ಬೆಂಗಳೂರಿನ ಈ ಭಾಗದಲ್ಲಿ ಕುಡಿಯಲು ನೀರು ಯೋಗ್ಯವಾಗಿಲ್ಲ: ಆಘಾತಕಾರಿ ಮಾಹಿತಿ ಬಹಿರಂಗ
ಬೆಂಗಳೂರು, ಜುಲೈ 17: ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ಅತಿಸಾರ, ಡೆಂಗ್ಯೂನಂತಹ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಪ್ರದೇಶಗಳಲ್ಲಿ ಕುಡಿಯುವ ನೀರು ಮಲಿನವಾಗಿದೆ ಎಂದು ವರದಿಗಳು ತಿಳಿಸಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಜೂನ್ ತಿಂಗಳಲ್ಲಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು ದಕ್ಷಿಣ ಬೆಂಗಳೂರಿನಲ್ಲಿ ನೀರು 'ಕುಡಿಯಲು ಯೋಗ್ಯವಲ್ಲ' (ಎನ್‌ಎಸ್‌ಪಿಪಿ) ಎಂದು ಹೇಳುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್.ಬಾಲಸುಂದರ್ ಮಾತನಾಡಿ, 599 ಮಾದರಿಗಳನ್ನು ಪರೀಕ್ಷೆ ಮಾಡಿದ್ದು ಅದರಲ್ಲಿ 59 (ಶೇಕಡಾ 9ರಷ್ಟು) ಮಾದರಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಿದ್ದು, ಇದರಲ್ಲಿ 31 ಮಾದರಿಗಳು ದಕ್ಷಿಣ ಬೆಂಗಳೂರಿನವಾಗಿದೆ.
ಮಳೆಗಾಲದಲ್ಲಿ ಕಲುಷಿತಗೊಳ್ಳುತ್ತಿರುವ ನೀರು
ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವುದರಿಂದ ರೋಗಗಳು ಬರುವ ಸಾಧ್ಯತೆ ಹೆಚ್ಚಿರುವುದರಿಂದ ಕಣ್ಗಾವಲು ಹೆಚ್ಚಿಸಲಾಗುತ್ತದೆ ಎಂದು ವಿವರಿಸಿದರು. ಅವರು ಆರ್‍ಒ ವಾಟರ್ ಪ್ಲಾಂಟ್‌ಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಟ್ಯಾಪ್‌ಗಳಿಂದ ಮಾದರಿಗಳನ್ನು ಪರೀಕ್ಷಿಸುತ್ತಾರೆ, ನೀರಿನಲ್ಲಿ ಇರುವ ಕಲ್ಮಶಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಯೋಗ್ಯವಲ್ಲದ ನೀರನ್ನು ಕ್ಲೋರಿನೀಕರಿಸಲಾಗುತ್ತದೆ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪರೀಕ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ.
ತಿಂಗಳಿಗೆ ಒಮ್ಮೆ ನೀರಿನ ಪರೀಕ್ಷೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಶೇಕಡಾ 2-3 ರಷ್ಟು ಮಾದರಿಗಳು ಎನ್‌ಎಸ್‌ಪಿಪಿ ಕಂಡುಬಂದಿವೆ, ಮಳೆಗಾಲದಲ್ಲಿ ಸಂಖ್ಯೆಗಳು ಶೇಕಡಾ 10 ಕ್ಕೆ ಏರುತ್ತವೆ. ನೀರು-ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೇಚ್ಚಾಗುತ್ತದೆ. ಅನೇಕರು ಖಾಸಗಿ ವೈದ್ಯರನ್ನು ಸಂಪರ್ಕಿಸುವುದರಿಂದ ರೋಗಿಗಳ ಬಗ್ಗೆ ನಿಖರವಾದ ಮಾಹಿತಿಯಿಲ್ಲ.
ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಲಹೆಗಾರ್ತಿ ಡಾ. ಪರಿಮಳಾ ವಿ ತಿರುಮಲೇಶ್ ಮಾತನಾಡಿ, "ಇತ್ತೀಚೆಗೆ ವಾರಕ್ಕೆ 18-20 ಪ್ರಕರಣಗಳು ಬರುತ್ತಿವೆ, ಜನರು ಅತಿಸಾರದಿಂದ ಬಳಲುತ್ತಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಕಲುಷಿತ ನೀರಿನ ಸೇವನೆ ಮತ್ತು ಹೋಟೆಲ್, ರಸ್ತೆಬದಿಗಳಲ್ಲಿ ತಿನ್ನುವುದರಿಂದ ಆಗುತ್ತಿದೆ" ಎಂದು ಹೇಳಿದರು.
ಚರಂಡಿ ನೀರಿನಿಂದ ಅಂತರ್ಜಲ ಕಲುಷಿತ
ಮಳೆಗಾಲದಲ್ಲಿ ಪ್ರಕರಣಳ ಸಂಖ್ಯೆ ಉಲ್ಬಣಗೊಳ್ಳುವುದನ್ನು ನೋಡುತ್ತವೆ, ಮಳೆಗಾಲದಲ್ಲಿ ಚರಂಡಿಗಳು ತುಂಬಿಹರಿಯುವುದರಿಂದ ಅಂತರ್ಜಲ ಕಲುಷಿತವಾಗುತ್ತಿದೆ, ಇದರಿಂದ ಟೈಫಾಯಿಡ್ ಮತ್ತು ಅತಿಸಾರದಂತಹ ಸೋಂಕಿಗೆ ಕಾರಣವಾಗಿದೆ.
ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕಿ ಡಾ ಶೀಲಾ ಮುರಳಿ ಚಕ್ರವರ್ತಿ ಕೂಡ ಅತಿಸಾರ ಪ್ರಕರಣಗಳ ಹೆಚ್ಚಳವನ್ನು ಗಮನಿಸಿದ್ದಾರೆ. "ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ, ವಾರಕ್ಕೆ 10 ಪ್ರಕರಣಗಳು ಮತ್ತು ಅವುಗಳಲ್ಲಿ 50 ಪ್ರತಿಶತದಷ್ಟು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದೆ." ಹೊರಗಡೆ ತಿನ್ನುವುದನ್ನು ಕಡಿಮೆ ಮಾಡುವಂತೆ ಅವರು ನಾಗರಿಕರಿಗೆ ಸಲಹೆ ನೀಡಿದರು, ವಿಶೇಷವಾಗಿ ಪಾನಿಪುರಿ ಮತ್ತು ಬೇಯಿಸದ ಬೀದಿ ಆಹಾರವನ್ನು ಸೇವಿಸಬಾರದು ಎಂದು ಹೇಳಿದ್ದಾರೆ. ಟ್ಯಾಪ್ ನೀರನ್ನು ನೇರವಾಗಿ ಅಡುಗೆಗೆ ಬಳಸಬಾರದು ಮತ್ತು ಆರ್ ಒ ನೀರನ್ನು ಬಳಸುವಂತೆ ಮನವಿ ಮಾಡಿದ್ದಾರೆ.












Click it and Unblock the Notifications