ಕೊರೊನಾ ವೈರಸ್ ಸರ್ಕಾರದ ಕೈ ಬಿಟ್ ಹೋಗಿದೆ: ಸಿಎಂ ಇಬ್ರಾಹಿಂ
ಬೆಂಗಳೂರು, ಜೂನ್ 30: ಕರ್ನಾಟಕದಲ್ಲಿ ಕೊರೊನಾ ವೈರಸ್ ಸರ್ಕಾರದ ಕೈ ಬಿಟ್ಟು ಹೋಗಿದೆ ಎಂದು ಕಾಂಗ್ರೆಸ್ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಆರೋಪಿಸಿದ್ದಾರೆ.
Recommended Video
''ಕೊರೊನಾ ವೈರಸ್ ಸರ್ಕಾರದ ಕೈ ಬಿಟ್ ಹೋಗಿದೆ. ದೆಹಲಿಯಲ್ಲಿ ಮನೆ ಮನೆಗೆ ಟೆಸ್ಟಿಂಗ್ ಮಾಡೋ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮಲ್ಲಿ 6 ಕೋಟಿ ಜನರಿಗೆ 20 ಸಾವಿರ ಪರೀಕ್ಷೆ ಸಾಮರ್ಥ್ಯ ಇದೆ. ರ್ಯಾಪಿಡ್ ಟೆಸ್ಟಿಂಗ್ ಮತ್ತು ಹಾಸಿಗೆಗಳಿಲ್ಲ'' ಎಂದು ಟೀಕಿಸಿದ್ದಾರೆ.
''ಕೊರೊನಾ ಸೋಂಕಿತರ ರೋಗಿ ಮೃತಪಟ್ಟರೆ ಹೂಳಲು ಗೈಡ್ಲೈನ್ಸ್ ಇಲ್ಲ. ಹೂಳಲು ನಿರ್ದಿಷ್ಟ ಜಾಗ ನಿಗದಿ ಮಾಡಿಲ್ಲ. ಬಳ್ಳಾರಿಗಳಲ್ಲಿ ಶವಗಳನ್ನು ಬಿಸಾಕಿದಾರೆ. ಇದು ಮಾನವಕುಲಕ್ಕೆ ಬಂದಿರುವ ಕಾಯಿಲೆ'' ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

''ಖಾಸಗಿ ಆಸ್ಪತ್ರೆಗಳಲ್ಲೇ 20 ಸಾವಿರ ಹಾಸಿಗೆ ಇವೆ. ಯಾಕೆ ಹಾಸ್ಟೆಲ್, ಹಜ್ ಭವನಕ್ಕೆ ಹೋಗ್ತೀರ? ಲಾಡ್ಜಲ್ಲಿ 300 ರೂಗೆ ರೂಂ ಸಿಗುತ್ತೆ, ಆದ್ರೆ ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ ಸಾಮಾನ್ಯ ಬೆಡ್ ಗೆ 5000 ರೂಪಾಯಿ. ಇದು ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ. ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತಗೊಳ್ಳಿ'' ಎಂದು ರಾಜ್ಯ ಸರ್ಕಾರವನ್ನು ಸಿ ಎಂ ಇಬ್ರಾಹೀಂ ಆಗ್ರಹಿಸಿದ್ದಾರೆ.
ಜೂನ್ 29 ರಂದು ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರ ಜೊತೆ ಸಿಎಂ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ 2500 ಬೆಡ್‌ಗಳನ್ನು ಸರ್ಕಾರದ ವಶಕ್ಕೆ ನೀಡಬೇಕೆಂದು ಸಿಎಂ ಆಗ್ರಹಿಸಿದ್ದರು. ಸಿಎಂ ಸೂಚನೆಗೆ ಮಣಿದ ಖಾಸಗಿ ಆಸ್ಪತ್ರೆಗಳು ಹಾಸಿಗೆಗಳನ್ನು ನೀಡಲು ಒಪ್ಪಿಗೆ ಸೂಚಿಸಿದೆ.












Click it and Unblock the Notifications