• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೆಕ್ಕಿ ಮೇಲೆ ಅಣ್ಣನ ಸ್ನೇಹಿತನಿಂದಲೇ ನಿರಂತರ ಅತ್ಯಾಚಾರ, ದೂರು

|

ಬೆಂಗಳೂರು, ಫೆಬ್ರವರಿ 23: ಮಹಿಳಾ ಟೆಕ್ಕಿಯ ಮೇಲೆ ಅತ್ಯಾಚಾರವೆಸಗಿ, ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಸಹೋದರನ ಸ್ನೇಹಿತನ ವಿರುದ್ಧ ದೂರು ದಾಖಲಿಸಲಾಗಿದೆ.

ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ

29 ವರ್ಷದ ಟೆಕ್ಕಿ ತನ್ನ ಅಣ್ಣನ ಸ್ನೇಹಿತನ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ತೇಜಸ್ವಿನಿ ನಗರದ ನಿವಾಸಿ ಬಾಲಾಜಿ ಅವರ ವಿರುದ್ಧ ದೂರು ದಾಖಲಿಸಿದ್ದಾಳೆ.

ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್

ಬಾಲಾಜಿ ಸ್ಟಾಕ್ ಅಂಡ್ ಶೇರ್ಸ್ ಡೀಲಿಂಗ್ ಮಾಡುತ್ತಿದ್ದ, 2016ರಲ್ಲಿ ಟೆಕ್ಕಿಯ ಸಹೋದರ ಹಾಗೂ ಬಾಲಾಜಿ ಮಧ್ಯೆ ವೈಮನಸ್ಸು ಉಂಟಾಗಿತ್ತು. ಹಾಗಾಗಿ ಟೆಕ್ಕಿ ಸಹೋದರನಿಗೆ ಬುದ್ಧಿಕಲಿಸಲು ಸಂಚು ರೂಪಿಸಿದ್ದ.

ಕೆಲಸದ ಮೇಲೆ ಊರಿಗೆ ಹೋಗಿದ್ದಾಗ ಬಾಲಾಜಿ ಟೆಕ್ಕಿಯ ಮನೆಗೆ ತೆರಳಿ ಆಕೆಯ ಮೇಲೆ ಅತ್ಯಾಚಾರ ವೆಸಗಿ ಅದರ ವಿಡಿಯೋವನ್ನು ಮಾಡಿದ್ದ. ಟೆಕ್ಕಿಗೆ ಈ ವಿಡಿಯೋವನ್ನಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಒಡ್ಡಿದ್ದ.

ಬಾಲಕಿಯ ಕೊಲೆ, ಅತ್ಯಾಚಾರ ಶಂಕೆ: ಮಾಲೂರಿನಲ್ಲಿ ಉಗ್ರ ಪ್ರತಿಭಟನೆ

ಆ ವಿಡಿಯೋವನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿ ಆತನಿಗೆ ಹಣ, ಒಡವೆಗಳನ್ನು ನೀಡಿದ್ದಳು. ಆದರೂ ಆತನ ಕಿರುಕುಳ ವಿಪರೀತವಾದ ಕಾರಣ ದೂರು ದಾಖಲಿಸಿದ್ದಾಳೆ.

English summary
a 29-year-old techie, recently brought forward a horrifying complaint against her brother's former friend. Accused Balaji of having raped her over almost one year and recording her ordeal on his mobile phone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X