ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ: ಟೆಕ್ಕಿ ಸಾವು

ಬೆಂಗಳೂರು,ಜೂ.30: ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದು ಸಾಫ್ಟ್‌‌ವೇರ್‌ ಎಂಜಿನಿಯರ್‌ ಒಬ್ಬರು ಮೃತಪಟ್ಟ ಘಟನೆ ಎಲೆಕ್ಟ್ರಾನಿಕ್ಸ್‌ ಸಿಟಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇವರ ಜತೆ ಬೈಕ್‌‌ನಲ್ಲಿದ್ದ ಇವರ ಪತ್ನಿ ಮತ್ತು ಸಂಬಂಧಿಕರ ಮಗಳು ಗಾಯಗೊಂಡಿದ್ದಾರೆ.

ದೊಡ್ಡತೋಗುರು ನಿವಾಸಿ ರಾಕೇಶ್‌‌(30) ಮೃತಪಟ್ಟ ಸಾಫ್ಟ್‌‌ವೇರ್‌ ಉದ್ಯೋಗಿ. ರಾಕೇಶ್‌ ಪತ್ನಿ ಆಶಾ ಹಾಗೂ ಸಂಬಂಧಿಕರ 10 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

helmet
ಆಂಧ್ರ ಮೂಲದವಾರಾದ ರಾಕೇಶ್‌ ಶನಿವಾರ ರಾತ್ರಿ 11.30ಕ್ಕೆ ಪತ್ನಿ ಹಾಗೂ ಸಂಬಂಧಿಕರ ಪುತ್ರಿಯ ಜೊತೆಗೆ ಹೆಲ್ಮೆಟ್‌ ಧರಿಸದೇ ಬೈಕಿನಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ಪೆರೀನ ಆಗ್ರಹಾರದ ಬಳಿ ರಸ್ತೆ ದಾಟುತ್ತಿದ್ದ ಮುಖೇಶ್‌ ಪ್ರಸಾದ್‌ ಅವರನ್ನು ತಪ್ಪಿಸಲು ಹೋಗಿ ಕೂಡಲೇ ಬ್ರೇಕ್‌ ಹಾಕಿದ್ದಾರೆ. ಬ್ರೇಕ್‌ ಹಾಕಿದ ಕೂಡಲೇ ರಸ್ತೆ ವಿಭಜಕಕ್ಕೆ ಬೈಕ್‌‌ ಡಿಕ್ಕಿ ಹೊಡೆದು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ರಾಕೇಶ್‌ ಅವರ ತಲೆ ಡಿವೈಡರ್‌‌ನಲ್ಲಿದ್ದ ಕಬ್ಬಿಣದ ರಾಡ್‌ಗೆ ಬಡಿದು ಸ್ಥಳದಲ್ಲೇ ಮೃತಪಟ್ಟರು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಪಾದಾಚಾರಿ ಮುಖೇಶ್‌‌ ಪ್ರಸಾದ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+