ಬೆಂಗಳೂರಿನ ಕೋರ್ಟ್ ಕಟಕಟೆಯಲ್ಲಿ ಉಮ್ಮನ್ ಚಾಂಡಿ
ಕೇರಳದ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಇಂದು(ಜನವರಿ 02) ಖುದ್ದು ಹಾಜರಾಗಿದ್ದರು.
ಬೆಂಗಳೂರು, ಜನವರಿ 02: ಕೇರಳದ ಸೋಲಾರ್ ಹಗರಣಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಇಂದು(ಜನವರಿ 02) ಖುದ್ದು ಹಾಜರಾಗಿದ್ದರು.
ಬೆಂಗಳೂರಿನ ಕೋರಮಂಗಲ ನಿವಾಸಿ ಉದ್ಯಮಿ ಎಂ.ಕೆ.ಕುರುವಿಲ್ಲಾ ಎಂಬುವರಿಂದ ಸೋಲಾರ್ ಘಟಕ ಸ್ಥಾಪನೆಗಾಗಿ 1.36 ಕೋಟಿ ರೂ. ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು. ಆದರೆ ವ್ಯವಹಾರದಲ್ಲಿ ವ್ಯತ್ಯಯ ಉಂಟಾದ ಕಾರಣ ಹಣ ವಾಪಸ್ ನೀಡುವಂತೆ ಕುರುವಿಲ್ಲಾ ಅವರು ಕೋರ್ಟ್ ಮೊರೆ ಹೋಗಿದ್ದರು.[ಮಾಜಿ ಸಿಎಂ ಚಾಂಡಿ ವಿರುದ್ಧ ತನಿಖೆಗೆ ಆದೇಶ]

ಕಳೆದ ಅಕ್ಟೋಬರ್ ನಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಚಾಂಡಿ ಸೇರಿದಂತೆ ಐವರನ್ನು ತಪ್ಪಿತಸ್ಥರು ಎಂದು ಘೋಷಿಸಿ 1.65 ಕೋಟಿ ರೂ. ಜೊತೆಗೆ ಶೇ.12ರಷ್ಟು ಬಡ್ಡಿ ಸೇರಿಸಿ ಹಿಂತಿರುಗಿಸಬೇಕೆಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಚಾಂಡಿ ಅವರು ಆದೇಶ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.[ಸರಿತಾ, ಬಿಜುಗೆ ಮೂರು ವರ್ಷ ಜೈಲು!]
ಕುರುವಿಲ್ಲಾ ಪರ ವಕೀಲರು ಮತ್ತು ಚಾಂಡಿ ಪರ ವಕೀಲರ ನಡುವೆ ನಡೆದ ವಾದ -ಪ್ರತಿವಾದ ಆಲಿಸಿದ ನ್ಯಾಯಾಲಯ ಕೊನೆಗೆ ಸಲ್ಲಿಸಿರುವ ಅಫಿಡೆವಿಟ್ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಪ್ರತಿಕ್ರಿಯೆ ನೀಡುವಂತೆ ಕಾಲಾವಕಾಶ ನೀಡಿ ಜ.9ಕ್ಕೆ ವಿಚಾರಣೆಯನ್ನು ಮುಂದೂಡಿದೆ.












Click it and Unblock the Notifications