'ಲೇ... ಬ್ರೆಶ್ ಹಾಕಿ ಚೆನ್ನಾಗಿ ಉಜ್ರೋ.. ಕ್ಲೀನ್ ಆಗ್ಲಿ...' ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಚಗೊಳಿಸಿದ ಶಿಕ್ಷಕಿ ಸಸ್ಪಂಡ್!
ಬೆಂಗಳೂರು ಡಿಸೆಂಬರ್ 22: 'ಲೇ... ಬ್ರೆಶ್ ಹಾಕಿ ಚೆನ್ನಾಗಿ ಉಜ್ರೋ.. ಕ್ಲೀನ್ ಆಗ್ಲಿ...' ಹೀಗೆ ಹೇಳ್ತಾ ಮಕ್ಕಳ ಕೈಯಲ್ಲಿ ಶಾಲೆಯ ಶೌಚಾಲಯವನ್ನು ಕ್ಲೀನ್ ಮಾಡಿಸಿದರೆಗೆ ಹೇಗೆ ಅನಿಸಬೇಡ? ಇಂಥಹದೊಂದು ಘಟನೆ ಬೆಳಗೂರಿನಲ್ಲಿ ನಡೆದಿದೆ. ವಿದ್ಯಾರ್ಥಿಗಳ ಕೈಯಲ್ಲಿ ಶಿಕ್ಷಕಿಯೊಬ್ಬರು ಶಾಲೆಯ ಶೌಚಾಲಯವನ್ನು ಸ್ವಚ್ಚಗೊಳಿಸಿದ ಅಸಹ್ಯಕರ ಘಟನೆ ನಡೆದಿದೆ.
ಬೆಂಗಳೂರಿನ ಅಂದ್ರಹಳ್ಳಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ಘಟನೆ ನಡೆದಿದೆ. ಹೀಗಾಗಿ ಶಾಲಾ ಮುಖ್ಯ ಶಿಕ್ಷಕಿಯಾದ ಲಕ್ಷ್ಮೀ ದೇವಮ್ಮ ಅವರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಅಂದ್ರಹಳ್ಳಿಯಲ್ಲಿ ಶಾಲೆಯಲ್ಲಿ ಇಂತ ಘಟನೆ ನಡೆಯಬಾರದಿತ್ತು. ಮಕ್ಕಳ ಕೈಯಲ್ಲಿ ಶೌಚಾಲಯ ಕ್ಲೀನ್ ಮಾಡಿಸಿರೋದು ಇದು ಖಂಡನೀಯ. ಇದನ್ನು ನಾನು ಖಂಡಿಸುತ್ತೇನೆ. ಇಂತಹ ಘಟನೆಗಳು ಇನ್ಮುಂದೆ ಆಗಬಾರದು. ಈಗಾಗಲೇ ಶಾಲೆಯ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಘಟನೆ ಹಿಂದೆ ಯಾರು ಇದ್ದಾರೆ ಅಂತ ಇಲಾಖೆ ತನಿಖೆ ನಡೆಸಲಿದೆ. ಈ ರೀತಿ ಘಟನೆಗಳು ನಡೆಯದಂತೆ ಕಠಿಣ ಕ್ರಮಗಳನ್ನು ಜಾರಿಗೆ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.
600 ಜನ ಮಕ್ಕಳಿರುವ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಶೆಂಗಾ ಚಿಕ್ಕಿ (ಶೆಂಗಾ ಸ್ವೀಟ್) ಕೊಡುವ ಆಸೆ ಹುಟ್ಟಿಸಿ ಶೌಚಾಲಯ ಕ್ಲೀನ್ ಮಾಡಿಸುತ್ತಾರಂತೆ. ಸಾಮಾನ್ಯವಾಗಿ ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆಯನ್ನು ಉಚಿತವಾಗಿ ಸರ್ಕಾರ ನೀಡುತ್ತದೆ. ಆದರೆ ಶಿಕ್ಷಕರು ಮಕ್ಕಳಿಗೆ ಇಂಥಹ ಆಸೆ ಹುಟ್ಟಿಸುವುದು ನಿಜಕ್ಕೂ ಅಸಹ್ಯಕರವಾಗಿದೆ.
ಇಲ್ಲಿ ಶೌಚಾಲಯ ಕ್ಲೀನ್ ಮಾಡಲು ಯಾರು ಇಲ್ಲಿ ಸರತಿಯಲ್ಲಿ ನಿತ್ಯ ಕೆಲ ಮಕ್ಕಳೇ ಶೌಚಾಲಯವನ್ನು ಕ್ಲೀನ್ ಮಾಡಬೇಕು. ಮಕ್ಕಳೇ ಶಿಕ್ಷಕರು ಊಟ ಮಾಡುವ ತಟ್ಟೆ ತೊಳೆಯಬೇಕು ಎಂದು ಕೇಳಿ ಬಂದಿವೆ. ಈ ವಿಷಯ ಹೊರ ಬೀಳುತ್ತಿದ್ದಂತೆ ಪೋಷಕರು ಪ್ರತಿಭಟನೆ ಮಾಡಿದ್ದಾರೆ. ಈ ಹಿಂದೆ ಇಂಥಹ ಘಟನೆ ನಡೆದಿತ್ತು. ಪೋಷಕರು ದೂರು ಕೂಡ ನೀಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಇದಕ್ಕೆ ಯಾವುದೇ ಸಾಕ್ಷಿ ಇಲ್ಲದೆ ಪ್ರಕರಣವನ್ನು ಕೈಬಿಡಲಾಗಿತ್ತು. ಈಗ ವಿಡಿಯೋ ವೈರಲ್ ಆಗಿದ್ದು ಪೋಷಕರು ಆಕ್ರೋಶಗೊಂಡಿದ್ದಾರೆ.












Click it and Unblock the Notifications