಯಾಣವನ್ನು ಅನುಭವಿಸಿದೆ ಎಂದು ಅವರು ಹೇಳಿದ್ದಾರೆ.
Experienced a wonderful hassle-free ride to KR Pura on Namma Metro's #PurpleLine today.
— Tejasvi Surya (@Tejasvi_Surya) November 7, 2023
Interacted with office-goers & commuters, who spoke on increasing the frequency of the trains on the Line & increasing the coverage of the Metro Network. Assured them that #EaseOfCommute of… pic.twitter.com/C6w8jBxw3T
ಮೈಸೂರು ರಸ್ತೆ ನಿಲ್ದಾಣದಿಂದ ಪ್ರಯಾಣ
ಮೈಸೂರು ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರವೇಶಿಸುವ ತೇಜಸ್ವಿ ಸೂರ್ಯ ಅವರು ಎಲ್ಲ ಪ್ರಯಾಣಿಕರಂತೆ ತಾವು ತಪಾಸಣೆಗೆ ಒಳಪಡುತ್ತಾರೆ. ಅಲ್ಲಿಂದ ಟಿಕೆಟ್ ಪಡೆದು ಒಳಹೋಗುವ ದೃಶ್ಯ ವಿಡಿಯೋದಲ್ಲಿದೆ. ಪ್ರಯಾಣದ ವೇಳೆ ಅವರು ಜನದಟ್ಟಣೆ, ರೈಲುಗಳ ಆವರ್ತನ ಖುದ್ದು ಅವರು ವೀಕ್ಷಿಸಿದ್ದಾರೆ.

ರೈಲು ಬರುವವರೆಗೆ ಸಹ ಪ್ರಯಾಣಿಕರ ಜತೆಗೆ ಅವರು ಸಂವಾದ ನಡೆಸಿದರು. ಕೆಲವರು ಸಂಸದರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು, ನಾಗರಿಕರು, ಮಹಿಳೆಯರು ಮತ್ತು ಐಟಿ ಉದ್ಯೋಗಿಗಳ ಜೊತೆಗೆ ಹೊಸದಾಗಿ ಆರಂಭವಾಗದ ಮೊದಲು ಐಟಿ ಮೆಟ್ರೋ ಕಾರಿಡಾರ್ ಕುರಿತು, ಸುಗಮ ಪ್ರಯಾಣ, ರೈಲುಗಳ ಆವರ್ತನ, ಸಮಯ, ಜನದಟ್ಟಣೆ ಕುರಿತು ಪ್ರಯಾಣಿಕರಿಂದ ಮಾಹಿತಿ ಪಡೆದರು.
ಮೆಟ್ರೋ ಜಾಲ ವಿಸ್ತರಣೆಗೆ ಕೇಂದ್ರ ಆದ್ಯತೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬೆಂಗಳೂರು ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ, ಪ್ರಯಾಣಿಕರಿಗೆ ಸುಗಮ ಪ್ರಯಾಣ ಒದಗಿಸಲು ಆದ್ಯತೆ ನೀಡುತ್ತದೆ. ಮೆಟ್ರೋ ಜಾಲ ವಿಸ್ತರಣೆಗೆ ಕೇಂದ್ರದ ಸಹಕಾರವಿದೆ.
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಹೋಗುವ ಪ್ರಮಾಣಿಕರಿಗೆ ಸುಗಮ ಪ್ರಯಾಣ ಶೀಘ್ರವೇ ಆರಂಭಗೊಳ್ಳಲಿದೆ. ಈ ಭಾಗದ ಮೆಟ್ರೋ ಹಳದಿ ಲೈನ್ (Yellow Line) ಆದಷ್ಟು ಶೀಘ್ರವೇ ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಸಂಸದ ಸೂರ್ಯ ಪ್ರಯಾಣಿಕರಿಗೆ ಭರವಸೆ ನೀಡಿದರು.
ಹಳದಿ ಮೆಟ್ರೋ ಮಾರ್ಗ ಮುಕ್ತಕ್ಕೆ ಮನವಿ
ಒಟ್ಟು 18.8 ಕಿಲೋ ಮೀಟರ್ ಉದ್ದದ ಈ ಹಳದಿ ಮೆಟ್ರೋ ಮಾರ್ಗ ನಿರ್ಮಾಣ ಕೆಲಸಗಳು ಅಂತಿಮ ಹಂತಕ್ಕೆ ಬಂದಿವೆ. ಕೆಲಸ ವಿಳಂಬ ಹಿನ್ನೆಲೆಯಲ್ಲಿ ಶೀಘ್ರವೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಅವರು ಮನವಿ ಮಾಡಿದ್ದರು.
ಇದರ ಬೆನ್ನಲ್ಲೆ ಅವರು ಪರ್ಪಲ್ ಲೈನ್‌ನಲ್ಲಿ ಮೆಟ್ರೋ ಸಂಚಾರ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಬಿಟ್ಟುಹೋಗಿ ಬೈಯಪ್ಪನಹಳ್ಳಿ ಮತ್ತು ಕೆ.ಆರ್ ಪುರಂ ಮಾರ್ಗದ ಜೋಡಣೆ ಬಳಿಕ ಪರ್ಪಲ್ ಲೈನ್ ನಲ್ಲಿ ಪ್ರಮಾಣಿಕರ ಬಳಕೆ ಹೆಚ್ಚಾಗಿದೆ. ಬೆಳಗ್ಗೆ ಮತ್ತು ಸಂಜೆ (ಪೀಕ್ ಹವರ್) ಸಮಯದಲ್ಲಿ ಕಿಕ್ಕಿರಿದು ಜನರು ಕಂಡು ಬರುತ್ತಾರೆ. ಹೀಗಾಗಿ ಇಲ್ಲಿ ಓಡಾಡುವ ರೈಲುಗಳ ಆವರ್ತನ ಹೆಚ್ಚಿಸುವ ಜೊತೆಗೆ ಅಧಿಕ ಬೋಗಿಗಳನ್ನು ಸೇವೆಗೆ ನಿಯೋಜಿಸಬೇಕು ಎಂಬ ಆಗ್ರಹವು ಕೇಳಿ ಬಂದಿದೆ.












Click it and Unblock the Notifications