RCB: ಅನಿಷ್ಟಕ್ಕೆಲ್ಲಾ ಆರ್‌ಸಿಬಿನೇ ಕಾರಣ ಅಂತ ಟ್ವೀಟ್ ಮಾಡಿದ ಸೋನು ನಿಗಮ್!
Sonu Nigam: ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೇ ಮೊದಲ ಬಾರಿಗೆ ಅದರಲ್ಲೂ 17 ವರ್ಷಗಳ ನಂತರ ಐಪಿಎಲ್ ಕಪ್ ಗೆದ್ದಿದೆ. ಈ ಸಂತೋಷ ಬಹಳ ದಿನಗಳ ಕಾಲ ಉಳಿಯಲಿಲ್ಲ ಎನ್ನುವುದು ಬೇರೆ ಸಂಗತಿ. ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದರು. ಇದಾದ ಮೇಲೆ ಆರ್‌ಸಿಬಿ ಹಾಗೂ ಆರ್‌ಸಿಬಿ ಅಭಿಮಾನಿಗಳ ಸಂತೋಷ ಉಳಿದಿಲ್ಲ. 11 ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಇನ್ನು ಈಚೆಗಷ್ಟೇ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಗಾಯಕ ಸೋನು ನಿಗಮ್ ಇದೀಗ ಮತ್ತೊಮ್ಮೆ ಆರ್‌ಸಿಬಿಯ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿ ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ದಾರೆ.
ಗಾಯಕ ಸೋನು ನಿಗಮ್ ಅವರು ಕರ್ನಾಟಕದಲ್ಲಿ ಕನ್ನಡ ಹಾಡು ಹೇಳಿ ಎಂದಾಗ ಭಾರೀ ವಿವಾದವನ್ನೇ ಸೃಷ್ಟಿ ಮಾಡಿದ್ದರು. ನೀವು ಈ ರೀತಿ ಕನ್ನಡ... ಕನ್ನಡ ಅಂತ ಹೇಳುತ್ತಿರುವುದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಆಗಿದ್ದು ಅಂತ ಸೋನು ನಿಗಮ್ ಹೇಳಿದ್ದರು. ಆ ವಿವಾದ ಇನ್ನೂ ತಣ್ಣಗಾಗಿಲ್ಲ. ಕ್ಷಮೆಯನ್ನೂ ಕೇಳದ ಸೋನು ನಿಗಮ್ ಕೋರ್ಟ್ ಮೊರೆ ಹೋಗಿದ್ದರು. ಸೋನು ಕನ್ನಡಿಗರ ಕ್ಷಮೆ ಕೇಳಿರಲಿಲ್ಲ. ಇದೀಗ ಆರ್‌ಸಿಬಿಯ ಗೆಲುವಿನ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಆರ್‌ಸಿಬಿ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರ್‌ಸಿಬಿ ಗೆಲುವಿನ ಬಗ್ಗೆ ಸೋನು ನಿಗಮ್ ಹೇಳಿದ್ದೇನು ಎನ್ನುವುದನ್ನು ನೋಡೋಣ.

ಸೋನು ನಿಗಮ್ ಆರ್‌ಸಿಬಿ ಗೆಲುವಿನ ಬಗ್ಗೆ ವ್ಯಂಗ್ಯವಾಡಿದ್ದಾರೆ. ಆರ್‌ಸಿಬಿ ಗೆದ್ದ 48 ಗಂಟೆಯ ಅವಧಿಯಲ್ಲಿ ಭಾರೀ ದೊಡ್ಡ ದುರಂತ ಸಂಭವಿಸಿತ್ತು. ಆ ಗೆಲುವಿನ ಸಂಭ್ರಮ ಈಗ ಯಾರಲ್ಲೂ ಉಳಿದಿಲ್ಲ. ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡದ ಆಟಗಾರರನ್ನು ಕಣ್ತುಂಬಿಕೊಳ್ಳಬೇಕು ಎಂದು ಬಂದ ಅಭಿಮಾನಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲರೂ ಇನ್ನೂ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಈ ರೀತಿ ಇರುವಾಗಲೇ ಸೋನು ನಿಗಮ್ ಅನಿಷ್ಟಕ್ಕೆಲ್ಲಾ ಆರ್‌ಸಿಬಿಯೇ ಕಾರಣ ಅಂತ ಸೋನು ನಿಗಮ್ ಟ್ವೀಟ್ ಮಾಡಿದ್ದಾರೆ. "Jabse RCB IPL jeeti hai tabse duniya mein kuch bhi achcha nahi ho raha hai!" ಆರ್‌ಸಿಬಿ ಐಪಿಎಲ್ ಗೆದ್ದಾಗಿನಿಂದ ಜಗತ್ತಿನಲ್ಲಿ ಏನೂ ಒಳ್ಳೆಯದಾಗಿಲ್ಲ!" ಅಂತ ಸೋನು ನಿಗಮ್ ಟ್ವೀಟ್ ಮಾಡಿದ್ದಾರೆ.
Jabse RCB IPL jeeti hai tabse duniya mein kuch bhi achcha nahi ho raha hai!
— Sonu Nigam (@SonuNigamSingh) June 16, 2025
ಸೋನು ನಿಗಮ್ ಈ ಪೋಸ್ಟ್‌ಗೆ ಆರ್‌ಸಿಬಿ ಅಭಿಮಾನಿಗಳು ಹಾಗೂ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೋನು ನಿಗಮ್ ಇಲ್ಲಿಗೆ ನಿಲ್ಲಿಸಿಲ್ಲ. ವಿರೋಧ ಹೆಚ್ಚಾಗುತ್ತಿದ್ದಂತೆಯೇ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ನನ್ನ ಖಾತೆಯನ್ನು ಅಣಕಿಸುವವರ ಬಗ್ಗೆ ನನಗೆ ಆಳವಾದ ಸಹಾನುಭೂತಿ ಇದೆ. ವಿಶೇಷವಾಗಿ ಆರ್‌ಸಿಬಿ ಅಭಿಮಾನಿಗಳಿಗೆ. ಬೇಗ ಗುಣಮುಖರಾಗಿ! ಎಂದೂ ಪೋಸ್ಟ್ ಮಾಡಿದ್ದಾರೆ.
ಅಧಿಕೃತ ಖಾತೆಯೇ ಎನ್ನುವ ಅನುಮಾನ: ಇನ್ನು ಈ ಖಾತೆಯಿಂದ ಬರುತ್ತಿರುವ ಟ್ವೀಟ್‌ಗಳನ್ನು ನೋಡಿದರೆ ಇದು ಅಧಿಕೃತ ಖಾತೆಯೇ ಎನ್ನುವ ಅನುಮಾನವೂ ಇದೆ. ಈ ಹಿಂದೆಯೂ ಸೋನು ನಿಗಮ್ ಅವರ ಟ್ವೀಟ್ಟರ್ ಖಾತೆಯ ಬಗ್ಗೆ ಚರ್ಚೆ ನಡೆದಿತ್ತು. ಈ ಖಾತೆಗೆ ಒಂದು ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ. ಇನ್ನು ಕೆಲವರು ಇದು ಫೇಕ್ ಅಕೌಂಟ್ ಅವರಿಗೆ ಯಾವುದೇ ಟ್ವೀಟ್ಟರ್ ಖಾತೆ ಇಲ್ಲ ಎಂದೂ ಹೇಳುತ್ತಿದ್ದಾರೆ. ಆದರೆ ಈ ಸಂಬಂಧ ಸೋನು ನಿಗಮ್ ಇಲ್ಲಿಯ ವರೆಗೆ ಏನೂ ಹೇಳಿಲ್ಲ.












Click it and Unblock the Notifications