ಕಾಂಗ್ರೆಸ್ಸಿನತ್ತ ಎಸ್.ಟಿ.ಸೋಮಶೇಖರ್: ಯಶವಂತಪುರದಲ್ಲಿ ಜೆಡಿಎಸ್ ಆಕ್ಟೀವ್?
ಬೆಂಗಳೂರು, ಆಗಸ್ಟ್ 21: ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರು ಕಾಂಗ್ರೆಸ್‌ಗೆ ಸೇರುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಈಗ ಯಶವಂತಪುರದಲ್ಲಿ ಜೆಡಿಎಸ್‌ನ ಜವರಾಯಿಗೌಡ ಸಂಪೂರ್ಣ ಸಕ್ರಿಯರಾಗಿದ್ದಾರೆ.
ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಸೋಮಶೇಖರ್ ವಿರುದ್ಧ ಎದುರಾಳಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸುತ್ತಿರುವ ಜವರಾಯಿಗೌಡ ಅವರು ಮತ್ತೆ ಕ್ರಿಯಾಶೀಲವಾಗಿ ಕ್ಷೇತ್ರದಾದ್ಯಂತ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿ ಆರಂಭಿಸಿದ್ದಾರೆ. ಕಾಂಗ್ರೆಸ್‌ಗೆ ವಲಸೆ ಹೋದಲ್ಲಿ ಕ್ಷೇತ್ರದಲ್ಲಿ ಮತ್ತೆ ಉಪ ಚುನಾವಣೆ ಎದುರಾಗುವುದರಿಂದ ಸೋಮಶೇಖರ್ ಸೋಲಿಸಲು ಈಗಲೇ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಒಂದು ಉಪ ಚುನಾವಣೆ ಸೇರಿದಂತೆ ನಾಲ್ಕು ಚುನಾವಣೆಗಳಲ್ಲಿಯೂ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸೋಮಶೇಖರ್ ಮತ್ತು ಜವರಾಯಿಗೌಡ ಅವರು ಪರಸ್ಪರ ಎದುರಾಳಿಗಳಾಗಿ ಸೆಣಸಾಣ ನಡೆಸಿದ್ದಾರೆ. ನಾಲ್ಕು ಬಾರಿಯೂ ಇಬ್ಬರ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ಜವರಾಯಿಗೌಡ ಅವರು ಸೋಮಶೇಖರ್ ವಿರುದ್ಧ 2013ರ ಚುನಾವಣೆಯಲ್ಲಿ 29,110 ಮತಗಳಿಂದ, 2018ರ ಚುನಾವಣೆಯಲ್ಲಿ 10,711 ಮತಗಳಿಂದ, 2019ರ ಉಪಚುನಾವಣೆಯಲ್ಲಿ 27,699 ಮತಗಳಿಂದ ಹಾಗೂ ಇತ್ತೀಚಿನ 2023ರ ಚುನಾವಣೆಯಲ್ಲಿ 15,118 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದರೂ ಜೆಡಿಎಸ್‌ನ ಜವರಾಯಿಗೌಡ ಹೆಚ್ಚಿನ ಮತಗಳನ್ನೇ ಗಳಿಸಿದ್ದಾರೆ.
ಕಳೆದ 10 ವರ್ಷಗಳಿಂದಲೂ ಯಶವಂತಪುರ ಕ್ಷೇತ್ರದಲ್ಲಿ ಸೋಮಶೇಖರ್ ಮತ್ತು ಜವರಾಯಿಗೌಡ ನಡುವೆ ಹಣಾಹಣಿ ಇದ್ದೇ ಇದೆ. ಚುನಾವಣೆ ಗೆಲ್ಲಲು ಜವರಾಯಿಗೌಡ ಹರಸಾಹಸ ಮಾಡಿದರೂ ಸಾಧ್ಯವಾಗಿಲ್ಲ. ಇವರಿಬ್ಬರ ಸ್ಪರ್ಧೆ ನಡುವೆ ಮೂರನೇ ಅಭ್ಯರ್ಥಿ ಹೆಚ್ಚು ಮತಗಳನ್ನು ಗಳಿಸಲು ಯಶಸ್ವಿಯಾಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಬದಲಾದಲೂ ಜೆಡಿಎಸ್‌ನಿಂದ ಮಾತ್ರ ಸತತವಾಗಿ ಜವರಾಯಿಗೌಡ ಅವರಿಗೇ ಟಿಕೆಟ್ ನೀಡಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಜವರಾಯಿಗೌಡ ಅವರ ಪರವಾಗಿ ಕ್ಷೇತ್ರದಲ್ಲಿ ಪಾಸಿಟಿವ್ ಅಂಶಗಳು ಕೇಳಿ ಬಂದಿತ್ತು. ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಒಕ್ಕಲಿಗ ಸಮುದಾಯದ ಮತದಾರರು ಒಗ್ಗಟ್ಟಿನಿಂದ ಜವರಾಯಿಗೌಡ ಪರವಾಗಿ ಮತ ಹಾಕಲು ಮುಂದಾಗಿದ್ದರು. ಈ ಹಂತದಲ್ಲಿ ಸೋಮಶೇಖರ್ ಅವರೂ ಆತಂಕಕ್ಕೀಡಾಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಸೋಮಶೇಖರ್ ಅವರು ಹೆಚ್ಚು ಗಮನಹರಿಸಿ ಶ್ರಮ ಹಾಕಿದ್ದರಿಂದ ಗೆಲುವು ಸಾಧ್ಯವಾಯಿತು. ಸಚಿವರಾಗಿ ಚುನಾವಣೆ ಎದುರಿಸಿದರೂ ಗೆಲುವಿನ ಅಂತರ 15,118 ಮಾತ್ರವಾಗಿತ್ತು.
ಒಂದು ವೇಳೆ ಈಗ ಸೋಮಶೇಖರ್ ಅವರು ಕಾಂಗ್ರೆಸ್‌ಗೆ ವಲಸೆ ಹೋಗುವ ನಿರ್ಧಾರ ಕೈಗೊಂಡಲ್ಲಿ ಮತ್ತೆ ಉಪಚುನಾವಣೆ ಎದುರಾಗುವುದು ನಿಶ್ಚಿತ. ಐದನೇ ಬಾರಿ ಸೋಮಶೇಖರ್ ಅವರನ್ನು ಜವರಾಯಿಗೌಡ ಸೋಲಿಸಿದರೂ ಅಚ್ಚರಿ ಇಲ್ಲ.
-
Mohsina Kidwai: ಕೇಂದ್ರ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ನಿಧನ, ಗಣ್ಯರ ಸಂತಾಪ -
2nd PUC Result: ದ್ವಿತೀಯ ಪಿಯು ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟ: ನೋಡುವುದು ಹೇಗೆ? -
ಅಧಿಕಾರ ಬದಲಾವಣೆ; ನನ್ನ-ಸಿಎಂ ಬಿಟ್ಟು ಬೇರೆಯವರ ಮಾತು ಮುಖ್ಯವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್











Click it and Unblock the Notifications