ಗಾಲಿ ರೆಡ್ಡಿ ಆಪ್ತ ಮೆಹಫೂಜ್ ಅಲಿಗೂ ನ್ಯಾಯಾಂಗ ಬಂಧನ
ಬೆಂಗಳೂರು, ನ.22: ಅಕ್ರಮ ಗಣಿಗಾರಿಕೆ ಹಾಗೂ ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಮೆಹಫೂಜ್ ಅಲಿ ಖಾನ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಲಿ ಖಾನ್ ಗೆ ನ.27ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಳ್ಳಾರಿ ವನಹಳ್ಳಿಯಲ್ಲಿ ಬ್ಲ್ಯಾಕ್ ಗೋಲ್ಡ್ ಮೈನ್ಸ್ ಹಾಗೂ ಮಿನರಲ್ಸ್ ಸಂಸ್ಥೆ ಗಣಿಗಾರಿಕೆ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ. ಅದರೆ, ಇದೇ ಕಂಪನಿ ಮೂಲಕ ಅಕ್ರಮವಾಗಿ ಅದಿರು ರಫ್ತು ಮಾಡಲಾಗಿದೆ. [ರೆಡ್ಡಿ ಅರೆಸ್ಟ್, ಸಿದ್ದು ಸರ್ಕಾರ ವಿರುದ್ಧ ಸೋಮಶೇಖರ್ ಗರಂ]

ಇದೆಲ್ಲವನ್ನು ಅಲಿಖಾನ್ ನೋಡಿಕೊಂಡಿದ್ದಾನೆ ಎಂದು ನಿಕಟಪೂರ್ವ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವರು ನೀಡಿದ ಅಕ್ರಮ ಗಣಿಗಾರಿಕೆ ಕುರಿತ ಎರಡನೇ ವರದಿಯಲ್ಲಿ ಹೇಳಲಾಗಿದೆ. [ತೆರಿಗೆ ಬಾಕಿ: ಲಾಡ್ ಗಣಿ ಕಂಪನಿ ಮೊತ್ತವೇ ಅಧಿಕ!]
ಲೋಕಾಯುಕ್ತ ವರದಿ ಆಧಾರದ ಮೇಲೆ ಮತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ ಐಟಿ ಮುಖ್ಯಸ್ಥ ಚರಣ್ ರೆಡ್ಡಿ ಅವರು ಲೋಕಾಯುಕ್ತ ಕೋರ್ಟಿಗೆ ಹೇಳಿದ್ದಾರೆ.[ಗಾಲಿ ರೆಡ್ಡಿಗೆ ಜಾಮೀನು, ಬಳ್ಳಾರಿಯಲ್ಲಿ ಸಂಭ್ರಮವೋ ಸಂಭ್ರಮ]
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಹಾಗೂ ಅಲಿ ಖಾನ್ ಅವರ ವಿಚಾರಣೆಯ ಮೊದಲ ಹಂತ ಮುಗಿದಿದೆ. ಸದ್ಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನ.23ರ ತನಕ ರೆಡ್ಡಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಅಗತ್ಯ ಬಿದ್ದರೆ ಹೆಚ್ಚಿನ ವಿಚಾರಣೆಗಾಗಿ ಗಾಲಿ ರೆಡ್ಡಿ ಹಾಗೂ ಅಲಿ ಖಾನ್ ರನ್ನು ವಶಕ್ಕೆ ಪಡೆದು ಮತ್ತೆ ವಿಚಾರಣೆ ನಡೆಸಲಾಗುತ್ತದೆ ಎಂದು ಎಸ್ ಐಟಿ ಅಧಿಕಾರಿ ಚರಣ್ ರೆಡ್ಡಿ ಹೇಳಿದರು.












Click it and Unblock the Notifications