ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆಯೇ ವರುಣನ ಆರ್ಭಟ
ಬೆಂಗಳೂರು, ಸೆಪ್ಟೆಂಬರ್ 25: ಭಾನುವಾರ ರಜೆಯನ್ನು ಸವಿದು ಸೋಮವಾರ ಬೆಳಗ್ಗೆ ತಮ್ಮ ಕರ್ತವ್ಯಗಳಿಗೆ ಹಾಜರಾಗಲು ಸಿದ್ಧವಾಗುತ್ತಿದ್ದ ನಗರದ ಲಕ್ಷಾಂತರ ಉದ್ಯೋಗಿಗಳಿಗೆ ಸೋಮವಾರ ಮುಂಜಾನೆಯಿಂದ ಸುರಿದ ಮಳೆ ತೊಂದರೆ ಉಂಟು ಮಾಡಿತು.
ಯಶವಂತಪುರ, ಶಾಂತಿನಗರ, ಜಯನಗರ, ಮಲ್ಲೇಶ್ವರಂ, ಎಂ.ಜಿ. ರಸ್ತೆ, ಮಾಗಡಿ ರಸ್ತೆ, ವಿಜಯ ನಗರಗಳಲ್ಲಿ ಗುಡುಗು ಸಹಿತ ಮಳೆ ಬಿದ್ದಿದೆ.

ಮಳೆಯಿಂದಾಗಿ, ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಕೆಲವಾರು ಅಂಡರ್ ಪಾಸ್ ಗಳಲ್ಲಿ ನೀರು ನಿಂತು ಅಲ್ಲೂ ವಾಹನಗಳು ಸರಾಗವಾಗಿ ಚ ಲಿಸಲಾಗದೇ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.
ಭಾನುವಾರ ಪೂರ್ತಿ ಮೋಡ ಕವಿದ ವಾತಾವರಣ ಇದಿದ್ದರಿಂದ ಭಾನುವಾರ ರಾತ್ರಿಯೇ ಮಳೆ ಸುರಿಯುವ ಸೂಚನೆಗಳು ಲಭಿಸಿದ್ದವು. ಆದರೆ, ಮಳೆ ಆಗಿರಲಿಲ್ಲ. ಆದರೆ, ಸೋಮವಾರ ಬೆಳಗಿನ ಜಾವ ಮೇಘರಾಜ ಮಳೆ ಸುರಿಸಿದ್ದಾನೆ.












Click it and Unblock the Notifications