ಅರಣ್ಯ ಹಕ್ಕು ಕಾಯಿದೆ: ಸುಪ್ರೀಂನಿಂದ ಕರ್ನಾಟಕ ಸರ್ಕಾರಕ್ಕೆ ತರಾಟೆ

ಬೆಂಗಳೂರು, ಜೂನ್ 16: ಅರಣ್ಯ ಹಕ್ಕು ಕಾಯಿದೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿಯಲ್ಲಿ ಕರ್ನಾಟಕ ಸರ್ಕಾರ ನಿಗದಿತ ಅವಧಿಯಲ್ಲಿ ಮಾಹಿತಿಯ ಅಂಶವನ್ನು ದಾಖಲಿಸಿಲ್ಲ.

ಈ ಕಾರಣದಿಂದ ಕರ್ನಾಟಕ ಸರ್ಕಾರ ರೂ. 50 ಸಾವಿರ ದಂಡ ಪಾವತಿಸುವುದರೊಂದಿಗೆ 2 ವಾರದ ಅವಧಿ ಒಳಗೆ ಪ್ರಮಾಣಪತ್ರ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ. ಈ ವಿಷಯವನ್ನು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ರಾಜ್ಯ ಸಮಿತಿ ಪ್ರಧಾನ ಸಂಚಾಲಕ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.

Supreme Court interim order on Karnataka government forest rights

ವನ್ಯಜೀವಿ ಟ್ರಸ್ಟ ಹಾಗೂ ಇನ್ನಿತರ ಸರ್ಕಾರೇತರ ಸಂಸ್ಥೆಗಳು ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕೃತಗೊಂಡ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಿ ಸದರಿ ಅತಿಕ್ರಮಿಸಿರುವ ಕ್ಷೇತ್ರಗಳನ್ನು ಅರಣ್ಯೀಕೃತಗೊಳಿಸಬೇಕೆಂಬ ನಿರ್ದೇಶನವನ್ನು ಎಲ್ಲಾ ರಾಜ್ಯಗಳಿಗೂ ಆದೇಶಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಸದರಿ ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದಿಂದಲೇ ಸೂಕ್ತ ಮಾಹಿತಿ ಪ್ರಮಾಣಪತ್ರ ಅಪೇಕ್ಷಿಸಿದ್ದು ರಾಜ್ಯ ಸರ್ಕಾರವು ಮೇಲೆ ತಿಳಿಸಿರುವ ಅವಧಿಯ ಒಳಗೆ ಪ್ರಮಾಣಪತ್ರ ಸಲ್ಲಿಸಲು ವೈಫಲ್ಯವಾಗಿರುವುದರಿಂದ ಮೇಲಿನಂತೆ ಆದೇಶ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+