ಬೆಂಗಳೂರಿನಲ್ಲಿ ಮತ್ತೊಂದು ದೇಶದ ರಾಯಭಾರ ಕಛೇರಿ ಆರಂಭ
ಬೆಂಗಳೂರು, ಜನವರಿ 16: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮತ್ತೊಂದು ದೇಶದ ರಾಯಭಾರ ಕಛೇರಿ ಆರಂಭವಾಗಲಿದೆ. ಬಹಳ ವರ್ಷಗಳ ಬೇಡಿಕೆಯ ಅಮೆರಿಕ ರಾಯಭಾರ ಕಛೇರಿ ಜನವರಿ 17ರಂದು ನಗರದಲ್ಲಿ ಆರಂಭವಾಗಲಿದೆ. ಈ ಮೂಲಕ ಬೆಂಗಳೂರು ವಿಶ್ವದ ವಿವಿಧ ದೇಶಗಳ ಜೊತೆ ಸಂಪರ್ಕ ಹೊಂದಲಿದ್ದು, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ.
ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್. ಜೈ. ಶಂಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜತಾಂತ್ರಿಕ ಭೇಟಿಗಾಗಿ ಸಚಿವರು ಸ್ಪೇನ್‌ನಲ್ಲಿದ್ದಾರೆ. ಅಲ್ಲಿ ಭಾರತೀಯ ನಿವಾಸಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ರಾಯಭಾರ ಕಛೇರಿ ಆರಂಭ ಕುರಿತು ಮಾತನಾಡಿದರು.

ಮ್ಯಾಡ್ರಿಡ್‌ನಲ್ಲಿ ಮಾತನಾಡಿದ ಅವರು, "ಬಾರ್ಸಿಲೋನಾದಲ್ಲಿ ಭಾರತೀಯ ರಾಯಭಾರ ಕಛೇರಿ ಆರಂಭವಾಗಲಿದೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಸ್ಪೇನ್ ರಾಯಭಾರ ಕಛೇರಿಯನ್ನು ಆರಂಭಿಸಲಿದ್ದಾರೆ" ಎಂದು ಹೇಳಿದರು.
ಎಸ್. ಜೈಶಂಕರ್ ವಿದೇಶಾಂಗ ಸಚಿವರಾದ ಬಳಿಕ ಮೊದಲ ಬಾರಿಗೆ ಸ್ಟೇನ್ ಪ್ರವಾಸ ಕೈಗೊಂಡಿದ್ದಾರೆ. ಈ ಮಹತ್ವದ ಭೇಟಿಯ ಸಂದರ್ಭದಲ್ಲಿಯೇ ಅವರು ಭಾರತದ ಬೆಂಗಳೂರಿನಲ್ಲಿ ಸ್ಪೇನ್ ರಾಯಭಾರ ಕಛೇರಿ ಆರಂಭದ ಕುರಿತು ಮಾಹಿತಿ ನೀಡಿದರು.
ಸಚಿವರು ಮ್ಯಾಡ್ರಿಡ್‌ನಲ್ಲಿ, "ಉಭಯ ದೇಶಗಳ ಜೊತೆ ಉತ್ತಮ ಬಾಂಧವ್ಯವಿದೆ. ಇದನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಈ ಬೆಳವಣಿಗೆ ಎರಡೂ ದೇಶಗಳಿಗೆ ಅತಿ ಮುಖ್ಯವಾಗಿತ್ತು" ಎಂದರು.
ಪ್ರವಾಸೋದ್ಯಮದ ದೃಷ್ಟಿಯಿಂದ ಸ್ಪೇನ್ ಪ್ರಮುಖ ದೇಶವಾಗಿದೆ. ಅಲ್ಲದೇ ಬೆಂಗಳೂರು ನಗರದಿಂದ ಹಲವಾರು ಜನರು ಸ್ಪೇನ್‌ಗೆ ಭೇಟಿ ನೀಡುತ್ತಾರೆ. ನಗರದಲ್ಲಿಯೇ ರಾಯಭಾರ ಕಛೇರಿ ಆರಂಭವಾದರೆ ಪ್ರವಾಸಿಗರಿಗೆ ವೀಸಾ ಪಡೆಯುವ ಪ್ರಕ್ರಿಯೆ ಸರಳವಾಗಲಿದೆ.
ಸದ್ಯ ಬೆಂಗಳೂರು, ಕರ್ನಾಟಕದ ಜನರು ಸ್ಪೇನ್ ಪ್ರವಾಸ ಕೈಗೊಳ್ಳಲು ವೀಸಾ ಪಡೆಯಲು ಮುಂಬೈ ರಾಯಭಾರ ಕಛೇರಿಗೆ ಭೇಟಿ ನೀಡಬೇಕಿದೆ. ಬೆಂಗಳೂರಿನಲ್ಲಿ ಕಛೇರಿ ಆರಂಭವಾದರೆ ವೀಸಾ ಪಡೆಯಲು ಪ್ರಯಾಣ ಮಾಡುವುದು ತಪ್ಪಲಿದೆ.
ಜನವರಿ 17ರಂದು ಬೆಂಗಳೂರು ನಗರದಲ್ಲಿ ಅಮೆರಿಕ ರಾಯಭಾರಿ ಕಛೇರಿ ಆರಂಭವಾಗಲಿದೆ. ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ 2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಛೇರಿ ಆರಂಭವಾಗಲಿದೆ ಎಂದು ಹೇಳಿದ್ದರು. ತಾತ್ಕಾಲಿಕ ಕಛೇರಿಯಲ್ಲಿ ಸದ್ಯ ರಾಯಭಾರ ಕಛೇರಿ ಆರಂಭವಾಗಲಿದ್ದು, ಬಳಿಕ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.
ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆಡ್ಲ್ಯು ಮ್ಯಾರಿಯೇಟ್‌ನಲ್ಲಿ ತಾತ್ಕಾಲಿಕ ಕಛೇರಿ ಆರಂಭವಾಗಲಿದೆ. ವೈಟ್‌ಫೀಲ್ಡ್‌ನಲ್ಲಿ ರಾಯಭಾರಿ ಕಛೇರಿ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಬೃಹತ್ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಖಾತೆ ಸಚಿವ ಎಂ. ಬಿ. ಪಾಟೀಲ್ ಕಛೇರಿಗೆ ವೈಟ್‌ಫೀಲ್ಡ್‌ನಲ್ಲಿ ಸ್ಥಳವನ್ನು ನೀಡುವ ಭರವಸೆ ಕೊಟ್ಟಿದ್ದಾರೆ.
ಸದ್ಯ ಬೆಂಗಳೂರು, ಕರ್ನಾಟಕದ ಜನರು ಅಮೆರಿಕ ವೀಸಾ ಪಡೆಯಲು ಚೆನ್ನೈ, ಹೈದರಾಬಾದ್‌ಗೆ ಪ್ರಯಾಣಿಸಬೇಕಿದೆ. ಬೆಂಗಳೂರು ನಗರದಲ್ಲೇ ಕಛೇರಿ ಆರಂಭವಾದರೆ ವಿದ್ಯಾರ್ಥಿಗಳಿಗೆ, ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.
ಆಸ್ಟ್ರೇಲಿಯಾ ಈಗಾಗಲೇ ಬೆಂಗಳೂರು ನಗರದಲ್ಲಿ ರಾಯಭಾರ ಕಛೇರಿಯನ್ನು ಹೊಂದಿದೆ. ಅಮೆರಿಕ ರಾಯಭಾರ ಕಛೇರಿ ಆರಂಭವಾಗಲಿದೆ. ಸ್ಪೇನ್ ಸಹ ಶೀಘ್ರದಲ್ಲೇ ಕಛೇರಿ ಆರಂಭಿಸಲಿದ್ದು, ವಿವಿಧ ದೇಶಗಳ ಜೊತೆಗಿನ ಬೆಂಗಳೂರು ನಗರದ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ












Click it and Unblock the Notifications