ಸಿಇಟಿಯಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳ ಸಾಧನೆ
ಬೆಂಗಳೂರು, ಮೇ 28 : 2014ರ ಸಿಇಟಿ ಫಲಿತಾಂಶದಲ್ಲಿ ವೈದ್ಯ, ದಂತ ವೈದ್ಯ, ಇಂಜಿನಿಯರಿಂಗ್ ಮುಂತಾದ ವಿಭಾಗಗಲ್ಲಿ ಗರಿಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಲ್ಲಿ ಸಿಂಹಪಾಲನ್ನು ಬೆಂಗಳೂರಿಗರು ಪಡೆದಿದ್ದಾರೆ. ಎಲ್ಲಾ ವಿಭಾಗಗಲ್ಲೂ ಮೊದಲ 5 ರ‌್ಯಾಂಕ್ ಗಳಿಸಿದವರ ಓದಿನ ಪೂರ್ಣ ಶುಲ್ಕವನ್ನು ಸರ್ಕಾರ ಭರಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಬೆಂಗಳೂರಿನ ಸಿ.ವಿ ರಾಮನ್ ನಗರದ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಗಿರಿಜಾ ಅಗರ್‌ವಾಲ್ (ವೈದ್ಯ/ ದಂತ ವೈದ್ಯ, ಐಎಸ್‌ಎಂಎಚ್), ಶ್ರೀನಿಧಿ ಪ್ರಭು (ಇಂಜಿನಿಯರಿಂಗ್) ಹಾಗೂ ಮೈಸೂರು ರಸ್ತೆ ಬಳಿಯ ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಐಡಿಯಲ್ ಹೋಮ್ ನ ಸಂಹಿತಾ ಕೊಟ್ಟಮಸು (ಆರ್ಕಿಟೆಕ್ಚರ್) ವಿಭಾಗದಲ್ಲಿ ಮೊದಲ ರ‌್ಯಾಂಕ್ ಗಳಿಸಿದ್ದಾರೆ.

ಸರಿ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ http://kea.kar.nic.in ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಹಾಗೆಯೇ ಎಲ್ಲ ಅಭ್ಯರ್ಥಿಗಳ ಎಲ್ಲ ವಿಷಯದ ಓಎಂಆರ್ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್ ಗೆ ಹಾಕಲಾಗುತ್ತಿದ್ದು, ಮೇ 30ರ ಸಂಜೆ 5 ರ ಬಳಿಕ ಲಭ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಶುಲ್ಕ ಮರುಪಾವತಿ : ವೈದ್ಯ, ದಂತ ವೈದ್ಯ, ಇಂಜಿನಿಯರಿಂಗ್, ಐಎಸ್ಎಂಎಚ್, ಆರ್ಕಿಟೆಕ್ಚರ್ ವಿಭಾಗದಲ್ಲಿ ಮೊದಲ 5 ರ‌್ಯಾಂಕ್ ಗಳಿಸಿದವರ ಓದಿನ ಪೂರ್ಣ ಶುಲ್ಕವನ್ನು ಸರ್ಕಾರ ಭರಿಸಲಿದೆ ಎಂದು ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ಈ ವಿದ್ಯಾರ್ಥಿಗಳು ಸಿಇಟಿ ಮೂಲಕ ಸೀಟು ಪಡೆದು ಅದೇ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದರೆ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.
ಮೊದಲ 3 ರ‌್ಯಾಂಕ್ ಗಳಿಸಿದವರು
ವೈದ್ಯ/ ದಂತ ವೈದ್ಯ
1. ಗಿರಿಜಾ ಅಗರ್ ವಾಲ್, ನಾರಾಯಣ ಪಿಯು ಕಾಲೇಜ್, ಸಿ.ವಿ ರಾಮನ್ ನಗರ, ಬೆಂಗಳೂರು
2. ಎಚ್.ವಿ. ನೇಹಾ, ಎಂಇಎಸ್ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
3. ವಿ.ಕೆ. ಸೂರ್ಯ, ಎಕ್ಸ್ ಪರ್ಟ್ ಪಿಯು ಕಾಲೇಜು, ಮಂಗಳೂರು
ಐಎಸ್ ಎಂಎಚ್
1. ಗಿರಿಜಾ ಅಗರ್ ವಾಲ್, ನಾರಾಯಣ ಪಿಯು ಕಾಲೇಜ್, ಸಿವಿರಾಮನ್ ನಗರ, ಬೆಂಗಳೂರು
2. ಎಚ್.ವಿ. ನೇಹಾ, ಎಂಇಎಸ್ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು
3. ವಿ.ಕೆ. ಸೂರ್ಯ, ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
ಇಂಜಿನಿಯರಿಂಗ್
1. ಶ್ರೀನಿಧಿ ಪ್ರಭು, ನಾರಾಯಣ ಪಿಯು ಕಾಲೇಜ್, ಸಿ.ವಿ ರಾಮನ್ ನಗರ, ಬೆಂಗಳೂರು
2. ರೌನಾಖ್ ಭಿರಂಗಿ, ಚೇತನ ಪಿಯು ಕಾಲೇಜ್, ಯಲಹಂಕ, ಬೆಂಗಳೂರು
3. ಸುಮಿತ್, ಶಾರದಾ ಪಿಯು ಕಾಲೇಜ್, ಮಂಗಳೂರು
ಆರ್ಕಿಟೆಕ್ಚರ್
1. ಸಂಹಿತಾ ಕೊಟ್ಟಮಸು, ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಐಡಿಯಲ್ ಹೋಮ್, ಬೆಂಗಳೂರು
2. ಕೆ. ದೀಪಿಕಾ, ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಎಚ್ ಆರ್ ಬಿಆರ್ ಲೇಔಟ್, ಬೆಂಗಳೂರು
3. ಉದೀಕ್ಷಾ ನಾಗರಾಜ್ ಕಪನಿ, ಜೈನ್ ಪಿಯು ಕಾಲೇಜ್, ಜಯನಗರ, ಬೆಂಗಳೂರು












Click it and Unblock the Notifications