ಸಂಬಳ ಕೊಡಲಿಲ್ಲ ಎಂದು ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿಬಿಡೋದಾ!

ಬೆಂಗಳೂರು, ಏ.9: ಸಂಬಳ ಕೊಡಲಿಲ್ಲ ಎಂದು ನೌಕರರು ಸಾಫ್ಟ್‌ವೇರ್ ಕಂಪನಿ ಮಾಲೀಕನನ್ನು ಅಪಹರಣ ಮಾಡಿರುವ ವಿಚಿತ್ರ ಘಟನೆ ಬೆಂಗಳೂರಲ್ಲಿ ನಡೆದಿದೆ. ನಗರ ಹಲಸೂರು ಸಮೀಪದ ಇನ್ಫೊಟೆಕ್ ಸಾಫ್ಟ್‌ ವೇರ್ ಕಂಪನಿ ಮಾಲೀಕ ಸುಜಯ್ ಎಂಬುವವರನ್ನು ನೌಕರರೇ ಅಪಹರಿಸಿದ್ದರು.

ಸುಜಯ್ ಕಳೆದ ಮೂರು ತಿಂಗಳಿನಿಂದ ಸಂಬಳ ನೀಡಿರಲಿಲ್ಲ ಹಾಗಾಗಿ ಸಂಬಳದ ಕುರಿತು ಮಾತನಾಡೋಣ ಎಂದು ಸುಜಯ್ ಅವರನ್ನು ಕರೆಸಿಕೊಂಡು ಅಲ್ಲಿಂದ ಅಪಹರಿಸಿದ್ದರು.

ಕೊನೆಗೆ ಬೆಂಗಳೂರಿನಿಂದ ಮದ್ದೂರಿಗೆ ಕರೆದೊಯ್ದು ಎಲ್ಲಿ ತೋಟದ ಮನೆಯೊಂದರಲ್ಲಿ ಇರಿಸಿದ್ದರು. ಇಷ್ಟೆಲ್ಲಾ ಆದ ಬಳಿಕ ನೌಕರರಿಗೆ ಸಂಬಳ ನೀಡುವುದಾಗಿ ಸುಜಯ್ ಭರವಸೆ ನೀಡಿದ್ದರಿಂದ ವಾಪಸ್ ಕಳುಹಿಸಿದ್ದಾರೆ.

Software employees kidnapped boss for not paying salary

ಆದರೆ ಮನೆಗೆ ಬಂದ ಸುಜಯ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಹರಣಕಾರರನ್ನು ಬಂಧಿಸಿದ್ದಾರೆ.ಆದರೆ ಇದೀಗ ಸುಜಯ್ ಆಸ್ಪತ್ರೆಯಿಂದಲೂ ಕಾಣೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+