Bengaluru Traffic: ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಓಡಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ
ಬೆಂಗಳೂರು, ಸೆಪ್ಟಂಬರ್ 25: ರಾಜ್ಯ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ (Bengaluru Traffi Jam) ವಿಶ್ವಮಟ್ಟದಲ್ಲೇ ಪ್ರಸಿದ್ಧಿ ಪಡೆದಿದೆ. ನಗರದ ಟ್ರಾಫಿಕ್‌ಗೆ ಹಾಟ್ ಆಫ್ ದಿ ಮದರ್ ಅಂತಲೇ ಹೇಳುವ ಸಿಲ್ಕ ಬೋರ್ಡ್ ಜಂಕ್ಷನ್‌ನಲ್ಲಿ ಶೇಕಡಾ 50ರಷ್ಟು ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಆಗಿದೆ ಎಂದು ಸಂಚಾರಿ ಪೊಲೀಸರು ಖುದ್ದು ಮಾಹಿತಿ ನೀಡಿದ್ದಾರೆ.
ಹೌದು, ರಾಗಿಗುಡ್ಡ ಪ್ರಸನ್ನಾಂಜನೇಯ ಮೆಟ್ರೋ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ತೆರಳುವ ರಸ್ತೆಯು ಸಿಲ್ಕ ಬೋರ್ಡ ಜಂಕ್ಷನ್ ಮೇಲೆಯೇ ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಿದ್ದು, ಅದನ್ನು ಇದೇ ವರ್ಷ ಜುಲೈ ತಿಂಗಳಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.

ಡಬಲ್ ಡೆಕ್ಕರ್ ಫ್ಲೈಓವರ್ ಮುಕ್ತಗೊಂಡ ಬಳಿಕ ಸಿಲ್ಕ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಅರ್ಧದಷ್ಟು ಕಡಿಮೆ ಆಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ (ಸಂಚಾರ) ಕುಲದೀಪ್ ಕುಮಾರ್ ಜೈನ್ ಅವರು ಮಾಹಿತಿ ನೀಡಿದ್ದಾರೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಆಯೋಜಿಸಿದ್ದ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಡಿಸಿಪಿ ಈ ಕುರಿತು ಮಾತನಾಡಿದ್ದಾರೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಈ ಫ್ಲೈಓವರ್‌ನಿಂದ ಜಂಕ್ಷನ್‌ನಲ್ಲಿ ತಗ್ಗಿದ ಟ್ರಾಫಿಕ್
ಕಳೆದ ಜುಲೈ 18ರಂದು ನಮ್ಮ ಮೆಟ್ರೋ ಹಳದಿ ಮೆಟ್ರೋ ಮಾರ್ಗಕ್ಕೆ ವಯಡಕ್ಟ್‌ಗೆ ಹೊಂದಿಕೊಂಡಿರುವ ಡಬಲ್ ಡೆಕ್ಕರ್ ಫ್ಲೈಓವರ್ ಒಂದು ಬದಿಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಅದಾದ ಬಳಿಕ ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ಮೊದಲಿನಷ್ಟು ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಕಂಡು ಬರುತ್ತಿಲ್ಲ. ಬಹುತೇಕ ಸುಮಾರು 50ರಷ್ಟು ದಟ್ಟಣೆ ಇಳಿಕೆ ಆಗಿದೆ ಎಂದು ಅವರು ಖಚಿತ ಪಡಿಸಿದ್ದಾರೆ.
ಮೂಲಗಳ ಪ್ರಕಾರ, ಈ ಡಬಲ್ ಡೆಕ್ಕರ್ ಫ್ಲೈಓವರ್ ಕಾರ್ಯಾಚರಣೆ ಮುನ್ನ ಜುಲೈ 12-17ರ ಒಂದು ಮತ್ತು ನಂತರದ ಒಂದುವಾರ ಜುಲೈ 18-23 ಹಾಗೂ ಫ್ಲೈಓವರ್ ಕಾರ್ಯಾಚರಣೆ ಆರಂಭವಾದ ಬಳಿಕ ಸೆಪ್ಟೆಂಬರ್ 5-10 ರವರೆಗೆ ದಟ್ಟಣೆ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿರುವ ಮಾಹಿತಿ ಸಂಗ್ರಹಿಸಲಾಗಿದೆ.
ಕ್ರಮಿಸಬೇಕಾದ ದೂರ, ಸಮಯ ಉಳಿತಾಯ
ಸದಾ ವಾಹನಗಳ ದಟ್ಟಣೆ, ಸಿಗ್ನಲ್ ಮತ್ತು ಹಾರ್ನ್‌ಗಳ ಸದ್ದು ಕೇಳುತ್ತಿದ್ದ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ತಕ್ಕ ಮಟ್ಟಿನ ಬದಲಾವಣೆ ಆಗಿದೆ. ಅಲ್ಲದೇ ಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಬಳಿಕ ಸಂಚಾರ ಉದ್ದ 19 ಕಿಲೋ ಮೀಟರ್‌ನಿಂದ 10 ಕಿಲೋ ಮೀಟರ್‌ಗೆ ಇಳಿಕೆ ಆಗಿದೆ. ಇದರಿಂದ ಸಮಯವು ಉಳಿತಾಯವಾಗುತ್ತಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದರು.
ಪೀಕ್ ಸಮಯದಲ್ಲಿ ಶೇ.56ರಷ್ಟು ದಟ್ಟಣೆ ಇಳಿಕೆ
ಇನ್ನೂ ವಿವರವಾಗಿ ನೋಡುವುದಾದರೆ, ಈ ಜಂಕ್ಷನ್‌ನಲ್ಲಿ ಪೀಕ್ ಸಮಯದಲ್ಲಿ ಬೆಳಗ್ಗೆ 8 ಗಂಟೆಯಿಂದ 12 ಗಂಟೆ ಅವಧಿಯಲ್ಲಿ ಶೇಕಡಾ 42ರಷ್ಟು ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 11ವರೆಗಿನ ಪೀಕ್ ಸಮಯದಲ್ಲಿ ಶೇಕಡಾ 45ರಷ್ಟು ಸಂಚಾರ ದಟ್ಟಣೆ ಕಡಿಮೆ ಆಗಿದೆ. ಈ ಜಂಕ್ಷನ್ ಹೊರತಾಗಿ ರಾಗಿಗುಡ್ಡ ಪ್ರಸನ್ನಾಂಜನೇಯ ಮತ್ತು ಸಿಲ್ಕ್ ಬೋರ್ಡ್ ಮಧ್ಯೆ ಬರೋಬ್ಬರಿ ಶೇಕಡಾ 56ರಷ್ಟು ಸಂಚಾರ ದಟ್ಟಣೆ ಇಳಿಕೆ ಆಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಸಂಚಾರಿ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.
ಡಬಲ್ ಡೆಕ್ಕರ್ ಮೇಲ್ಸೇತುವೆಯಿಂದಾಗಿ ಜೆಪಿ ನಗರ, ಜಯನಗರ, ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ಎಚ್‌ಎಸ್‌ಆರ್ ಬಡಾವಣೆ, ರಾಗಿಗುಡ್ಡ ಪ್ರಸನ್ನಾಂಜನೇಯ ಸೇರಿ ವಿವಿಧ ಕಡೆಗೆ ತೆರಳುವ ಮತ್ತು ಅಲ್ಲಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗಿದೆ..












Click it and Unblock the Notifications