ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 20ರಿಂದ ಏರೋ ಇಂಡಿಯಾ ಶೋ: ಭರದ ಸಿದ್ಧತೆ

|
Google Oneindia Kannada News

ಬೆಂಗಳೂರು, ಜನವರಿ 31: ಏರೋ ಇಂಡಿಯಾ ಶೋ ವೈಮಾನಿಕ ಪ್ರದರ್ಶನ ಫೆ.20ರಿಂದ ಬೆಂಗಳೂರಲ್ಲಿ ಆರಂಭಗೊಳ್ಳಲಿದೆ.

ಫೆ.24ರವರೆಗೂ ವೈಮಾನಿಕ ಹಾರಾಟ ಮತ್ತು ಪ್ರದರ್ಶನ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿಮಾನ ಹಾರಾಟ ಪ್ರದರ್ಶನ ಇರಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಯಲಹಂಕ ವಾಯುನೆಲೆಯಲ್ಲಿ ಮಾಡಿಕೊಳ್ಳಲಾಗುತ್ತಿದೆ.

ಏರೋ ಇಂಡಿಯಾದಲ್ಲಿ 52 ವಿಮಾನಗಳ ಪ್ರದರ್ಶನಏರೋ ಇಂಡಿಯಾದಲ್ಲಿ 52 ವಿಮಾನಗಳ ಪ್ರದರ್ಶನ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ- 2019ರ ಇವೆಂಟ್ ಮ್ಯಾನೇಜಮೆಂಟ್ ಎಚ್ಎಎಲ್‌ ಮಾಡಲಿದೆ. ರಕ್ಷಣಾ ಕ್ಷೇತ್ರದ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕಾಗಿ ಈಗಾಗಲೇ 164 ವಿದೇಶಿ ಕಂಪೆನಿ ಮತ್ತು 196 ದೇಶಿ ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ಫೆ.20ರಿಂದ 24ರವರೆಗೂ ನಿರಂತರ ಸೆಮಿನಾರ್‌, ಬಿಜಿನೆಸ್‌ ಮೀಟ್ ಹಾಗೂ ವಸ್ತು ಪ್ರದರ್ಶನ ನಡೆಯಲಿದೆ ಎಂದು ಯಲಹಂಕ ವಾಯುನೆಲೆಯ ಏರ್‌ ಆಫೀಸರ್‌ ಕಮಾಂಡಿಂಗ್‌ ರಾವುರಿ ಶೀತಲ್‌ ಮಾಹಿತಿ ನೀಡಿದರು.

Spectacular aero india show ahead

ಫ್ಲೈಯಿಂಗ್‌ ಡಿಸ್‌ಫ್ಲೇ ವಿಭಾಗದಲ್ಲಿ ವಿವಿಧ ಬಗೆಯೆ 36 ಏರ್‌ಕ್ರಾಫ್ಟ್, ಇತರೆ ಏಜೆನ್ಸಿಗಳ 7 ಏರ್‌ಕ್ರಾಫ್ಟ್ ಮತ್ತು ಸ್ಟಾಟಿಕ್‌ ಡಿಸ್‌ಫ್ಲೇ ವಿಭಾಗದಲ್ಲಿ ಐಎಎಫ್ ಏರ್‌ಕ್ರಾಫ್ಟ್ ಹಾಗೂ ಎಚ್ಎಎಲ್‌ ಮತ್ತು ಇತರೆ ಏಜೆನ್ಸಿಗಳ ತಲಾ 11 ಏರ್‌ಕ್ರಾಫ್ಟ್ ಪ್ರದರ್ಶನ ಇರಲಿದೆ. ಇದರ ಜತೆಗೆ ವಿದೇಶ ಏರ್‌ಕ್ರಾಫ್ಟ್ಗಳ ವೈಮಾನಿಕ ಪ್ರದರ್ಶನವೂ ನಡೆಯಲಿದೆ ಮತ್ತು ಟೀಮ್‌ ಫ್ಲೈಯಿಂಗ್‌ ಡಿಸ್‌ಫ್ಲೇ ಕೂಡ ಇರಲಿದೆ ಎಂದರು.

ಫೆ.23ರಂದು ಮಹಿಳಾ ದಿನದ ವಿಶೇಷವೆಂಬಂತೆ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ವೈಮಾನಿಕ ಕ್ಷೇತ್ರದ ಸಾಧನೆ ಮಾಡಿರುವ ಮಹಿಳೆಯರು ಭಾಗವಹಿಸಲಿದ್ದಾರೆ. ಹಾಗೆಯೇ ಪ್ರತಿದಿನ 10 ಸಾವಿರ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಬರಬಹುದಾದ ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಣೆ ನೀಡಿದರು.

ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು?ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು?

ಬಿಗಿ ಭದ್ರತೆ: ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರದರ್ಶನ ಆವರಣವನ್ನು ಐದು ವಿಭಾಗವಾಗಿ ವಿಂಗಡಿಸಲಾಗಿದೆ. ಉದ್ಫಾಟನಾ ಪ್ರದೇಶದಲ್ಲಿ 3 ಸಾವಿರ ಜನರು ಕುಳಿತುಕೊಳ್ಳಬಹುದಾದ ವ್ಯವಸ್ಥೆ ಮಾಡಲಾಗುತ್ತಿದೆ.

ಪ್ರತ್ಯೇಕ ಪಾರ್ಕಿಂಗ್‌, ಬಸ್‌ ಸೇವೆ ಮತ್ತು ಲಾಕರ್‌ ವ್ಯವಸ್ಥೆ ಮಾಡಲಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ವಿವಿಧ ಭದ್ರತಾ ಏಜನ್ಸಿಗಳು ಒಟ್ಟಾಗಿ ಸೇವೆ ಸಲ್ಲಿಸಲಿವೆ. ತುರ್ತು ವೈದ್ಯಕೀಯ ಸೇವೆ, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣ ಘಟಕದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವರ ನೀಡಿದರು.

ಏರೋ ಇಂಡಿಯಾ ಪ್ರದರ್ಶನ : ವಿಮಾನ ಹಾರಾಟದಲ್ಲಿ ಬದಲಾವಣೆ ಏರೋ ಇಂಡಿಯಾ ಪ್ರದರ್ಶನ : ವಿಮಾನ ಹಾರಾಟದಲ್ಲಿ ಬದಲಾವಣೆ

ಸಾರ್ವಜನಿಕರಿಗೆ ಪ್ರತ್ಯೇಕ ಪಾಸ್‌ ವಿತರಣೆ ಆನ್‌ಲೈನ್‌ ಮೂಲಕವೇ ನಡೆಯಲಿದೆ. ಆನ್‌ಲೈನ್‌ನಲ್ಲಿ ಪಾಸ್‌ ಖರೀದಿಸಲು ಸಾಧ್ಯವಾಗದವರು ಸ್ಥಳದಲ್ಲೇ ಖರೀದಿಸಲು ವ್ಯವಸ್ಥೆ ಇದೆ. ಆದರೆ, ಆನ್‌ಲೈನ್‌ ಮೂಲಕವೇ ಪಾಸ್‌ಪಡೆಯುವುದು ಉತ್ತಮ.

ಫುಡ್‌ಕೋರ್ಟ್‌, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಮಾಡಿದ್ದೇವೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ. ನಾಲ್ಕು ದಿನ ನಡೆಯುವ ಕಾರ್ಯಕ್ರಮಗಳ ವಿವರನ್ನು ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2019ರ ವೆಬ್‌ಸೈಟ್ ನಿಂದ ಪಡೆಯಬಹುದು ಎಂದು ಹೇಳಿದರು.

English summary
Preparations are in full swing for the 12th edition of Aero India at the Yelahanka air force station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X