ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ -19 ಸೋಂಕು; ಪೊಲೀಸರ ಸುರಕ್ಷತೆಗಾಗಿ ಕೈಗೊಂಡ 5 ಕ್ರಮಗಳು

|
Google Oneindia Kannada News

ಬೆಂಗಳೂರು, ಜೂನ್ 23 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಪೊಲೀಸರು ಮುಂಚೂಣಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಕೆಲವು ಪೊಲೀಸರಿಗೆ ಈಗ ಸೋಂಕು ತಗುಲಿದೆ.

Recommended Video

ಮೋದಿಯನ್ನು ಹೊಗಳಿದ ಚೀನಾ | China Praising Narendra Modi | Oneindia Kannada

ಬೆಂಗಳೂರು ನಗರದಲ್ಲಿ 26ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಮೂವರು ಇದುವರೆಗೂ ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ.

ಬೆಂಗಳೂರು; ಸಹಾಯಕನಿಗೆ ಸೋಂಕು, ಎಡಿಜಿಪಿಗೆ ಹೋಂ ಕ್ವಾರಂಟೈನ್ ಬೆಂಗಳೂರು; ಸಹಾಯಕನಿಗೆ ಸೋಂಕು, ಎಡಿಜಿಪಿಗೆ ಹೋಂ ಕ್ವಾರಂಟೈನ್

ನಗರದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಸೋಂಕು ಹರಡದಂತೆ ತಡೆಯಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಕ್ಷಣ ಈ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಕಾನ್ ಸ್ಟೆಬಲ್ ಗೆ ಕೊರೊನಾ ವೈರಸ್; ಮೈಸೂರಿನಲ್ಲಿ 22 ಪೊಲೀಸರಿಗೆ ಕ್ವಾರಂಟೈನ್ಕಾನ್ ಸ್ಟೆಬಲ್ ಗೆ ಕೊರೊನಾ ವೈರಸ್; ಮೈಸೂರಿನಲ್ಲಿ 22 ಪೊಲೀಸರಿಗೆ ಕ್ವಾರಂಟೈನ್

ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಕುರಿತು ಮಂಗಳವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಪೊಲೀಸರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಅವರ ಆರೋಗ್ಯ ಕಾಪಾಡಲು ಕ್ರಮಗಳನ್ನು ಕೈಗೊಂಡಿದ್ದಾರೆ.

ಕೊರೊನಾ ವೈರಸ್‌ಗೆ ಹೆದರಿ ಪೊಲೀಸ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆಕೊರೊನಾ ವೈರಸ್‌ಗೆ ಹೆದರಿ ಪೊಲೀಸ್ ಕಾನ್ಸ್ ಸ್ಟೇಬಲ್ ಆತ್ಮಹತ್ಯೆ

5 ಖಾಸಗಿ ಆಸ್ಪತ್ರೆ

5 ಖಾಸಗಿ ಆಸ್ಪತ್ರೆ

ಬೆಂಗಳೂರು ನಗರದಲ್ಲಿ ಪೊಲೀಸ್ ಸಿಬ್ಭಂದಿಗಾಗಿ ಐದು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ - 19 ಪಾಸಿಟಿವ್ ರೋಗಿಗಳಿಗಾಗಿ ಕಾಯ್ದಿರಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶ ನೀಡಿದ್ದಾರೆ.

ಒಂದು ಪರೀಕ್ಷಾ ಪ್ರಯೋಗಾಲಯ

ಒಂದು ಪರೀಕ್ಷಾ ಪ್ರಯೋಗಾಲಯ

ಬೆಂಗಳೂರು ನಗರದಲ್ಲಿ ಪೊಲೀಸ್ ಸಿಬ್ಬಂದಿಗಾಗಿ ಪ್ರತ್ಯೇಕವಾಗಿ ಒಂದು ಕೋವಿಡ್ - 19 ಪರೀಕ್ಷಾ ಪ್ರಯೋಗಾಲಯವನ್ನು ಹಾಗೂ ಗಂಟಲು ದ್ರವ ಸಂಗ್ರಹಿಸುವ ಸಂಚಾರಿ ವಾಹವನ್ನು ಕಾಯ್ದಿರಿಸುವುದು.

ಉತ್ತಮವಾದ ಊಟ

ಉತ್ತಮವಾದ ಊಟ

ಆಸ್ಪತ್ರೆಯಲ್ಲಿ ದಾಖಲಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ಉತ್ತಮವಾದ ಊಟ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.

ಕ್ವಾರಂಟೈನ್ ಸೆಂಟರ್

ಕ್ವಾರಂಟೈನ್ ಸೆಂಟರ್

ಪೊಲೀಸ್ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಒಂದು ಕ್ವಾರಂಟೈನ್ ಸೆಂಟರ್ ನಿಗದಿಪಡಿಸುವುದು. ಪೊಲೀಸ್ ಸಿಬ್ಭಂದಿಗಳಿಗಾಗಿ ಪ್ರತ್ಯೇಕ ಅಂಬ್ಯುಲೆನ್ಸ್‌ ವ್ಯವಸ್ಥೆಯನ್ನು ಮಾಡುವುದು.

English summary
Steps taken by the home ministry to control spread of Coronavirus to Bengaluru police. More than 20 police personnel tested positive in the city so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X