ಸಿಬ್ಬಂದಿ ಚಹಾಕ್ಕೆ ಹೋದರು: ಕಳ್ಳರು 15 ಲಕ್ಷ ದೋಚಿದರು
ಬೆಂಗಳೂರು, ಜೂನ್ 13: ವಿದ್ಯುತ್ ಶುಲ್ಕ ಭರಿಸಿದ 15 ಲಕ್ಷ ರೂ.ಗಳನ್ನು ಸಂಗ್ರಹಿಸಿಟ್ಟಿದ್ದ ಬೆಸ್ಕಾಂ ಕಚೇರಿಯಿಂದ ಕಳ್ಳರು ದೋಚಿದ ಘಟನೆ ಬೆಂಗಳೂರಿನ ಆನೆಪಾಳ್ಯದಲ್ಲಿ ಬುಧವಾರ ನಡೆದಿದೆ.
ಮನೆ, ಬ್ಯಾಂಕ್, ಎಟಿಎಂ ಕಳ್ಳತನ ಮಾಡುವುದು ನೋಡಿದ್ದೇವೆ ಆದರೆ ಹಾಡುಹಗಲೆ ಸಾಕಷ್ಟು ಸಿಬ್ಬಂದಿಗಳು ಇರುವ ಬೆಸ್ಕಾಂ ಕಚೇರಿಯಲ್ಲಿರುವ ಹಣವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬೆಸ್ಕಾಂ ಸಿಬ್ಬಂದಿ ಟೀ ಕುಡಿಯಲು ಹೋಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹತ್ತು ರೂ ಟೀ ಕುಡಿಯಲು ಹೋಗಿ 15 ಲಕ್ಷ ಕಳೆದುಕೊಂಡಂತಾಗಿದೆ.

ಆನೆಪಾಳ್ಯದ ಬೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳು ಹಣ ಸಂಗ್ರಹ ಮಾಡಿ ಕಬೋರ್ಡಿನಲ್ಲಿ ಇಟ್ಟಿದ್ದರು, ಈ ವೇಳೆ ಟೀ ಕುಡಿಯಲು ಹೊರಗಡೆ ಹೋಗಿದ್ದ ಅಧಿಕಾರಿಗಳು ವಾಪಸ್ ಬಂದು ನೋಡುವಷ್ಟರಲ್ಲಿ ಖದೀಮರು ಹಣ ದೋಚಿಕೊಂಡು ನಾಪತ್ತೆಯಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಆಶೋಕನಗರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಿಗೆ ಬಲೆ ಬೀಸಿದ್ದಾರೆ.











Click it and Unblock the Notifications