ಸೈಟ್ ಹರಾಜು; ಬಿಡಿಎಗೆ 171.99 ಕೋಟಿ ಆದಾಯ
ಬೆಂಗಳೂರು, ಆಗಸ್ಟ್ 13 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2ನೇ ಹಂತದಲ್ಲಿ 240 ಸೈಟ್‌ಗಳ ಹರಾಜು ಪ್ರಕ್ರಿಯೆನ್ನು ಪೂರ್ಣಗೊಳಿಸಿದೆ. ಮೂರನೇ ಹಂತದ ಹರಾಜು ಪ್ರಕ್ರಿಯೆಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟವಾಗಲಿದೆ.
Recommended Video
ಎರಡನೇ ಹಂತದ ಹರಾಜು ಮೂಲಕ ಬಿಡಿಗೆ 171.99 ಕೋಟಿ ಆದಾಯ ಬರಲಿದೆ. 2ನೇ ಹಂತದಲ್ಲಿ 308 ನಿವೇಶನಗಳನ್ನು ಬಿಡಿಎ ಹರಾಜಿಗೆ ಇಟ್ಟಿತ್ತು. ಜುಲೈ 20ರಂದು ಆರಂಭಗೊಂಡ ಬಿಡ್‌ನಲ್ಲಿ 1,601 ಜನರು ಪಾಲ್ಗೊಂಡಿದ್ದರು.
45 ನಿವೇಶನಗಳನ್ನು ಯಾರೂ ಸಹ ಹರಾಜಿನಲ್ಲಿ ತೆಗೆದುಕೊಳ್ಳಲಿಲ್ಲ. 22 ನಿವೇಶನಗಳಿಗೆ ಮೂಲ ದರಕ್ಕಿಂತ ಶೇ 5ರಷ್ಟು ಕಡಿಮೆ ಮೊತ್ತವನ್ನು ಬಿಡ್ಡುದಾರರು ದಾಖಲಿಸಿದರು. ಆದ್ದರಿಂದ, ಅವುಗಳನ್ನು ಹರಾಜು ಹಾಕಲಿಲ್ಲ ಎಂದು ಬಿಡಿಎ ಹೇಳಿದೆ.

ಬಿಡಿಎ ನಿವೇಶನಗಳಿಗೆ ಮೂಲ ದರದ ಮೊತ್ತ 103.87 ಕೋಟಿ ಆಗಿತ್ತು. ಮೂಲದರಕ್ಕಿಂತ ಸರಾಸರಿ ಶೇ 65.58ರಷ್ಟು ಹೆಚ್ಚು ಮೊತ್ತಕ್ಕೆ ನಿವೇಶನಗಳು ಮಾರಾಟವಾಗಿವೆ.
ಎರಡು ಹಂತದ ಹರಾಜು ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಿಡಿಎ 3ನೇ ಹಂತದ ಹರಾಜು ನಡೆಸಲು ತೀರ್ಮಾನ ಕೈಗೊಂಡಿದೆ. ಸೆಪ್ಟೆಂಬರ್‌ನಲ್ಲಿ ನಿವೇಶನಗಳ ಮಾರಾಟಕ್ಕೆ ಅಧಿಸೂಚನೆ ಪ್ರಕಟಿಸುವ ನಿರೀಕ್ಷೆ ಇದೆ.












Click it and Unblock the Notifications