ವಾಕಿಂಗ್‌ಗೆ ಬರುವ ಮಹಿಳಾ ಟೆಕ್ಕಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿ ಬಂಧನ
ಬೆಂಗಳೂರು, ಮಾರ್ಚ್ 19: ನಿತ್ಯ ವಾಕಿಂಗ್ ಬರುವ ಮಹಿಳಾ ಟೆಕ್ಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ವೀರಯ್ಯ(44) ಬಂಧಿತರು. ಮಹಿಳಾ ಟೆಕ್ಕಿ ನಿತ್ಯ ವಾಯುವಿಹಾರಕ್ಕೆಂದು ನಾಯಿಯ ಜೊತೆಗೆ ಬರುತ್ತಿದ್ದಳು. ಆಗ ಉದ್ಯಮಿ ಆಕೆಯನ್ನೇ ನೋಡುತ್ತಾ ಹಾಡು ಹೇಳುತ್ತಿದ್ದ, ಕಾಮೆಂಟ್ ಮಾಡುತ್ತಿದ್ದ ಅಷ್ಟೇ ಅಲ್ಲದೆ ಆಕೆಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಎಂದು ಟೆಕ್ಕಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ಘಟನೆ ನಡೆದಿದೆ. ನಿತ್ಯ ಆಕೆ ಬರುವುದನ್ನೇ ಕಾಯುತ್ತಿದ್ದ ಉದ್ಯಮಿ ಆಕೆ ಬರುತ್ತಿದ್ದಂತೆ ಹಾಡು ಹಾಡುತ್ತಿದ್ದ, ಆತನ ಕಾಟಕ್ಕೆ ಬೇಸತ್ತು ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆತನ ನಿಜ ಬಣ್ಣ ತಿಳಿಯಲು ಮಫ್ತಿಯಲ್ಲಿ ಜಾಗಿಂಗ್‌ಗೆ ಬಂದು ವೀರಯ್ಯ ಅವರನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 354 ಡಿ, 294 ಹಾಗೂ 509 ರಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications