BLR-MYS Expressway: ಈ ತಂತ್ರಜ್ಞಾನ ಅಳವಡಿಕೆಯಿಂದ ಅಪಘಾತ, ವೇಗದ ಚಾಲನೆಗೆ ಅಂಕುಶ: ADGP
ಬೆಂಗಳೂರು, ಜೂನ್ 30: ಪ್ರಯಾಣಿಕರ ಸಂಚಾರ ಸಮಯ ಕಡಿಮೆಯಾಗಲು ಸಹಾಯವಾದ ಹಾಗೂ ಹೆಚ್ಚು ಅಪಘಾತಗಳಿಗೆ ಕಾರಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೇವಲ 9 ತಿಂಗಳಲ್ಲಿ ಅತ್ಯಧಿಕ ಅಪಘಾತಗಳು ಸಂಭವಿಸಿದ್ದು, ಅದನ್ನು ತಡೆಯಲು ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಉದ್ಯನ ನಗರಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ಮಧ್ಯೆ ಕೇವಲ 9 ತಂಗಳ ಹಿಂದಷ್ಟೇ ಎಕ್ಸ್‌ಪ್ರೆಸ್ ವೇ ಉದ್ಘಾಟನೆಗೊಂಡಿದೆ. ಅದಾದ ಬಳಿಕ ಈ ಮೈಸೂರು ರಸ್ತೆಯಲ್ಲಿ ಈವರೆಗೆ ಸುಮಾರು 158 ಅಪಘಾತಗಳು ಸಂಭವಿಸಿವೆ ಎನ್ನಲಾಗುತ್ತಿದೆ. ಇದರಿಂದ ಸುಮಾರು 50 ಕ್ಕೂ ಹೆಚ್ಚು ಮಂದಿ ಸಾವಿಗೀಡಾದರೆ, ನೂರಾರು ಮಂದಿ ಗಾಯಗೊಂಡಿದ್ದಾರೆ.

ಇದನ್ನು ತಡೆಗಟ್ಟಲು ಸಲುವಾಗಿ ಪೊಲೀಸರು 117 ಕಿಲೋ ಮೀಟರ್ ಇರುವ ಈ ರಸ್ತೆಯಲ್ಲಿ ಸ್ಪೀಡ್ ರಾಡಾರ್ ಗನ್‌ಗಳನ್ನು ನಿಯೋಜನೆ, ಅತಿ ವೇಗದ ಸವಾರರು/ಚಾಲಕರಿಗೆ ದಂಡ ವಿಧಿಸುವುದು ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಜ್ಜಾಗಿದ್ದಾರೆ. ಆದಷ್ಟು ಶೀಘ್ರವೇ ಈ ಕ್ರಮಗಳು ಜಾರಿಗೆ ಬರಲಿವೆ.
ರಾಮನಗರ-ಮಂಡ್ಯ ಪೊಲೀಸರ ಜತೆ ಸಂವಾದ
ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಅಲೋಕ್ ಕುಮಾರ್ ಅವರು, ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸಿ ಸ್ವತಃ ಪರಿಶೀಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಾರಣಾಂತಿಕ ಅಪಘಾತಗಳು ವರದಿಯಾಗಿವೆ. ಈ ಸಂಬಂಧ ಅವರು ರಾಮನಗರ ಮತ್ತು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜೊತೆಗೆ ಸಂವಾದ ನಡೆಸಿ ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದರು.
ಹೆದ್ದಾರಿಯಲ್ಲಿ ಅತೀ ವೇಗದ ಚಾಲನೆ ಜೊತೆಗೆ ಅಜಾಗರೂಕ ಚಾಲನೆಯೇ ಹಲವು ದುರಂತಗಳಿಗೆ, ಪದೇ ಪದೆ ಅಪಘಾತ ಮತ್ತು ಸಾವಿಗೆ ಕಾರಣವಾಗಿದೆ. ವಾಹನ ಚಾಲಕರ ವೇಗವನ್ನು ನಿಯಂತ್ರಿಸಲು ನಾವು ವಿಭಿನ್ನ ವಿಧಾನಗಳನ್ನು ಅಳವಡಿಸುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದರು.

100 kmph ಮಿತಿ ಮೀರಿದರೆ ದಂಡ
ಆರಂಭಿಕ ಹಂತದಲ್ಲಿ ರಸ್ತೆ ನಾವು ಎರಡೂ ದಿಕ್ಕುಗಳಲ್ಲಿ ಸ್ಪೀಡ್ ರಾಡಾರ್ ಗನ್‌ಗಳನ್ನು ಹಾಕಲಾಗುತ್ತದೆ. ಈ ಗನ್‌ಗಳನ್ನು ವಿಶೇಷವಾಗಿ ರಾಮನಗರ ಮತ್ತು ಮಂಡ್ಯದಲ್ಲಿ ಭಾಗದ ರಸ್ತೆಗಲಲ್ಲಿ ಅಳವಡಿಸಲಿದ್ದೇವೆ. ವಾಹನ ಸವಾರರು ಚಲಿಸುವ ವಾಹನಗಳ ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ. ಪ್ರತಿ ಗಂಟೆಗೆ 100 ಕಿಲೋಮೀಟರ್ ಗಿಂತ ಅತೀ ವೇಗವಾಗಿ ಸಾಗುವ ವಾಹನಗಳನ್ನು ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸಲಾಗುತ್ತದೆ ಮತ್ತು ಚಾಲಕನಿಗೆ ದಂಡ ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಇದಾದ ಬಳಿಕ ಭವಿಷ್ಯದಲ್ಲಿ ಆಟೋ ಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾ (ANPR)ಗಳನ್ನು ವಿವಿಧ ಸ್ಥಳಗಳಲ್ಲಿ ಅಳವಡಿಸುವ ಚಿಂತನೆ ಇದೆ. ಅಂದುಕೊಂಡಂತಾದರೆ ಮುಂದಿನ ದಿನಗಳಲ್ಲಿ ಹೆಚ್ಚು ವೇಗದ ವಾಹನಗಳನ್ನು ಗುರುತಿಸುವ ಕೆಲಸ ಇನ್ನಷ್ಟು ಸರಳವಾಗಲಿದೆ.
ಶೀಘ್ರವೇ ನೂತನ ಕ್ರಮ ಜಾರಿ
ಈ ತಂತ್ರಜ್ಞಾನ ಅಳವಡಿಕೆ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆದಷ್ಟು ಬೇಗ ಈ ಕ್ರಮ ಜಾರಿಗೊಳಿಸಲಾಗುತ್ತದೆ ಎಂದರು.
ಇನ್ನೂ ಕಳೆದ ಮಂಗಳವಾರ ಡಿಸಿಪಿ ಅಲೋಕ್ ಕುಮಾರ್ ಅವರು ಪದೇ ಪದೆ ಅಪಘಾತ ನಡೆಯುವ ರಾಮನಗರ ಮತ್ತು ಮಂಡ್ಯದ ಹೆದ್ದಾರಿ ರಸ್ತೆಯ ಸ್ಥಳ ಭೇಟಿ ನೀಡಿ ಪರಿಶೀಲಿಸಿದರು. ಒಟ್ಟು 18 ಕಡೆ ಅವರು ಭೇಟಿ ನೀಡಿದರು. ಅಂದು ಯಾರು ಯಾರು ಪ್ರತಿ ಗಂಟೆಗೆ 100 ಕಿಲೋ ಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಚಲಿಸಿದ್ದಾರೋ ಅಂತವರ ಚಾಲನಾ ಪರವಾನಿಗೆಯನ್ನು ಅಮಾನತು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications