'ಅಪ್ಪಿ ಮುತ್ತಿಡುವ ಅಮ್ಮ' ಬೆಂಗಳೂರಿಗೆ ಬರಲಿದ್ದಾರೆ
ಪ್ರತಿವರ್ಷ ಜನವರಿಯಲ್ಲಿ ಆರಂಭವಾಗುವ ಭಾರತ ಪ್ರವಾಸದ ಭಾಗವಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಅಮ್ಮಾ ಉಳ್ಳಾಲದ ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ಎರಡು ದಿನಗಳ ಸತ್ಸಂಗ ನಡೆಸಲಿದ್ದಾರೆ.
ಬೆಂಗಳೂರು, ಮಾರ್ಚ್ 6: ಕೇರಳದ ಅಧ್ಯಾತ್ಮ ಗುರು ಮಾತಾ ಅಮೃತಾನಂದಮಯಿ ಅವರು ಮಾರ್ಚ್ 8 ಮತ್ತು 9 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಪ್ರತಿವರ್ಷ ಜನವರಿಯಲ್ಲಿ ಆರಂಭವಾಗುವ ಭಾರತ ಪ್ರವಾಸದ ಭಾಗವಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಅಮ್ಮಾ ಉಳ್ಳಾಲದ ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ಎರಡು ದಿನಗಳ ಸತ್ಸಂಗ ನಡೆಸಲಿದ್ದಾರೆ.[ಫೆ.24ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮಾತಾ ಅಮೃತಾನಂದಮಯಿ ಭೇಟಿ]

ಈ ಭಾರತ ಯಾತ್ರಾ ಕಾರ್ಯಕ್ರಮ 30 ವರ್ಷಗಳಿಂದ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದೇಶದ ಎಲ್ಲ ಪ್ರಸಿದ್ಧ ಸ್ಥಳಗಳನ್ನೂ ಸಂದರ್ಶಿಸುವ ಅಮ್ಮಾ, ಅಲ್ಲಿನ ಜನರ ಅಹವಾಲನ್ನು ಆಲಿಸುತ್ತಾರೆ.[ಬೆಂಗಳೂರಿನಲ್ಲಿ ಅಮ್ಮ : ಭಜನೆ, ಸತ್ಸಂಗ, ಧ್ಯಾನ, ದರ್ಶನ]
ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಿ ತಮ್ಮ ಅಪ್ಪುಗೆಯ ಆಶೀರ್ವಾದ ನೀಡಲಿದ್ದಾರೆ.












Click it and Unblock the Notifications