Ganesh Chaturthi 2023: ಗಣೇಶ ಚತುರ್ಥಿಗೆ ಯಶವಂತಪುರ-ಮುರುಡೇಶ್ವರ ವಿಶೇಷ ರೈಲು- ಸಂಖ್ಯೆ, ದಿನಾಂಕ, ಸಮಯ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 16: ಗಣೇಶ ಚತುರ್ಥಿ ಮುನ್ನಾದಿನದಂದು ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆ ಈ ನಿರ್ಧಾರ ಕೈಗೊಂಡಿದೆ. ಯಶವಂತಪುರ ಮತ್ತು ಮುರುಡೇಶ್ವರ ನಡುವೆ ವಿಶೇಷ ರೈಲು ಸಂಚರಿಸಲಿದೆ.
ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಣೇಶ ಹಬ್ಬದ ಪ್ರಯುಕ್ತ ಇಂದು ಮತ್ತು ನಾಳೆ ಅಂದರೆ ಶುಕ್ರವಾರ ಮತ್ತು ಶನಿವಾರದಂದು ಎರಡು ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಗುರುವಾರ ಸುತ್ತೋಲೆಯಲ್ಲಿ ತಿಳಿಸಿದೆ.
1- ರೈಲು ಸಂಖ್ಯೆ 06587: ಯಶವಂತಪುರ - ಮುರುಡೇಶ್ವರ ವಿಶೇಷ ಎಕ್ಸ್‌ಪ್ರೆಸ್- ಸೆಪ್ಟೆಂಬರ್ 15 ರಂದು ಮಧ್ಯಾಹ್ನ 1:55 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಮಧ್ಯಾಹ್ನ 12:55 ಕ್ಕೆ ಮುರುಡೇಶ್ವರ ತಲುಪಲಿದೆ.

2- ರೈಲು ಸಂಖ್ಯೆ 06588: ಮುರುಡೇಶ್ವರ - ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್- ಸೆಪ್ಟೆಂಬರ್ 16 ರಂದು ಮಧ್ಯಾಹ್ನ 01:30 ಕ್ಕೆ ಮುರುಡೇಶ್ವರದಿಂದ ಹೊರಟು ಮರುದಿನ ಮುಂಜಾನೆ 4 ಗಂಟೆಗೆ ಯಶವಂತಪುರಕ್ಕೆ ಹಿಂದಿರುಗಲಿದೆ.
ರೈಲುಗಳು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟವಾಳ, ಸುರತ್ಕಳ, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು ಮೂಕಾಂಬಿಕಾ ರಸ್ತೆ ಮತ್ತು ಭತತ್ಕಾಂಬಿಕಾ ರಸ್ತೆಯಲ್ಲಿ ನಿಲುಗಡೆಯಾಗಲಿವೆ ಎಂದು ನೈರುತ್ಯ ರೈಲ್ವೆ ಹೇಳಿದೆ.

ಈ ವಿಶೇಷ ರೈಲುಗಳು ಒಂದು ಎಸಿ ಫಸ್ಟ್ ಕ್ಲಾಸ್, ಎರಡು ಎಸಿ ಟು ಟೈರ್ ಕೋಚ್‌ಗಳು, ಏಳು ಎಸಿ ತ್ರೀ ಟೈರ್ ಕೋಚ್‌ಗಳು, ಎಂಟು ಸ್ಲೀಪರ್ ಕ್ಲಾಸ್ ಕೋಚ್‌ಗಳು ಮತ್ತು ಎರಡು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು / ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ ಕೋಚ್‌ಗಳನ್ನು ಹೊಂದಿರುತ್ತದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಲಿನಿನ್ ಮತ್ತು ಬೆಡ್‌ರೋಲ್‌ಗಳನ್ನು ಒದಗಿಸಲಾಗುವುದಿಲ್ಲ ಎಂದು ನೈರುತ್ಯ ಮಾಹಿತಿ ನೀಡಿದೆ.
ಗಣೇಶ ಚತುರ್ಥಿ ಹಬ್ಬವನ್ನು ಈ ವರ್ಷ ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 29 ರ ವರೆಗೆ ಆಚರಿಸಲಾಗುತ್ತಿದೆ. ಬೆಂಗಳೂರಿನಿಂದ ರಾಜ್ಯದ ಹಲವು ಊರುಗಳಿಗೆ ಲಕ್ಷಾಂತರ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ.












Click it and Unblock the Notifications