ನಮ್ಮ ಮೆಟ್ರೋ: ಮಹಿಳಾ ಮೀಸಲು ಬೋಗಿಗೆ ಗುಲಾಬಿ ಬಣ್ಣವಿರಲಿ
Recommended Video

ಬೆಂಗಳೂರು, ಜೂನ್ 29: ನಮ್ಮ ಮೆಟ್ರೋದಲ್ಲಿ ಆರು ಬೋಗಿಯ ರೈಲಿನಲ್ಲಿ ಮೊದಲ ಬೋಗಿ ಮಹಿಳೆಯರಿಗೆ ಮೀಸಲು ಸೌಲಭ್ಯದಿಂದ ಮಹಿಳಾ ಸುರಕ್ಷತೆಗೆ ಒತ್ತು ನೀಡಿದಂತಾಗಿದೆ. ಆದರೆ ಆ ಬೋಗಿಗಳಿಗೆ ಸಂಪೂರ್ಣ ಗುಲಾಬಿ ಬಣ್ಣ ಬಳಿಯಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಸಲಹೆ ನೀಡಿದ್ದಾರೆ.
ಮೆಟ್ರೋ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ ಅವರು, ರೈಲಿನಲ್ಲಿ ಮಹಿಳಾ ಬೋಗಿ ಸ್ಥಿತಿ ಗತಿ, ಮಹಿಳಾ ಸುರಕ್ಷತೆ ಕುರಿತು ಪರಿಶೀಲನೆ ನಡೆಸಿದರು. ನಂತರ ಅಲ್ಲಿ ನಿತ್ಯ ಸಂಚರಿಸುವ ಮಹಿಳಾ ಪ್ರಯಾಣಿಕರ ಜತೆ ಸುರಕ್ಷತೆ, ನಿಲ್ದಾಣ ಸ್ಥಿತಿಗತ, ಸಿಬ್ಬಂದಿ ವರ್ತನೆ ಸೇರಿದಂತೆ ಅಲ್ಲಿನ ಸೌಲಭ್ಯಗಳ ಕುರಿತು ಮಾತುಕತೆ ನಡೆಸಿದರು.
ಮಹಿಳೆಯರಿಗೆ ಪ್ರತ್ಯೇಕ ಬೋಗಿ ನಿಯೋಜಿಸಿರುವುದು ಸ್ವಾಗತಾರ್ಹ, ಆದರೆ ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುವ ಮಹಿಳೆಯರಿಗೆ ಮಾತ್ರ ಈ ಬಗ್ಗೆ ತಿಳಿದಿರುತ್ತದೆ ಆದರೆ, ಅಪರೂಪಕ್ಕೆ ಆಗಮಿಸುವ ಮಹಿಳೆಯರಿಗೆ ಈ ಬಗ್ಗೆ ಅರಿವಿರುವುದಿಲ್ಲ, ಹಾಗಾಗಿ ಅಲ್ಲಲ್ಲಿ ನಾಮಫಲಕ ಅಳವಡಿಸಬೇಕು. ಈ ಬಗ್ಗೆ ಘೋಷಣೆ ಮಾಡಬೇಕು. ಅದರ ಜತೆಗೆ ಮುಖ್ಯವಾಗಿ ಆ ಬೋಗಿಗಳನ್ನು ಸಂಪೂರ್ಣ ಗುಲಾಬಿ ಬಣ್ಣವಾಗಿಸಬೇಕು. ಆಗ ಮಹಿಳೆಯರಿಗೆ ತಮಗಾಗಿಯೇ ಈ ಬೋಗಿ ಇರುವುದು ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಸದ್ಯ ಒಂದು ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಮಹಿಳೆಯರಿಗೆ ಅನುಕೂಲವಾಗುವಂತೆ 6 ಟ್ರಿಪ್‌ಗಳಿದ್ದು, ಎರಡೂ ಮಾರ್ಗಗಳಲ್ಲೂ ಈ ವ್ಯವಸ್ಥೆ ತಂದರೆ ಅನುಕೂಲವಾಗುತ್ತದೆ. ಸಾಧ್ಯೌಆದರೆ ಈಗ ಇರುವ ರೈಲಿನಲ್ಲಿ ಮಹಿಳೆಯರಿಗೆ ಮತ್ತೊಂದು ಪ್ರತ್ಯೇಕ ಬೋಗಿಯನ್ನು ನೀಡಿದರೆ ಒಳಿತು ಎಂದು ಸಲಹೆ ನೀಡಿದರು.












Click it and Unblock the Notifications