ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಯಿಕೊಂದಿದ್ದ ಟೆಕ್ಕಿ ಅಮೃತಾ, ಪ್ರಿಯಕರ ಶ್ರೀಧರ್ ಬಂಧನ

|
Google Oneindia Kannada News

ಬೆಂಗಳೂರು, ಫೆಬ್ರವರಿ 05 : ತಾಯಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಟೆಕ್ಕಿ ಅಮೃತಾ ಮತ್ತು ಆಕೆಯ ಪ್ರಿಯಕರ ಶ್ರೀಧರ್‌ನನ್ನು ಕೆ. ಆರ್. ಪುರ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 2ರಿಂದ ಅಮೃತಾ ನಾಪತ್ತೆಯಾಗಿದ್ದರು.

ಹತ್ಯೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಅಂಡಮಾನ್‌ನ ಪೋರ್ಟ್ ಬ್ಲೇರ್‌ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಟೆಕ್ಕಿ ಅಮೃತಾ ಪ್ರಿಯಕರ ಶ್ರೀಧರ್ ಜೊತೆ ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ತಾಯಿ ಕೊಂದು ಟೆಕ್ಕಿ ಪರಾರಿ; ಏರ್‌ಪೋರ್ಟ್‌ನಲ್ಲಿ ಬೈಕ್ ಪತ್ತೆತಾಯಿ ಕೊಂದು ಟೆಕ್ಕಿ ಪರಾರಿ; ಏರ್‌ಪೋರ್ಟ್‌ನಲ್ಲಿ ಬೈಕ್ ಪತ್ತೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶ್ರೀಧರ್ ಬೈಕ್ ಸಿಕ್ಕಿತ್ತು. ಇದರಿಂದಾಗಿ ವಿಮಾನದ ಮೂಲಕ ಪರಾರಿಯಾಗಿದ್ದಾರೆ ಎಂಬ ಆಧಾರದ ಮೇಲೆ ತನಿಖೆ ಕೈಗೊಂಡಿದ್ದ ಪೊಲೀಸರು ಪೋರ್ಟ್ ಬ್ಲೇರ್‌ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು!ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು!

ಟೆಕ್ಕಿ ಅಮೃತಾ ಫೆಬ್ರವರಿ 2ರ ಮುಂಜಾನೆ ನಿದ್ರೆ ಮಾಡುತ್ತಿದ್ದ ತಾಯಿ ನಿರ್ಮಲಾ ಹತ್ಯೆ ಮಾಡಿದ್ದರು. ಬಳಿಕ ಸಹೋದರ ಹರೀಶ್ ಹತ್ಯೆಗೆ ಯತ್ನ ನಡೆಸಿದ್ದಳು. ಸಹೋದರ ಅಸ್ವಸ್ಥಗೊಂಡ ಬಳಿಕ ಪ್ರಿಯಕರನಿಗೆ ಕರೆ ಮಾಡಿ, ಬೈಕ್‌ನಲ್ಲಿ ಪರಾರಿಯಾಗಿದ್ದಳು.

ಬೆಂಗಳೂರಲ್ಲಿ ಟೆಕ್ಕಿಯಿಂದ ತಾಯಿ ಹತ್ಯೆ; ಎರಡು ದಿನದಿಂದ ನಾಪತ್ತೆಬೆಂಗಳೂರಲ್ಲಿ ಟೆಕ್ಕಿಯಿಂದ ತಾಯಿ ಹತ್ಯೆ; ಎರಡು ದಿನದಿಂದ ನಾಪತ್ತೆ

ಫೆಬ್ರವರಿ 2ರಂದು ಪರಾರಿ

ಫೆಬ್ರವರಿ 2ರಂದು ಪರಾರಿ

ಕೆ. ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆಬ್ರವರಿ 2ರಂದು ಟೆಕ್ಕಿ ಅಮೃತಾ ತಾಯಿ ನಿರ್ಮಲಾರನ್ನು ಹತ್ಯೆ ಮಾಡಿದ್ದಳು. ಬಳಿಕ ಸಹೋದರ ಹರೀಶ್ ಹತ್ಯೆಗೆ ಪ್ರಯತ್ನ ನಡೆಸಿದ್ದಳು. ಸಹೋದರ ಅಸ್ವಸ್ಥಗೊಂಡ ಬಳಿಕ ಪರಾರಿಯಾಗಿದ್ದಳು.

ವಿಮಾನ ನಿಲ್ದಾಣದಲ್ಲಿ ಬೈಕ್ ಪತ್ತೆ

ವಿಮಾನ ನಿಲ್ದಾಣದಲ್ಲಿ ಬೈಕ್ ಪತ್ತೆ

ಹತ್ಯೆಯ ಬಳಿಕ ಪ್ರಿಯಕರ ಶ್ರೀಧರ್ ಜೊತೆ ಅಮೃತಾ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶ್ರೀಧರ್ ಬೈಕ್ ಪತ್ತೆಯಾಗಿತ್ತು. ಈ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದರು.

ಅಂಡಮಾನ್‌ನಲ್ಲಿ ಬಂಧನ

ಅಂಡಮಾನ್‌ನಲ್ಲಿ ಬಂಧನ

ಅಮೃತಾ ಮತ್ತು ಶ್ರೀಧರ್ ಅಂಡಮಾನ್‌ಗೆ ಪ್ರಯಾಣ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಬೆಂಗಳೂರು ಪೊಲೀಸರ ತಂಡ ಅಂಡಮಾನ್‌ಗೆ ಹೋಗಿತ್ತು. ಪೋರ್ಟ್ ಬ್ಲೇರ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತದೆ.

ಕೊಲೆಯ ಬಗ್ಗೆ ಹಲವು ಸಂಶಯ

ಕೊಲೆಯ ಬಗ್ಗೆ ಹಲವು ಸಂಶಯ

ಟೆಕ್ಕಿ ಅಮೃತಾ ತಾಯಿಯನ್ನು ಕೊಲೆ ಮಾಡಲು ಕಾರಣವೇನು? ಎಂಬುದು ಇನ್ನೂ ನಿಗೂಢವಾಗಿದೆ. 15 ಲಕ್ಷ ಸಾಲ ಮಾಡಿದ್ದೆ. ಸಾಲ ಕೇಳುವವರು ಮನೆಗೆ ಬರುತ್ತಾರೆ. ಇದರಿಂದ ಮರ್ಯಾದೆ ಹೋಗುತ್ತದೆ ಎಂದು ಹತ್ಯೆ ಮಾಡಿದ್ದಾಗಿ ಸಹೋದರನ ಮುಂದೆ ಅಮೃತಾ ಹೇಳಿದ್ದಳು. ಆದರೆ, ಪ್ರಿಯಕರನ ಜೊತೆ ಪರಾರಿಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ತನಿಖೆಯ ಬಳಿಕ ಸತ್ಯಾಂಶ ತಿಳಿಯಲಿದೆ.

English summary
Techie Amrutha and her lover Shridar arrested by K.R.Puram police at Port Blair, Andaman. Amrutha who murdered mother and attempt to kill brother escaped with lover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X