'ಸಿರಿಗಂಧ' - ಇನ್ಫೋಸಿಸ್ ಬೆಂಗಳೂರು ಕೇಂದ್ರದ ಬೆಸ್ಟ್ ವಾಲಂಟೀರ್ ಕ್ಲಬ್
ನಮ್ಮೆಲ್ಲರಿಗೂ ತುಂಬ ಖುಷಿಯ ಹಾಗೂ ಹೆಮ್ಮೆಯ ಸಂಗತಿ ಇದು. ನಮ್ಮ ಸಾಫ್ಟ್ ಮನಸುಗಳ ಕನ್ನಡ ಕಲರವ "ಸಿರಿಗಂಧ" ಸತತ ಎರಡನೇ ವರ್ಷ ಇನ್ಫೋಸಿಸ್ ಬೆಂಗಳೂರು ಕೇಂದ್ರದ ಬೆಸ್ಟ್ ವಾಲಂಟೀರ್ ಕ್ಲಬ್ ಆಗಿ ಹೊರಹೊಮ್ಮಿದೆ.
ಇದು ಸಾಧ್ಯವಾಗಿರುವುದು ಎಲ್ಲಾ ಸ್ವಯಂಸೇವಕರ ಸಿರಿಗಂಧದ ಬಗೆಗಿನ, ಕನ್ನಡದ ಬಗೆಗಿನ ಪ್ರೀತಿ, ಕಾಳಜಿ, ಬದ್ಧತೆ ಹಾಗೂ ನಿಸ್ವಾರ್ಥ ಪಾಲ್ಗೊಳ್ಳುವಿಕೆಯಿಂದ. ನಿಮ್ಮೆಲ್ಲರಿಗೆ ಅತ್ಯಂತ ಪ್ರೀತಿಯ ವಂದನೆಗಳು. ನಮ್ಮ ಸಿರಿಗಂಧ ಸದಾಕಾಲ ಬೆಸ್ಟ್ ಕ್ಲಬ್ ಆಗಿಯೇ ಇರುವಂತೆ ಕೆಲಸ ಮಾಡೋಣ, ಮಾಡುತ್ತಿರೋಣ.
ನಮ್ಮ ಉತ್ಸಾಹ, ಬದ್ಧತೆ ಸದಾಕಾಲ ಹೀಗೆಯೇ ಇರಲಿ. ಸಿರಿಗಂಧ ಬೆಳಗುತ್ತಿರಲಿ. ನಿಮ್ಮೆಲ್ಲರಿಗೂ ಹೃದಯಪೂರ್ವಕ ವಂದನೆಗಳು. ಸಿರಿಗಂಧಕ್ಕಾಗಿ ತುಡಿಯುವ, ದುಡಿಯುವ ಪ್ರತಿಯೊಬ್ಬರಿಗೂ ಈ ಅವಾರ್ಡ್ ಅರ್ಪಣೆ. ಇದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲಿ.

ಇಂದು ಸಿರಿಗಂಧದ ಪರವಾಗಿ ವಿನಯ್ ಕುಮಾರ್, ರಕ್ಷಿತ್ ರಕ್ಷಾ, ರಶ್ಮಿ ಕಶ್ಯಪ್, ನವೀನ್ ನಾಯಕ್, ಕಾರ್ತಿಕ್ ಶೆಟ್ಟರ್, ಶಿಲ್ಪಾ ಸಾ, ಶಾಗರ್ ಕುಮ್ಮನ್ ಗೋಪಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅವರಿಗೆ ಅಭಿನಂದನೆಗಳು.
ಸಿರಿಗಂಧವನ್ನು ಇಷ್ಟು ಸಶಕ್ತವಾಗಿ ಕಟ್ಟಿ ಬೆಳೆಸುವಲ್ಲಿ ನೂರಾರು ಜನರ ಪಾಲಿದೆ. ಕಳೆದ 13-14 ವರ್ಷಗಳಲ್ಲಿ ಸಿರಿಗಂಧವನ್ನು ಬೆಳೆಸಲು ಅದೆಷ್ಟೋ ಜನ ನಿಸ್ವಾರ್ಥವಾಗಿ ಶ್ರಮಿಸಿದ್ದಾರೆ.
ಅನೇಕ ಜನ ಇಂದು ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಖಂಡಿತಾ ಅವರೆಲ್ಲರೂ ಮಾನಸಿಕವಾಗಿ ನಮ್ಮೊಂದಿಗಿದ್ದಾರೆ ಮತ್ತು ಸಿರಿಗಂಧದ ಯಶಸ್ಸನ್ನು ಅವರು ಸದಾಕಾಲ ಸಂಭ್ರಮಿಸುತ್ತಾರೆ. ಹಿಂದೆ, ಇಂದು, ಮುಂದೂ ಸಿರಿಗಂಧದ ಬೆನ್ನೆಲುಬಾಗಿ ಈ ಬಳಗವನ್ನು ಬೆಳೆಸುತ್ತಿರುವ, ಬೆಳಗುತ್ತಿರುವ ಆ ಎಲ್ಲಾ ಸಹೃದಯೀ ಮನಸುಗಳಿಗೆ ಈ ಅವಾರ್ಡ್ ಅರ್ಪಣೆ.
ಇನ್ನೆರಡು ಕೆಟಗರಿಗಳಲ್ಲಿ ಅವಾರ್ಡ್ ಬರದಿದ್ರೂ ಎಲ್ಲಾ ಸ್ವಯಂಸೇವಕರ ಬದ್ಧತೆ ಹಾಗೂ ಡೆಡಿಕೇಶನ್ ಶ್ಲಾಘನೀಯ. "ಕನ್ನಡ ಕಲಿ"ಯಂತಹ ಇನಿಷಿಯೇಟೀವ್, ಲಾನ್ ಡೆಕೋರೇಷನ್ ನಂತಹ ಕ್ರಿಯಾಶೀಲ ಚಟುವಟಿಕೆಗಳು ನಮ್ಮ ಬಳಗದ ಹೆಮ್ಮೆ. ಅದನ್ನು ಮತ್ಯಾರೂ ಮಾಡಲು ಸುಲಭವಲ್ಲ ಮತ್ತು ಸಿರಿಗಂಧವೊಂದೇ ಅದನ್ನು ಮಾಡಲು ಸಾಧ್ಯ. ಹಾಗಾಗಿ ಪ್ರಶಸ್ತಿ ಬಂದರೂ ಬಂದಿರದಿದ್ದರೂ ಸಿರಿಗಂಧ ಯಾವತ್ತಿಗೂ ಬೆಸ್ಟ್ ಕ್ಲಬ್.
ಇಂತಹದೊಂದು ಬಳಗದ ಭಾಗವಾಗಿರುವುದಕ್ಕೆ ನಾನು ಸದಾ ಹೆಮ್ಮೆಪಡುತ್ತೇನೆ. ನಮಗೆ ನಮ್ಮ ಬಳಗಕ್ಕೆ ಇಂದು ಸಂದಿರುವ ಪ್ರಶಸ್ತಿ ಇಡೀ ಸಿರಿಗಂಧಕ್ಕೆ ಸಿಕ್ಕ ಗೌರವ. ಹಾಗಾಗಿ ಸಿರಿಗಂಧದ ಎಲ್ಲ ಸ್ವಯಂಸೇವಕರಿಗೆ ಇದು ಅರ್ಪಣೆ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.
ಸಿರಿಗಂಧವನ್ನು ಯಾವತ್ತೂ ಬೆಸ್ಟ್ ಕ್ಲಬ್ ಆಗಿಯೇ ಇಡುವ ಸಂಕಲ್ಪ ಮಾಡೋಣ. ಹತ್ತನೇ ವರ್ಷದ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಅಭೂತಪೂರ್ವವಾಗಿ ಮಾಡುವ ಸಂಕಲ್ಪ ಮಾಡೋಣ. ಈ ಅವಾರ್ಡ್ ಅದಕ್ಕೆ ಮುನ್ನುಡಿಯಾಗಲಿ.
ಸಿರಿಗಂಧಂ ಗೆಲ್ಗೆ! ಸಿರಿಗನ್ನಡಂ ಗೆಲ್ಗೆ!












Click it and Unblock the Notifications