ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಕಲುಷಿತ ಗಾಳಿ ಶುದ್ಧೀಕರಿಸಲಿದೆ ಈ ಯಂತ್ರ

|
Google Oneindia Kannada News

ಬೆಂಗಳೂರು, ಮಾರ್ಚ್ 28: ಮಲಿನಗಾಳಿಯನ್ನು ಶುದ್ಧೀಕರಿಸಲು ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ನಗರದ ಹಡ್ಸನ್ ವೃತ್ತದ ಬಳಿ ಇದನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ.

ನೂತನ್ ಲ್ಯಾಬ್ಸ್ ಕರ್ನಾಟಕ ಎಂಬ ಸ್ಟಾರ್ಟ್‌ ಅಪ್ ಕಂಪನಿ ಹೊಂಜು ಗೋಪುರ (Smog tower) ಅಭಿವೃದ್ಧಿಪಡಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯು ಇದಕ್ಕೆ ಸಹಕಾರ ನೀಡಿದೆ. ವಿದೇಶದಿಂದ ಈಗಾಗಲೇ ಯಂತ್ರಕ್ಕೆ ಬೇಡಿಕೆಯೂ ಬರುತ್ತಿದೆ.

ವಾಯು ಮಾಲಿನ್ಯ ವರದಿ: ದೊಡ್ಡ ನಗರಗಳೇ ಎಷ್ಟೋ ಉತ್ತಮ ವಾಯು ಮಾಲಿನ್ಯ ವರದಿ: ದೊಡ್ಡ ನಗರಗಳೇ ಎಷ್ಟೋ ಉತ್ತಮ

ಗೋಪುರ ಯಂತ್ರವು 15 ಅಡಿ ಎತ್ತರ, 6 ಅಡಿ ಸುತ್ತಳತೆ ಹೊಂದಿದೆ. ಯಂತ್ರ ಕಾರ್ಯ ನಿರ್ವಹಣೆ ಮಾಡಲು 11 ಕಿಲೋವಾಟ್ ಸಾಮರ್ಥ್ಯದ ವಿದ್ಯುತ್ ಬೇಕಾಗಿದೆ. ದಿನಕ್ಕೆ 10 ಗಂಟೆಗಳ ಕಾಲ ಯಂತ್ರವನ್ನು ಚಾಲನೆಯಲ್ಲಿಡಬೇಕು. ಗಂಟೆಗೆ 11 ಯೂನಿಟ್ ವಿದ್ಯುತ್ ಖರ್ಚಾಗಲಿದೆ.

ದೀಪಾವಳಿ; ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಕಡಿಮೆ ದೀಪಾವಳಿ; ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಕಡಿಮೆ

Smog Tower

ನೂತನ್ ಲ್ಯಾಬ್ಸ್ ಕರ್ನಾಟಕ ಸಿಇಓ ಎಚ್. ಎಸ್. ನೂತನ್ ಈ ಕುರಿತು ಮಾಹಿತಿ ನೀಡಿದ್ದಾರೆ. "ನ್ಯಾನೊ ತಂತ್ರಜ್ಞಾನದ ಆಧಾರದ ಮೇಲೆ ಈ ಗೋಪುರ ಕೆಲಸ ಮಾಡಲಿದೆ. ವಾತಾವರಣದ ಕಲುಷಿತ ಗಾಳಿಯನ್ನು ಹೀರಿಕೊಂಡು ನ್ಯಾನೊ ಕಣಗಳ ಮೂಲಕ ಹಾಯಿಸುತ್ತದೆ" ಎಂದರು.

ಬೆಂಗಳೂರು: ದಾಖಲೆ ಮಟ್ಟಕ್ಕೆ ಕುಸಿತಕಂಡ ವಾಯು ಮಾಲಿನ್ಯ ಬೆಂಗಳೂರು: ದಾಖಲೆ ಮಟ್ಟಕ್ಕೆ ಕುಸಿತಕಂಡ ವಾಯು ಮಾಲಿನ್ಯ

"ಈ ಯಂತ್ರವನ್ನು ಸ್ಥಾಪನೆ ಮಾಡಿದ ಬಳಿಕ ಈ ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ಶೇ 90ರಷ್ಟು ಕಡಿಮೆಯಾಗಿದೆ. ಒಟ್ಟು 11 ಹಂತಗಳಲ್ಲಿ ಇದು ಕಾರ್ಯ ನಿರ್ವಹಣೆ ಮಾಡಲಿದೆ. ಸಣ್ಣ ದೂಳಿನ ಕಣ, ಗಾಳಿಯಲ್ಲಿನ ವಿಷಯುಕ್ತ ಅನಿಲ ಸೇರಿದಂತೆ ಅಪಾಯಕಾರಿ ಅಂಶಗಳನ್ನು ಹೀರಿಕೊಂಡು ಶುದ್ಧಗಾಳಿಯನ್ನು ನೀಡಲಿದೆ" ಎಂದು ಹೇಳಿದ್ದಾರೆ.

"ಈ ಯಂತ್ರದ ನಿರ್ವಹಣೆಗೆ ಬಿಬಿಎಂಪಿ ವಿದ್ಯುತ್ ನೀಡಬೇಕು. ವಾರಕ್ಕೊಮ್ಮೆ ಯಂತ್ರದಲ್ಲಿ ಸಂಗ್ರಹವಾದ ಕಣಗಳನ್ನು ತೆರವುಮಾಡಬೇಕು. ಬಿಬಿಎಂಪಿ ಈ ಯಂತ್ರವನ್ನು ಖರೀದಿ ಮಾಡಿದರೆ ನಮ್ಮ ಸಂಸ್ಥೆ 5 ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ" ಎಂದು ಎಚ್. ಎಸ್. ನೂತನ್ ತಿಳಿಸಿದರು.

tower

Recommended Video

ಯಡಿಯೂರಪ್ಪನನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | Oneindia Kannada

ಈ ಯಂತ್ರ ಹೀರಿಕೊಂಡ ಕಣಗಳನ್ನು ಕೃಷಿಯಲ್ಲಿ ಮಣ್ಣಿಗೆ ಪೋಷಕಾಂಶಗಳಾಗಿ ಬಳಕೆ ಮಾಡಬಹುದಾಗಿದೆ. ಇದನ್ನು ಒಣಗಿಸಿ ಹೆಂಚು ತಯಾರಿಕೆಯಲ್ಲಿಯೂ ಬಳಕೆ ಮಾಡಬಹುದಾಗಿದೆ. ಈ ಯಂತ್ರದ ದರ ಸುಮಾರು 60 ಲಕ್ಷ ರೂ.ಗಳು.

English summary
Smog Tower installed in Hudson circle near Bruhat Bengaluru Mahanagara Palike office, Bengaluru. Nano technology-based air purification system developed by start up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X