ಹಲಸೂರು ಕೆರೆ ಸ್ವಚ್ಛ ಮಾಡಿದ ತಮಿಳುನಾಡಿನ ತಂಬಿಗಳು

ಬೆಂಗಳೂರು, ಅಕ್ಟೋಬರ್ 11: ತಮಿಳುನಾಡು-ಕರ್ನಾಟಕ ಬಹಳಷ್ಟು ಸಾಮ್ಯತೆಗಳಿದ್ದರೂ ಸಹ ಕುಡಿಯುವ ನೀರಿನ ವಿಷಯಕ್ಕೆ ಆಗಾಗ್ಗೆ ಎರಡೂ ದ್ರಾವಿಡ ರಾಜ್ಯಗಳ ನಡುವೆ ವೈರತ್ವದ ಹೊಗೆ ಆಡುತ್ತಲೇ ಇರುತ್ತದೆ. ಆದರೆ ಆ ದ್ವೇಷದ ಗೆರೆ ಅಳಿಸುವ ಕಾರ್ಯವೊಂದು ನಿನ್ನೆ ನಡೆದಿದೆ.

ಬರೋಬ್ಬರಿ 1000 ಮದ್ರಾಸಿ ತಂಬಿ (ತಮಿಳುನಾಡಿನ ಸಹೋದರರು) ಬೆಂಗಳೂರಿನ ಪ್ರಮುಖ ಕೆರೆಯಾದ ಅಲಸೂರು ಕೆರೆಯನ್ನು ಸ್ವಚ್ಛ ಮಾಡಿದ್ದಾರೆ.

ಹೌದು, ಭಾರತೀಯ ಸೇನೆಯ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಫ್‌ನ ಸ್ಯಾಪರ್ಸ್ಸ್‌ (ಸಾಮಾಜಿಕ ಕಾರ್ಯಗಳಿಗೆ ಯೋಜಿತವಾದ ಯೋಧರು) ನಿನ್ನೆ (ಬುಧವಾರ) ಬೆಳಿಗ್ಗೆಯಿಂದ ಸತತ 8-9 ಗಂಟೆಗಳ ಕಾಲ ಅಲಸೂರು ಕೆರೆಯನ್ನು ಸ್ವಚ್ಛ ಮಾಡಿದ್ದಾರೆ.

Tamilnadu soldier team cleans Bengalurus halasuru lake

ಬೆಳಿಗ್ಗೆಯಿಂದ ದುಡಿದ ಯೋಧರು ನೀರಿನಿಂದ ಟನ್‌ಗಟ್ಟಲೆ ಕೊಳಕನ್ನು ಹೊರ ತೆಗೆದಿದ್ದಾರೆ. ಕೊಳಕು ನೀರಿನಲ್ಲಿ ಬೆಳೆದಿದ್ದ ಜೊಂಡು, ಪ್ಲಾಸ್ಟಿಕ್‌ ಬಾಟಲಿಗಳು, ಇನ್ನಿತರ ವಿಷಕಾರಿ ಘನತ್ಯಾಜ್ಯಗಳನ್ನು ನೀರಿನಿಂದ ಹೊರತೆಗೆದು ಸ್ವಚ್ಛತೆ ಮಾಡಿದ್ದಾರೆ.

ಇದೇ ತಂಡ ಏಪ್ರಿಲ್‌ನಲ್ಲಿ ಇದೇ ಅಲಸೂರು ಕೆರೆಯನ್ನು ಸ್ವಚ್ಛಗೊಳಿಸಿತ್ತು ಆಗ ಸರಿಸುಮಾರು 70 ಟನ್ ಕಸ ಹೊರತೆಗೆದಿತ್ತು. ಆದರೆ ಈ ಬಾರಿ ಅದಕ್ಕೂ ಹೆಚ್ಚು ಟನ್ ಕಸ ಹೊರತೆಗೆದಿರುವುದಾಗಿ ತಂಡ ಹೇಳಿದೆ. ಬಿಬಿಎಂಪಿ ಕಸದ ವಾಹನಗಳೇ ಕೆರೆಗೆ ಕಸ ಸುರಿಯುತ್ತಿರುವ ಬಗ್ಗೆ ಎಂಇಜೆ ತಂಡ ಬೇಸರ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+