'ತಟ್ಟೆ ಇಡ್ಲಿ ರಾದ್ಧಾಂತ' ಪತ್ತೆದಾರಿ ಹಾಸ್ಯನಾಟಕ ಪ್ರದರ್ಶನ

ಬೆಂಗಳೂರು, ಆಗಸ್ಟ್,12 : ಇತ್ತೀಚಿನ ರಂಗಭೂಮಿ ಪರಂಪರೆಯಲ್ಲಿ ಹವ್ಯಾಸಿ ರಂಗ ತಂಡಗಳ ಪಾತ್ರ ಹಿರಿದುದಾಗಿದೆ. ಬಿಡುವಿನ ವೇಳೆಯಲ್ಲಿ ತಾಲೀಮು ನಡೆಸಿ ರಂಗಪ್ರದರ್ಶನಗೈಯ್ಯುವ ಇವು ರಂಗಭೂಮಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದೆ.

ಮೈಸೂರಿನ ರಂಗವಲ್ಲಿ ಎಂಬ ಹವ್ಯಾಸಿ ತಂಡವು ಆಗಸ್ಟ್ 13ರ ಗುರುವಾರ ಸಂಜೆ 7.30ಕ್ಕೆ ಬೆಂಗಳೂರಿನ ಹನುಮಂತ ನಗರದ ಕೆ.ಹೆಚ್‌. ಕಲಾಸೌಧದಲ್ಲಿ 'ತಟ್ಟೆ ಇಡ್ಲಿ ರಾದ್ಧಾಂತ' ಎಂಬ ನಾಟಕ ಪ್ರದರ್ಶನ ಏರ್ಪಡಿಸಿದೆ.[ಬೆಂಗಳೂರಿನ ಯಕ್ಷದಶಾಹಕ್ಕೆ ಹೋಗೋಣ ಬನ್ನಿ]

Tatte idli raadantha– A suspence comedy play in Bengaluru K.H Kalasoudha

ರಂಗಾಯಣದ ಮಾಯಸಂದ್ರ ಕೃಷ್ಣ ಪ್ರಸಾದ್ ರಚಿಸಿ ನಿರ್ದೇಶಿಸಿರುವ ಈ ನಾಟಕವು ಪತ್ತೆದಾರಿ ಹಾಸ್ಯ ನಾಟಕವಾಗಿದ್ದು, ಕೆಲವು ಗಂಟೆ ಮನಸ್ಸು ತುಂಬಾ ನಗಲು ಯಾವುದೇ ತೊಂದರೆ ಇಲ್ಲ.

ರಂಗವಿನ್ಯಾಸ ಹೆಚ್‌.ಕೆ ದ್ವಾರಕಾನಾಥ್ ಅವರಿಂದ ನಿರ್ವಹಿಸಲ್ಪಟ್ಟಿದ್ದು, ಉದಿತ್ ಹರಿಸತ್ ಅವರ ಹಿನ್ನೆಲೆ ಸಂಗೀತ ಹಾಗೂ ಮಹೇಶ್‌ ಕುಮಾರ್‌ ಅವರ ಪ್ರಸಾದನ, ಹರಿಪ್ರಸಾದ್ ಕಶ್ಯಪ್ ವಸ್ತ್ರ ವಿನ್ಯಾಸ ಜವಾಬ್ದಾರಿ ವಹಿಸಿಕೊಂಡಿದ್ದು, ಕೃಷ್ಣಕುಮಾರ್ ನಾರ್ಣಕಜೆ ಅವರ ಬೆಳಕಿನ ವಿನ್ಯಾಸವಿದ್ದು, ಇವರೆಲ್ಲರ ಸಮಾಗಮದಲ್ಲಿ ಬಾಯಿತುಂಬಾ, ಮನಸ್ಸಿನ ತುಂಬಾ ನಕ್ಕು, ನಗಿಸಲು ಅಣಿಯಾಗಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ
ಮೊ.ಸಂಖ್ಯೆ : 9964656482/ 9590259095
ಇ-ಮೇಲ್ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+