ಬೆಂಗಳೂರು : ಬಾಲಕಿಯನ್ನು ಕೊಂದಿದ್ದ ಕಾಮುಕ ಸಿಕ್ಕಿಬಿದ್ದ
ಬೆಂಗಳೂರು, ಫೆ. 9 : ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಶಂಕಿತನ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದರು.
ಬಂಧಿತ ಆರೋಪಿಯನ್ನು ಅಂಬರೀಶ್ (21) ಎಂದು ಗುರುತಿಸಲಾಗಿದೆ. ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಈತ ಮದ್ಯ ವ್ಯಸನಿಯಾಗಿದ್ದ. ಫೆಬ್ರವರಿ 5ರಂದು ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಈತ ಪರಾರಿಯಾಗಿದ್ದ. [2 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ]

ಭಾನುವಾರ ಸಂಜೆ ಶಿಡ್ಲಘಟ್ಟ ರಸ್ತೆಯ ಜಂಗಮಕೋಟೆ ಕ್ರಾಸ್ ಬಳಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಅಂಗಡಿಯೊಂದರ ಬಳಿ ಕುಳಿತಿದ್ದ ಈತನನ್ನು ನೋಡಿದ ಜನರು ಥಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. [ವಿಡಿಯೋ ನೋಡಿ, ಅತ್ಯಾಚಾರಿಗಳನ್ನು ಹಿಡಿದುಕೊಡಿ]
ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಅತ್ಯಚಾರ ಮತ್ತು ಕೊಲೆ ಮಾಡಿರುವುದಾಗಿ ಅಂಬರೀಶ್ ತಪ್ಪೊಪ್ಪಿಕೊಂಡಿದ್ದಾನೆ.
ಮಗುವನ್ನು ಅಂಬರೀಶ್ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದನ್ನು ಆಧರಿಸಿ ಶನಿವಾರ ಸೂಲಿಬೆಲೆ ಪೊಲೀಸರು ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿದ್ದರು. ಆರೋಪಿ ಅಂಬರೀಶ್ ಕೇಶ ವಿನ್ಯಾಸವು ವಿಭಿನ್ನವಾಗಿ ಇದ್ದದ್ದು ಆತನ ಪತ್ತೆಗೆ ಸಹಕಾರ ನೀಡಿದೆ.












Click it and Unblock the Notifications