BMTC ನೌಕರರಿಗೆ ಭರ್ಜರಿ ಗುಡ್ ನ್ಯೂಸ್: 1 ಕೋಟಿ ರೂ. ಅಪಘಾತ ವಿಮೆ, ವೈದ್ಯಕೀಯ ನೆರವು! ಯಾರು ಅರ್ಹರು?

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ತನ್ನ ನೌಕರರಿಗೆ ದೀಪಾವಳಿ ಹಬ್ಬದ ಹೊಸ್ತಿಲಲ್ಲಿ ಭರ್ಜರಿ ಸಿಹಿಸುದ್ದಿಯೊಂದನ್ನ ನೀಡಿದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ನಗರದಲ್ಲಿ ಸೇವೆ ಸಲ್ಲಿಸುವ ತನ್ನ ಚಾಲಕರು ಹಾಗೂ ನಿರ್ವಾಹಕರ ಆರ್ಥಿಕ ಭದ್ರತೆಯ ಹಿತದೃಷ್ಟಿಯಿಂದ, ಬಿಎಂಟಿಸಿ ಅಪಘಾತ ವಿಮಾ ಪರಿಹಾರವನ್ನ ಹೆಚ್ಚಿಸಿದೆ.

ಹೌದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗಿನ ಒಪ್ಪಂದವನ್ನ ಬಿಎಂಟಿಸಿ ಇದೀಗ ಮರು ನವೀಕರಣ ಮಾಡಿದೆ. ಈ ಮೊದಲು ನೌಕರರಿಗೆ 50 ಲಕ್ಷ ರೂ. ಗಳಿದ್ದ ಅಪಘಾತ ವಿಮಾ ರಕ್ಷಣೆಯನ್ನ ಈಗ ಬರೋಬ್ಬರಿ 1 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

SIlicon City BMTC Employees Get Rs 1 Crore Accident Insurance Cover from Union Bank of India Details

ಅಕ್ಟೋಬರ್ 8ರಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ ಮೂರ್ತಿ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಎಚ್.ಟಿ. ವಾಸಪ್ಪ ಅವರು ಈ ಪರಿಷ್ಕೃತ ಮೂರು ವರ್ಷಗಳ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ್ದಾರೆ.

1 ಕೋಟಿ ರೂ. ಬಿಎಂಟಿಸಿ ನೌಕರರ ವಿಮೆ ಯಾರಿಗೆ ಲಭ್ಯ?

ಈ ನೂತನ ವಿಮಾ ಸೌಲಭ್ಯವು ಎಲ್ಲಾ ನೌಕರರಿಗೆ ನೇರವಾಗಿ ಅನ್ವಯವಾಗುವುದಿಲ್ಲ. ಬದಲಾಗಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ಅಧಿಕೃತ ಸಂಬಳದ ಖಾತೆಯನ್ನ ಹೊಂದಿರುವ ಬಿಎಂಟಿಸಿ ಸಿಬ್ಬಂದಿಗೆ ಮಾತ್ರ ಈ ಬೃಹತ್ ಮೊತ್ತದ ವಿಮಾ ರಕ್ಷಣೆ ದೊರೆಯಲಿದೆ.

ಕರ್ತವ್ಯದ ಮೇಲಿದ್ದಾಗ ಅಥವಾ ಇತರ ಸಮಯದಲ್ಲಿ ಅಪಘಾತ ಸಂಭವಿಸಿ ನೌಕರರು ದುರಾದೃಷ್ಟವಶಾತ್ ಮೃತಪಟ್ಟರೆ, ಅವರ ಕುಟುಂಬಕ್ಕೆ 1 ಕೋಟಿ ರೂ.ಗಳ ಪರಿಹಾರ ಸಿಗಲಿದೆ.

ಸಹಜ ಸಾವು ಹಾಗೂ ಅಂಗವೈಕಲ್ಯಕ್ಕೆ ಏನು ಪರಿಹಾರ?

ಬರೀ ಅಪಘಾತ ಮಾತ್ರವಲ್ಲದೆ, ನೈಸರ್ಗಿಕವಾಗಿ ಅಥವಾ ಇತರ ಯಾವುದೇ ಆರೋಗ್ಯ ಸಮಸ್ಯೆಗಳಿಂದ ನೌಕರರು ಮೃತಪಟ್ಟರೂ ಈ ಒಪ್ಪಂದದ ಅಡಿಯಲ್ಲಿ ಪರಿಹಾರ ಒದಗಿಸಲಾಗುತ್ತದೆ. ಈ ಪರಿಹಾರದ ಮೊತ್ತವನ್ನ ನೌಕರರ ಮಾಸಿಕ ವೇತನದ ಆಧಾರದ ಮೇಲೆ ನಿಗದಿಪಡಿಸಲಾಗಿದೆ.

ತಿಂಗಳಿಗೆ 25,000 ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವ ನೌಕರರ ಸಾವಿಗೆ 5 ಲಕ್ಷ ರೂ. ಹಾಗೂ 25,000 ರೂ.ಗಳಿಗಿಂತ ಹೆಚ್ಚು ಆದಾಯ ಪಡೆಯುವವರ ಸಾವಿಗೆ 10 ಲಕ್ಷ ರೂ. ಪರಿಹಾರ ಲಭ್ಯವಿದೆ.

ಇದೇ ವೇಳೆ, ಅಪಘಾತದಿಂದಾಗಿ ನೌಕರರು ಶಾಶ್ವತವಾಗಿ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ, ಅಂತಹ ಸಂದರ್ಭದಲ್ಲೂ 1 ಕೋಟಿ ರೂ.ವರೆಗೆ ವಿಮಾ ರಕ್ಷಣೆ ಸಿಗಲಿದೆ. ಇದು ನೌಕರರ ಭವಿಷ್ಯಕ್ಕೆ ದೊಡ್ಡ ಮಟ್ಟದ ಆರ್ಥಿಕ ಆಸರೆಯಾಗಲಿದೆ.

ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಹಾಗೂ ವೈದ್ಯಕೀಯ ನೆರವು

ಈ ವಿಮಾ ಒಪ್ಪಂದದ ಜೊತೆಗೆ, ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಹೊಂದಿರುವ ನೌಕರರಿಗೆ ಹೆಚ್ಚುವರಿ ಪರಿಹಾರವೂ ಸಿಗಲಿದೆ. 25,000 ರೂ.ಗಿಂತ ಕಡಿಮೆ ಸಂಬಳ ಪಡೆಯುವವರಿಗೆ 4 ಲಕ್ಷ ರೂ. ಹಾಗೂ 25,000 ರೂ.ಗಿಂತ ಹೆಚ್ಚು ಸಂಬಳ ಪಡೆಯುವವರಿಗೆ 15 ಲಕ್ಷ ರೂ.ಗಳ ಹೆಚ್ಚುವರಿ ವಿಮಾ-ಸಂಬಂಧಿತ ಪ್ರಯೋಜನಗಳು ಲಭ್ಯವಾಗಲಿವೆ.

ಉಚಿತ ವಿಮೆಯ ಜೊತೆಗೆ, ನೌಕರರು ಅನಾರೋಗ್ಯದ ಕಾರಣದಿಂದ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ, ಅವರಿಗೆ ಪ್ರತಿ ವರ್ಷ ಗರಿಷ್ಠ 30,000 ರೂ.ಗಳವರೆಗೆ ವೈದ್ಯಕೀಯ ನೆರವು ಪಡೆಯಲು ಅರ್ಹತೆ ಇರುತ್ತದೆ.

2023ರಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಮುಂದುವರಿದ ಭಾಗವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಬೆಂಗಳೂರಿನ ಟ್ರಾಫಿಕ್‌ನಲ್ಲಿ ಹಗಲಿರುಳು ಶ್ರಮಿಸುವ ಬಿಎಂಟಿಸಿ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಇದು ಭಾರಿ ಆರ್ಥಿಕ ಭದ್ರತೆಯನ್ನ ಒದಗಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+