ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಸಿದ್ಧಗೊಂಡಿದೆ ಓಬವ್ವ ಪೊಲೀಸ್ ಪಡೆ

By Nayana
|
Google Oneindia Kannada News

Recommended Video

ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಓಬವ್ವ ಪೊಲೀಸ್ ಪಡೆ ಸೃಷ್ಟಿ ಮಾಡಿದ ರವಿ ಡಿ. ಚೆನ್ನಣ್ಣನವರ್

ಬೆಂಗಳೂರು, ಮೇ 24:ನಗರದಲ್ಲಿ ದಿನನಿತ್ಯ, ಕೊಲೆ, ಅತ್ಯಾಚಾರ, ಹೆಣ್ಣುಮಕ್ಕಳನ್ನು ಚುಡಾಯಿಸುವುದು ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ನಿಯಂತ್ರರಿಸಲು ಓಬವ್ವ ಪಡೆ ಸಿದ್ಧವಾಗಿದೆ.

ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚೆನ್ನಣ್ಣನವರ್, ಓಬವ್ವ ಪಡೆ ಎಂಬ ವಿಶೇಷ ಮಹಿಳಾ ಪಡೆ ರಚನೆ ಮಾಡಿದ್ದಾರೆ. ಕಪ್ಪು ಟೀ ಶರ್ಟ್ ಅದರ ಮೇಲೆ ಪೊಲೀಸ್ ಎಂಬ ಬರಹ, ಸೇನೆಯ ಪ್ಯಾಂಟ್, ಟೋಪಿ ಕೈಯಲ್ಲಿ ಲಾಠಿ ಹಿಡಿದು ಗಸ್ತು ತಿರುಗಲಿದ್ದಾರೆ. ಉಪ್ಪಾರ ಪೇಟೆ ಸಬ್‌ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ನೇತೃತ್ವದಲ್ಲಿ 8 ಮಹಿಳಾ ಪೊಲೀಸರನ್ನು ಒಳಗೊಂಡ ಓಬವ್ವ ಪಡೆ ರಚಿಸಲಾಗಿದೆ.

ಮಹಿಳೆಯರ ಸುರಕ್ಷತೆ: ಬಿಎಂಟಿಸಿ ಹಾಗೂ ಬಿ-ಪ್ಯಾಕ್ ಜಂಟಿ ಸಮೀಕ್ಷೆ ಮಹಿಳೆಯರ ಸುರಕ್ಷತೆ: ಬಿಎಂಟಿಸಿ ಹಾಗೂ ಬಿ-ಪ್ಯಾಕ್ ಜಂಟಿ ಸಮೀಕ್ಷೆ

ಮೆಜೆಸ್ಟಿಕ್, ರೈಲು ನಿಲ್ದಾಣ, ಗಾಂಧಿನಗರ ಮುತ್ತ ಮುತ್ತಲ ಪ್ರದೇಶದಲ್ಲಿ ಗಸ್ತು ಆರಂಭಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಪ್ರತಿ ನಿತ್ಯ ದೂರದ ಊರುಗಳಿಂದ ಮೆಜೆಸ್ಟಿಕ್, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಸಾವಿರಾರು ಮಂದಿ ಮಹಿಳೆಯರು ಬರುತ್ತಾರೆ.

Special force for women safety in Bengaluru

ಮಹಿಳೆಯರ ಸುರಕ್ಷತೆಗೆ ಶೀಘ್ರ ರೈಲುಗಳಲ್ಲಿ ಸಿಸಿಟಿವಿ ಅಳವಡಿಕೆಮಹಿಳೆಯರ ಸುರಕ್ಷತೆಗೆ ಶೀಘ್ರ ರೈಲುಗಳಲ್ಲಿ ಸಿಸಿಟಿವಿ ಅಳವಡಿಕೆ

ಅವರಿಗಿಂತ ಅಭದ್ರತೆಯ ಭಯ ತೊಡೆದು ಹಾಕಿ ಭದ್ರತೆ ಒದಗಿಸಲು ಓಬವ್ವ ಪಡೆ ರಚಿಸಲಾಗಿದೆ. ಮಹಿಳೆಯರು ಮತ್ತೆ ಯುವತಿಯರು ಸಂಕಷ್ಟಕ್ಕೆ ಸಿಲುಕಿದಾಗ ಮಾಹಿತಿ ತಲುಯಪಿದ ಕೂಡಲೇ ಸ್ಥಳಕ್ಕೆ ಓಬವ್ವ ಪಡೆ ತೆರಳುವಂತೆ ಸಿದ್ಧಪಡಿಸಲಾಗಿದೆ. ಇದೇ ರೀತಿ ಪಶ್ಚಿಮ ವಿಭಾಗದ ವಿವಿಧ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿ ಒಳಗೊಂಡು ಓಬವ್ವ ಪಡೆ ರಚಿಸಲಾಗಿದೆ.

English summary
Bengaluru west division police have formed a special team, 'Obavva Pade' to curb eve teasing and sexual harassment on women in and around majestic area. The team led by Uppar pet sub inspector Kathyayini included eight police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X