‘ಉದ್ಯಮದಲ್ಲಿ ಸಾಮಾಜಿಕ ಕಳಕಳಿ ಕೂಡ ಮೂಡಬೇಕಿದೆ’
ಸಮಾಜದಲ್ಲಿ ಉದ್ಯಮಿಗಳು ಉದ್ಯಮದ ಜೊತೆಗೆ ಸಾಮಾಜಿಕ ಕಳಕಳಿ ಕೂಡ ಬೆಳೆಸಿಕೊಳ್ಳಬೇಕು ಆ ಮೂಲಕ, ನಮ್ಮ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಮಠದ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿಗಳು ಪ್ರತಿಪಾದನೆ ಮಾಡಿದರು. ಹೀಗೆ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಉದ್ಯಮಿಗಳ ಪಾತ್ರವೂ ಮುಖ್ಯ ಎಂದರು.
ಅಂದಹಾಗೆ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ಬ್ಯಾಟರಾಯನಪುರದಲ್ಲಿ ವಾಣಿಜ್ಯ ಉದ್ದೇಶಕ್ಕೆ ನಿರ್ಮಿಸಿರುವ ಸೂರ್ಯ ಹೈಟ್ಸ್ ಕಟ್ಟಡವನ್ನು, ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಮಠದ ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿಗಳು ಉದ್ಘಾಟನೆ ಮಾಡಿ ಮಾತನಾಡಿದರು. ಈ ವೇಳೆ ಉದ್ಯಮ ವಲಯಕ್ಕೆ ಸಲಹೆ ನೀಡಿದರು. ಈ ಕಟ್ಟಡ ನಿರ್ಮಿಸಿರುವ ವಿಶ್ವನಾಥ ಕೇವಲ ಸ್ವಲಾಭವನ್ನು ಮಾತ್ರ ಯೋಚಿಸದೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮುಂದಿನ ಎಲ್ಲಾ ಯೋಜನೆ ಯಶಸ್ವಿ ಆಗಲಿ ಮತ್ತು ಅವರಿಂದ ಇನ್ನಷ್ಟು ಉತ್ತಮ ಕೆಲಸಗಳೂ ಸಮಾಜಕ್ಕೆ ಆಗಲಿ ಎಂದು ಹಾರೈಸಿದರು.

ಲಾಭದ ಜೊತೆಗೆ ವಿಶ್ವಾಸರ್ಹತೆ
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಲಾಭದ ಜೊತೆಗೆ ವಿಶ್ವಾಸರ್ಹತೆ ಗಳಿಸಿದರೆ ಮೌಲ್ಯ ಹೆಚ್ಚಾಗುತ್ತೆ. ಅದನ್ನು ಸೂರ್ಯ ಹೈಟ್ಸ್ ನ ವಿಶ್ವನಾಥ ಸಾಧಿಸಿ ತೋರಿಸಿದ್ದಾರೆ. ಸಮುದಾಯ ಆರೋಗ್ಯ ಸುಧಾರಿಸುವ ಆಸ್ಪತ್ರೆಗೆ ಕಟ್ಟಡ ನಿರ್ಮಿಸಿ ಕೊಡುತ್ತಾ ಇರುವ ಅವರ ಕಾರ್ಯ ನಿಜಕ್ಕೂ ಪ್ರಶಂಸನಾರ್ಹ. ನಿಮ್ಮ ಪ್ರಯತ್ನಗಳಲ್ಲಿ ಪ್ರಾಮಾಣಿಕತೆ ಇದೆ ನಿಮ್ಮ ಬೆಳವಣಿಗೆ ಆ ಸೂರ್ಯನಷ್ಟೇ ಎತ್ತರಕ್ಕೆ ಕೂಡ ಬೆಳೆಯಲಿ. ಇಂತಹ ಉತ್ತಮ ಕಾರ್ಯಕ್ಕೆ ಶ್ರೀಗಳು ಆಶೀರ್ವಾದ ಮಾಡಿರುವುದು ಮತ್ತೊಂದು ಶುಭ ಸಂಕೇತ ಎಂದರು.
ಬೆಂಗಳೂರಿನಲ್ಲಿ ನೂರೆಂಟು ಅವಕಾಶ
ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ಅವರು ಇದೇ ವೇಳೆ ಮಾತನಾಡಿ, ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ ಆ ಮೂಲಕ ನೂರೆಂಟು ಅವಕಾಶ ತೆರೆದಿಡುತ್ತಿದೆ. ಈ ಅವಕಾಶವೇ ಇಂದು ಈ ಕಟ್ಟಡ ಎದ್ದು ನಿಲ್ಲಲು ಕಾರಣವು ಆಗಿದೆ. ಒಂದು ಕಟ್ಟಡದ ನಿರ್ಮಾಣದ ಹಿಂದೆ ಅನೇಕರ ಶ್ರಮ ಇರುತ್ತದೆ. ಆ ಮೂಲಕ ಅಷ್ಟು ಜನಕ್ಕೂ ಉದ್ಯೋಗಕ್ಕೆ ಅವಕಾಶವಾಗಿದೆ. ಇದೊಂದು ಅತ್ಯುತ್ತಮ ಪ್ರಯತ್ನ ಎಂದರು.

ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ರಿಯಾಯಿತಿ
ಇನ್ನು ಸೂರ್ಯ ಡೆವಲಪರ್ಸ್ ಸಂಸ್ಥಾಪಕ & ವ್ಯವಸ್ಥಾಪಕ ಪಾಲುದಾರರಾದ ವಿಶ್ವನಾಥ್ ಬಾತಿ ಅವರು ಮಾತನಾಡಿ, ಮೌಲ್ಯ ಮತ್ತು ಬದ್ಧತೆಯ ಜೊತೆಯಲ್ಲಿ ಈ ಉದ್ಯಮ ಆರಂಭಿಸಿದ್ದೇನೆ. ನಮ್ಮ ವಿಲ್ಲಾಗಳನ್ನು ಬುಕ್ ಮಾಡಿಕೊಳ್ಳುವ ಆರ್ಮಿ ಹಾಗೂ ಏರ್ ಫೋರ್ಸ್ ಅಧಿಕಾರಿಗಳಿಗೆ ನೋಂದಣಿಯಲ್ಲಿ, ವಿಶೇಷ ರಿಯಾಯಿತಿ ಕೊಡುವ ನಿರ್ಧಾರ ಕೂಡ ಮಾಡಿದ್ದೀವಿ. ಸೂರ್ಯ ಡೆವಲಪರ್ಸ್ ಸದಾ ಸಮಾಜಮುಖಿ ಆಗಿ ಕಾರ್ಯ ನಿರ್ವಹಿಸುವುದಕ್ಕೆ ಬದ್ಧವಾಗಿರುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಸೇರಿದಂತೆ, ಮಾಜಿ ಸಚಿವರಾದ ಬೈರತಿ ಸುರೇಶ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು.












Click it and Unblock the Notifications