ಭಾನುವಾರ ಲಾಕ್‌ಡೌನ್: ಮಾಂಸದ ಅಂಗಡಿ ಓಪನ್, ಬೆಂಗಳೂರಲ್ಲಿ ಏನಿರಲ್ಲ?
ಬೆಂಗಳೂರು, ಜುಲೈ 3: ಕೊರೊನಾ ವೈರಸ್ ನಿಯಂತ್ರಿಸುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿದೆ. ಜುಲೈ 5 ರಿಂದ ಆಗಸ್ಟ್ 2ನೇ ತಾರೀಕಿನವರೆಗೂ ಪ್ರತಿ ಭಾನುವಾರ ಲಾಕ್‌ಡೌನ್ ಅನ್ವಯವಾಗಲಿದೆ.
Recommended Video
ನಾಳೆ ರಾಜ್ಯದಲ್ಲಿ ಮೊದಲ ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಲಿದ್ದು, ಈ ಹಿನ್ನೆಲೆ ಬಿಬಿಎಂಪಿ ಆಯುಕ್ತರು ಸಿಲಿಕಾನ್ ಸಿಟಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು, ಅದನ್ನು ಬಿಟ್ಟು ಸುಮ್ ಸುಮ್ಮನೆ ನಗರದಲ್ಲಿ ಸುತ್ತಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ. ಹಾಗಾದ್ರೆ, ಭಾನುವಾರ ಬೆಂಗಳೂರಿನಲ್ಲಿ ಏನಿರುತ್ತೆ? ಏನಿರಲ್ಲ? ಮುಂದೆ ಓದಿ....

ಸೋಮವಾರ ಬೆಳಿಗ್ಗೆವರೆಗೂ ಲಾಕ್‌ಡೌನ್
ಭಾನುವಾರ ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆ ಬೆಂಗಳೂರಿನಲ್ಲಿ ಇಂದಿನಿಂದಲೇ ಲಾಕ್‌ಡೌನ್ ಮಾಡಲಾಗುವುದು ಬಿಬಿಎಂಪಿ ಆಯುಕ್ತ ಮಾಹಿತಿ ನೀಡಿದ್ದಾರೆ. ಪ್ರತಿದಿನ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿದ್ದು, ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೂ ಸಿಲಿಕಾನ್ ಸಿಟಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರಲಿದೆ.

ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ
ಲಾಕ್‌ಡೌನ್ ನಿಯಮದಂತೆ ಈ ಅವಧಿಯಲ್ಲಿ ಕೇವಲ ಅಗತ್ಯ ಸೇವೆ ಪೂರೈಕೆ ಮಾಡುವ ವಾಹನ ಮತ್ತು ವ್ಯಕ್ತಿಗಳ ಸಂಚಾರಕ್ಕೆ, ಅಗತ್ಯ ವಸ್ತುಗಳ ಮಾರಾಟಕ್ಕೆ ಹಾಗೂ ತುರ್ತು ವೈದ್ಯಕೀಯ ಸೇವೆಯ ಅವಶ್ಯಕತೆ ಇದ್ದವರಿಗೆ ಮಾತ್ರ ಹೊರಗೆ ಸಂಚರಿಸಲು ಅನುಮತಿ ನೀಡಲಾಗುತ್ತದೆ ಎಂದು ಬಿಬಿಎಂಪಿ ಸೂಚಿಸಿದೆ.

ಮಟನ್ ಅಂಗಡಿ ತೆರೆಯಲು ಅನುಮತಿ
ಭಾನುವಾರದ ಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿ ಮಟನ್ ಅಂಗಡಿ ತೆರೆಯಲು ಅನುಮತಿ ಬೆಂಗಳೂರು ಆಯುಕ್ತರು ಅನುಮತಿ ನೀಡಿದ್ದಾರೆ. ಈ ವಿಚಾರ ಮಾಂಸಪ್ರಿಯರಿಗೆ ಖುಷಿ ನೀಡಿದೆ. ಆದರೆ, ರಾಜ್ಯಾದಂತ್ಯ ಮಟನ್ ಮಾರಾಟಕ್ಕೆ ಅನುಮತಿ ಇದೆಯಾ ಸ್ಪಷ್ಟನೆ ಇಲ್ಲ. ಆದರೆ, ಸಿಲಿಕಾನ್ ಸಿಟಿಯಲ್ಲಿ ಮಾರಾಟ ಮಾಡಬಹುದು ಎಂದು ಅನಿಲ್ ಕುಮಾರ್ ತಿಳಿಸಿದ್ದಾರೆ.

ಸಮ್ ಸುಮ್ಮನೆ ಹೊರಗೆ ಬಂದರೆ ಕೇಸ್
ಭಾನುವಾರ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಇದನ್ನು ಮೀರಿ ಸಮ್ ಸುಮ್ಮನೆ ಹೊರಗೆ ಬಂದವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದೆ.












Click it and Unblock the Notifications