ಮಹಿಳಾ ಸಹೋದ್ಯೋಗಿಯ ಅಶ್ಲೀಲ ವಿಡಿಯೋ ಮಾಡಿದ ಟೆಕ್ಕಿ ವಿರುದ್ಧ ದೂರು
ಬೆಂಗಳೂರು, ಫೆಬ್ರವರಿ 11: ಟೆಕ್ಕಿಯೊಬ್ಬ ಮಹಿಳಾ ಸಹೋದ್ಯೋಗಿ ಸ್ನಾನಮಾಡುವ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
24 ವರ್ಷದ ಮಹಿಳಾ ಟೆಕ್ಕಿ ಸ್ನಾನ ಮಾಡುವ ವಿಡಿಯೋ ಮಾಡಿ ಆತನೊಂದಿಗೆ ದೈಹಿಕ ಸಂಪರ್ಕ ಪಡೆಯದಿದ್ದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದ, ಆತನೊಂದಿಗೆ ಮಾತ್ರವಲ್ಲ ಆತನ ಇನ್ನೂ ಮೂರು ಸ್ನೇಹಿತರೊಂದಿಗೂ ಇರುವಂತೆ ಒತ್ತಾಯಿಸಿದ್ದ ಎಂದು ದೂರಿನಲ್ಲಿ ಆಕೆ ತಿಳಿಸಿದ್ದಾರೆ.
ಚಿಕ್ಕನಹಳ್ಳಿ ಸಮೀಪದಲ್ಲಿ ಎಂಎನ್‌ಸಿ ಕಂಪನಿಯೊಂದರಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿ ಆನಂದ್ ವಿರುದ್ಧ ಟೆಕ್ಕಿ ದೂರು ನೀಡಿದ್ದಾರೆ. ಟೆಕ್ಕಿ ಹಾಗೂ ಆತನ ಸ್ನೇಹಿತರೆಲ್ಲರೂ ಕೆಟ್ಟದಾಗಿ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದರು ಎಂದು ದೂರಿದ್ದಾರೆ.

ಕಳೆದ ಒಂದು ತಿಂಗಳಿಂದ ಆಕೆಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ, ಆತನ ಸ್ನೇಹಿತರು ಕೂಡ ಬೆದರಿಕೆಯ ಇ-ಮೇಲ್‌ಗಳನ್ನು ಕಳುಹಿಸುತ್ತಿದ್ದರು. ಮಹಿಳಾ ಟೆಕ್ಕಿ ಹಾಗೂ ಆನಂದ್ ಕುಟುಂಬಕ್ಕೆ ಉತ್ತಮ ಪರಿಚಯವಿತ್ತು. ಆತ ಮಹಿಳಾ ಟೆಕ್ಕಿ ಮನೆಗೆ ಬಂದಿದ್ದ, ಆ ವೇಳೆ ಹಾಲ್‌ನಲ್ಲಿ ಕುಳಿತುಕೊಳ್ಳಲು ಹೇಳಿ ಅವರು ಸ್ನಾನಕ್ಕೆ ಹೋಗಿದ್ದರು, ಈ ಸಂದರ್ಭದಲ್ಲಿ ಆನಂದ್ ವಿಡಿಯೋ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.











Click it and Unblock the Notifications