ಮಾರ್ಚ್ 1ರಿಂದ ಪೀಣ್ಯ-ಸಂಪಿಗೆ ರಸ್ತೆಗೆ ಮೆಟ್ರೋದಲ್ಲಿ ಬನ್ನಿ

ಬೆಂಗಳೂರು, ಫೆ.24 : ಪೀಣ್ಯದಿಂದ ಸಂಪಿಗೆ ರಸ್ತೆ ನಡುವೆ ಮೆಟ್ರೋದಲ್ಲಿ ಸಂಚರಿಸುವ ಬೆಂಗಳೂರಿಗರ ಕನಸು ನನಸಾಗುವ ಕಾಲ ಹತ್ತಿರವಾಗಿದೆ. ಪೀಣ್ಯ ಸಂಪಿಗೆ ರಸ್ತೆ ನಡುವಿನ ನಮ್ಮ ಮೆಟ್ರೋ ಸಂಚಾರ ಫೆ.28ರಂದು ಉದ್ಘಾಟನೆಯಾಗಲಿದ್ದು, ಮಾರ್ಚ್ 1ರಂದ ಸಾರ್ವಜನಿಕ ಸಂಚಾರಕ್ಕೆ ಮಕ್ತವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಪೀಣ್ಯ-ಸಂಪಿಗೆ ರಸ್ತೆ ನಡುವೆ ಸಾರ್ವಜನಿಕ ಸಂಚಾರ ಆರಂಭಿಸಲು ಯಾವುದೇ ಅಡೆತಡೆ ಇಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್ ಖರೋಲ ಹೇಳಿದ್ದಾರೆ. ಫೆ. 28ರಂದು ಸಂಜೆ 6ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Swastik and Peenya

ಕೇಂದ್ರ ರೈಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರೀಚ್ 3 ಮತ್ತು 3ಎ ಮಾರ್ಗದ 9.9 ಕಿ.ಮೀ ಅಂತರದ ಸಂಪಿಗೆ ರಸ್ತೆ-ಪೀಣ್ಯ ನಡುವೆ 10 ನಿಲ್ದಾಣಗಳು ಬರಲಿದ್ದು, ರೈಲ್ವೆ ಸುರಕ್ಷತಾ ಆಯುಕ್ತರು ಸಾರ್ವಜನಿಕ ಸಂಚಾರ ಆರಂಭಿಸಲು ಒಪ್ಪಿಗೆ ನೀಡಿದ್ದಾರೆ. [ಪೀಣ್ಯ-ಸ್ವಸ್ತಿಕ್ ಸಂಚಾರಕ್ಕೆ ಒಪ್ಪಿಗೆ]

ಕೆಂಪೇಗೌಡ ಬಸ್ ನಿಲ್ದಾಣ, ನಗರ ರೈಲ್ವೇ ನಿಲ್ದಾಣದಿಂದ ಈ ಮಾರ್ಗವು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವುದರಿಂದ ಈ ಭಾಗದ ಸಾರಿಗೆ ವ್ಯವಸ್ಥೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಸಂಚಲನ ಉಂಟು ಮಾಡುವ ನಿರೀಕ್ಷೆ ಇದೆ. ಪ್ರತಿನಿತ್ಯ ಸುಮಾರು 70-80 ಸಾವಿರ ಮಂದಿ ಈ ಮಾರ್ಗದಲ್ಲಿ ಪ್ರಯಾಣಿಸಬಹುದು ಎಂದು ನಿರೀಕ್ಷಿಸಲಾಗಿದ್ದು, ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೊ ರೈಲು ಸಂಚರಿಸಲಿದ್ದು, ಕೇವಲ 18 ನಿಮಿಷಗಳಲ್ಲಿ ಪೀಣ್ಯ ತಲುಪಲಿದೆ.

ನಿಲ್ದಾಣಗಳು : ಪೀಣ್ಯ-ಸಂಪಿಗೆ ರಸ್ತೆ ಮಾರ್ಗದಲ್ಲಿ ಸಂಪಿಗೆ ರಸ್ತೆ, ಮಲ್ಲೇಶ್ವರಂ, ಕುವೆಂಪು ರಸ್ತೆ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್‌, ಸಾಬೂನು ಕಾರ್ಖಾನೆ, ಯಶವಂತಪುರ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ ನಿಲ್ದಾಣಗಳು ಬರಲಿವೆ. ಇವುಗಳಲ್ಲಿ 6 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದವುಗಳ ಕಾಮಗಾರಿ ಶೇ 95ರಷ್ಟಾಗಿದೆ.

ಪ್ರಯಾಣ ದರವೆಷ್ಟು : ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಡುವೆ ಗರಿಷ್ಠ 15 ಮತ್ತು ಕನಿಷ್ಠ 10 ರೂ ಪ್ರಯಾಣದರವಿದೆ. ಸದ್ಯ ಬೆಲೆ ಏರಿಕೆ ಆಗಿರುವ ಹಿನ್ನಲೆಯಲ್ಲಿ ಈ ದರವನ್ನು ಪರಿಷ್ಕರಿಸಲಾಗಿದೆ. ಪೀಣ್ಯ ಸಂಪಿಗೆ ರಸ್ತೆ ನಡುವಿನ ಪ್ರಯಾಣ ದರ 23 ರೂ. ಎಂದು ನಿಗದಿಪಡಿಸಲಾಗಿದೆ. ಸಂಪಿಗೆ ರಸ್ತೆ-ಪೀಣ್ಯ (ರೀಚ್ 3 ಮತ್ತು 3ಎ) ಮಾರ್ಗವು ನಾಗಸಂದ್ರದವರೆಗೆ ವಿಸ್ತರಣೆಯಾಗಲಿದ್ದು, ಈ ಮೂರು ಕಿ.ಮೀ. ಉದ್ದದ ವಿಸ್ತರಣಾ ಮಾರ್ಗವು 3-4 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. [ಮೆಟ್ರೋ ಕಾಮಗಾರಿ 2015ಕ್ಕೆ ಪೂರ್ಣ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+